ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕಾಂತಾರ ಚಿತ್ರಕ್ಕೆ ಐತಿಹಾಸಿಕ ಕೊಡಲಿ ನೀಡಲು ಮುಂದಾದ ಕಾಸರಗೋಡಿನ ರಾಜಮನೆತನ

ಕಾಂತಾರ ಪ್ರೀಕ್ವೆಲ್ ಭಾರಿ ಕುತೂಹಲ ಮೂಡಿಸಿದೆ. ಈಗಾಗಲೇ ಚಿತ್ರಕ್ಕೆ ಅದ್ಧೂರಿಯಾಗಿ ಮುಹೂರ್ತ ನಡೆದಿದೆ. ಕಾಂತಾರದಲ್ಲಿ ತುಳುನಾಡಿನ ಆರಾಧ್ಯ ದೈವ ಪಂಜುರ್ಲಿಯನ್ನು ಮೂಲ ಕಥಾವಸ್ತುವನ್ನಾಗಿಟ್ಟು ಚಿತ್ರದ ಕಥೆಯನ್ನು ಹಣೆಯಲಾಗಿದೆ. ಆದರೆ ಮುಂಬರುವ ಕಾಂತಾರ ಪ್ರೀಕ್ವೆಲ್‌ನಲ್ಲಿ ನಿರ್ದೇಶಕ- ನಟ ರಿಷಬ್ ಶೆಟ್ಟಿ ದೈವಾರಾಧನೆಯ ಜೊತೆಗೆ ತುಳುನಾಡಿನ ಚರಿತ್ರೆಯನ್ನು ತೋರಿಸಲು ಹೊರಟಿದ್ದಾರೆ.
08:11 AM Dec 08, 2023 IST | Ashika S

ಕಾಸರಗೋಡು: ಕಾಂತಾರ ಪ್ರೀಕ್ವೆಲ್ ಭಾರಿ ಕುತೂಹಲ ಮೂಡಿಸಿದೆ. ಈಗಾಗಲೇ ಚಿತ್ರಕ್ಕೆ ಅದ್ಧೂರಿಯಾಗಿ ಮುಹೂರ್ತ ನಡೆದಿದೆ. ಕಾಂತಾರದಲ್ಲಿ ತುಳುನಾಡಿನ ಆರಾಧ್ಯ ದೈವ ಪಂಜುರ್ಲಿಯನ್ನು ಮೂಲ ಕಥಾವಸ್ತುವನ್ನಾಗಿಟ್ಟು ಚಿತ್ರದ ಕಥೆಯನ್ನು ಹಣೆಯಲಾಗಿದೆ. ಆದರೆ ಮುಂಬರುವ ಕಾಂತಾರ ಪ್ರೀಕ್ವೆಲ್‌ನಲ್ಲಿ ನಿರ್ದೇಶಕ- ನಟ ರಿಷಬ್ ಶೆಟ್ಟಿ ದೈವಾರಾಧನೆಯ ಜೊತೆಗೆ ತುಳುನಾಡಿನ ಚರಿತ್ರೆಯನ್ನು ತೋರಿಸಲು ಹೊರಟಿದ್ದಾರೆ.

Advertisement

ತುಳುನಾಡಿನ ಚರಿತ್ರೆ ಎಂದ ಮೇಲೆ ತುಳುನಾಡಿನ ಸೃಷ್ಠಿಕರ್ತ ಪರಶುರಾಮನ ಕಥೆ ಇಲ್ಲದೇ ಹೋದಲ್ಲಿ ತುಳುನಾಡಿನ ಚರಿತ್ರೆ ಅಪೂರ್ಣವೇ. ಪರಶುರಾಮ ತನ್ನ ತಂದೆಯ ಸಾವಿಗೆ‌ ಸೇಡು ತೀರಿಸಲು ಇಡೀ ಕ್ಷತ್ರಿಯ ವಂಶವನ್ನು ಬಲಿ ತೆಗೆಯಲು ಬಳಸಿದ್ದ ಚಂದ್ರಾಯುಧದಂತಹದೇ ಕೊಡಲಿಯೊಂದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಚಿಪ್ಪಾರು ಅರಮನೆಯಲ್ಲಿದೆ.

ಈ ಸುಮಾರು 400 ರಿಂದ 450 ವರ್ಷ ಇತಿಹಾಸವಿರುವ ಈ ಚಂದ್ರಾಯುಧದ ಹಿಡಿಯನ್ನು ಗಂಧದ ಹುಡಿಯನ್ನು ಬಳಸಿ ಮಾಡಲಾಗಿದೆ. 450 ವರ್ಷ ಕಳೆದರೂ ಇಂದಿಗೂ ಅತ್ಯಂತ ಗಟ್ಟಿಮುಟ್ಟಾಗಿ ಇರುವ ಈ ಆಯುಧವನ್ನು ಚಿಪ್ಪಾರು ರಾಜಮನೆತನದ ಮಂದಿ ಇಂದಿಗೂ ಉಳಿಸಿಕೊಂಡಿದ್ದಾರೆ.

Advertisement

ಪರಶುರಾಮ ಬಳಸಿದ್ದಾರೆ ಎನ್ನಲಾದ ಈ ಆಯುಧವನ್ನು ತುಳುನಾಡಿನ ಚರಿತ್ರೆಯ ಚಿತ್ರಕಥೆಯಿರುವ ಕಾಂತಾರ ಪ್ರೀಕ್ವೆಲ್‌ಗೆ ಕೊಡುವುದಾಗಿ ಹೇಳಿದ್ದಾರೆ. ನಿರ್ದೇಶಕ ರಿಷಬ್ ಶೆಟ್ಟಿ ಬಯಸಿದಲ್ಲಿ ಈ ಆಯುಧವನ್ನು ನೀಡಿ ಸಹಕರಿಸಲು ಚಿಪ್ಪಾರು ಮನೆತನದ ಹಿರಿಯರಾದ ತಿರುಮಲ ಬಳ್ಳಾಲ್ ಉತ್ಸುಕರಾಗಿದ್ದಾರೆ. ರಾಜ ಮನೆತನದ ಹಿರಿಯರು ಈ ಆಯುಧವನ್ನು ಕಾಡುಪ್ರಾಣಿಗಳ ಬೇಟೆಯಾಡಲು ಬಳಸುತ್ತಿದ್ದರು ಎನ್ನುವ ಮಾಹಿತಿಯನ್ನು ತಿರುಮಲ ಬಳ್ಳಾಲರು ನೀಡುತ್ತಾರೆ.

ಪ್ರಾಚೀನ ವಸ್ತುಗಳ ಸಂಗ್ರಹಗಾರರೂ ಆಗಿರುವ ತಿರುಮಲ ಬಳ್ಳಾಲರು ತಮ್ಮ ಹಿರಿಯರು ಬಳಸುತ್ತಿದ್ದ ಹಲವು ಮರದ, ಲೋಹದ ಮತ್ತು ಮಣ್ಣಿನ ಪರಿಕರಗಳನ್ನೂ ತಮ್ಮ ಸಂಗ್ರಹದಲ್ಲಿ ಜೋಡಿಸಿಟ್ಟುಕೊಂಡಿದ್ದಾರೆ.

Advertisement
Tags :
'ಕಾಂತಾರ'LatetsNewsNewsKannadaಆರಾಧ್ಯ ದೈವಪಂಜುರ್ಲಿಪರಶುರಾಮರಿಷಬ್ ಶೆಟ್ಟಿ
Advertisement
Next Article