For the best experience, open
https://m.newskannada.com
on your mobile browser.
Advertisement

ವಿದೇಶದಲ್ಲಿ ತೆರೆಗಪ್ಪಳಿಸಲು ಸಿದ್ಧವಾದ ಕಾಟೇರ

ದರ್ಶನ್ ಅಭಿನಯದ ಕಾಟೇರ ಸಿನಿಮಾ ಈಗಾಗಲೇ ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿದೆ. 3 ದಿನದಲ್ಲಿ 50 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಕಂಡಿರುವ ಸಿನಿಮಾ, ದಿನದಿಂದ ದಿನಕ್ಕೆ ಪ್ರದರ್ಶನದ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ.
08:35 PM Jan 01, 2024 IST | Ashika S
ವಿದೇಶದಲ್ಲಿ ತೆರೆಗಪ್ಪಳಿಸಲು ಸಿದ್ಧವಾದ ಕಾಟೇರ

ಬೆಂಗಳೂರು: ದರ್ಶನ್ ಅಭಿನಯದ ಕಾಟೇರ ಸಿನಿಮಾ ಈಗಾಗಲೇ ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿದೆ. 3 ದಿನದಲ್ಲಿ 50 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಕಂಡಿರುವ ಸಿನಿಮಾ, ದಿನದಿಂದ ದಿನಕ್ಕೆ ಪ್ರದರ್ಶನದ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ.

Advertisement

ಡಿಸೆಂಬರ್ 29ರಂದು ಬಿಡುಗಡೆಯಾದ ಸಿನಿಮಾ  ದರ್ಶನ್ ವೃತ್ತಿ ಜೀವನದಲ್ಲೇ ಇದು ದೊಡ್ಡ ಮಟ್ಟದ ಹಿಟ್‌ ಆಗುವ ಎಲ್ಲಾ ಸೂಚನೆ ಸಿಕ್ಕಿದೆ. ಕಲೆಕ್ಷನ್ ವಿಚಾರದಲ್ಲಿ ಕೂಡ ಮತ್ತೊಂದು ಮೈಲಿಗಲ್ಲು ಸಾಧಿಸುವ ಸಾಧ್ಯತೆ ಇದೆ.

ವಿದೇಶದಲ್ಲೂ ರಿಲೀಸ್‌ಗೆ ಸಿದ್ಧತೆ: ಕಾಟೇರ ಚಿತ್ರತಂಡ ಈಗ ವಿದೇಶದಲ್ಲೂ ದೊಡ್ಡ ಮಟ್ಟದ ಬಿಡುಗಡೆಗೆ ಸಜ್ಜಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್  "ಕಾಟೇರಾ ಜನವರಿ 6 ರಂದು ದುಬೈನಲ್ಲಿ ಪ್ರೀಮಿಯರ್ ಆಗಲಿದೆ, ಹೆಚ್ಚುವರಿಯಾಗಿ, ಜರ್ಮನಿ, ಯುಕೆ, ಯುಎಸ್ಎ, ಕೆನಡಾ ಮತ್ತು ಐರ್ಲೆಂಡ್ ಸೇರಿದಂತೆ ಸುಮಾರು 9 ದೇಶಗಳಲ್ಲಿ ಬಿಡುಗಡೆ ಮಾಡುಲು ಸಜ್ಜಾಗಿದೆ. ಬಿಡುಗಡೆ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು." ಎಂದು ಹೇಳಿದ್ದಾರೆ.

Advertisement

ರಾಕ್‌ಲೈನ್ ವೆಂಕಟೇಶ್ ಕಾಟೇರಾವನ್ನು ಡಬ್ ಮಾಡಿ ಶೀಘ್ರದಲ್ಲೇ ಬಹು ಭಾಷೆಗಳಲ್ಲಿ ಬಿಡುಗಡೆ ಮಾಡಲು ಯೋಜಿಸಿದ್ದಾರೆ.

ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ತರುಣ್ ಕಿಶೋರ್ ಸುಧೀರ್ ನಿರ್ದೇಶಿಸಿದ ಈ ಕಮರ್ಷಿಯಲ್ ಎಂಟರ್‌ಟೈನರ್ ರೈತರ ಸಮಸ್ಯೆಗಳ ಬಗ್ಗೆ ಮಾತನಾಡುವ ಸಿನಿಮಾ ಆಗಿದೆ.

Advertisement
Tags :
Advertisement