ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಏಪ್ರಿಲ್ 18, 19 ರಂದು ಸಿಇಟಿ ಪರೀಕ್ಷೆ ಆರಂಭ

ಏಪ್ರಿಲ್ 18 ಮತ್ತು 19 ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (KCET UGCET 2024) ನಡೆಸಲಿದೆ. ಸಿಇಟಿ ಪರೀಕ್ಷೆ ಬರೆಯಲು ತೆರಳುವ ವಿದ್ಯಾರ್ಥಿಗಳಿಗೆ ಮಾರ್ಗಸೂಚನೆಗಳನ್ನು ನೀಡಲಾಗಿದೆ.
05:00 PM Apr 17, 2024 IST | Ashitha S

ಬೆಂಗಳೂರು: ಏಪ್ರಿಲ್ 18 ಮತ್ತು 19 ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಲಿದೆ. ಸಿಇಟಿ ಪರೀಕ್ಷೆ ಬರೆಯಲು ತೆರಳುವ ವಿದ್ಯಾರ್ಥಿಗಳಿಗೆ ಮಾರ್ಗಸೂಚನೆಗಳನ್ನು ನೀಡಲಾಗಿದೆ.

Advertisement

ಪರೀಕ್ಷೆಗೆ ಹೋಗುವಾಗ ಅಗತ್ಯವಾಗಿ ತೆಗೆದುಕೊಂಡು ಹೋಗಬೇಕಾದ ದಾಖಲೆಗಳು, ಪರೀಕ್ಷಾ ದಿನದ ಮಾರ್ಗಸೂಚಿಗಳು, ಡ್ರೆಸ್‌ ಕೋಡ್ ಇತರ ವಿವರಗಳನ್ನು ಇಲ್ಲಿ ಪರಿಶೀಲನೆ ಮಾಡಬಹುದು.

ಎರಡು ದಿನಗಳು ಪರೀಕ್ಷೆ ನಡೆಯಲಿದೆ. ದಿನ ಎರಡು ಅವಧಿಗಳಲ್ಲಿ ಪರೀಕ್ಷೆಗಳು ನಡೆಯಲಿದೆ. ಬೆಳಿಗ್ಗೆ 10.30 ರಿಂದ 11.50 ರವರೆಗೆ ಮೊದಲ ಪರೀಕ್ಷೆ ನಡೆದರೆ, ಮಧ್ಯಾಹ್ನ 2.30 ರಿಂದ 3.50 ರವರೆಗೆ ಮತ್ತೊಂದು ಪರೀಕ್ಷೆ ನಡೆಯಲಿದೆ. ಕೆಸಿಇಟಿ 2024 ಪರೀಕ್ಷೆಯ ಪ್ರತಿ ಪತ್ರಿಕೆಯನ್ನು 80 ನಿಮಿಷಗಳ ಕಾಲ ನಡೆಸಲಾಗುತ್ತದೆ.

Advertisement

ಅಭ್ಯರ್ಥಿಗಳು ಪರೀಕ್ಷೆ ಪ್ರಾರಂಭವಾಗುವ ಕನಿಷ್ಠ 45 ನಿಮಿಷಗಳ ಮೊದಲು ಪರೀಕ್ಷಾ ಕೇಂದ್ರದಲ್ಲಿ ಅನ್ನು ತಲುಪಲು ಸೂಚಿಸಲಾಗಿದೆ. ಕೆಸಿಇಟಿ 2024 ಪರೀಕ್ಷೆಗೆ ತಡವಾಗಿ ಬಂದರೆ ಪರೀಕ್ಷೆ ಬರೆಯಲು ಅಧಿಕಾರಿಗಳು ಅನುಮತಿ ನೀಡುವುದಿಲ್ಲ.

ಇನ್ನು ಸರಳ ಪಾರದರ್ಶಕ ಬಾಲ್ ಪಾಯಿಂಟ್ ಪೆನ್. ಹೆಚ್ಚುವರಿ ಭಾವಚಿತ್ರ, ಹಾಜರಾತಿ ಹಾಳೆಯಲ್ಲಿ ಅಂಟಿಸಬೇಕು.ಕೆಸಿಇಟಿ (KCET) ಪ್ರವೇಶ ಪತ್ರ 2024.ಮಾನ್ಯವಾದ ಫೋಟೋ ಐಡಿ ಪುರಾವೆ (ಪ್ಯಾನ್ ಕಾರ್ಡ್/ ಡ್ರೈವಿಂಗ್ ಲೈಸೆನ್ಸ್/ ವೋಟರ್ ಐಡಿ/ ಪಾಸ್‌ಪೋರ್ಟ್/ ಆಧಾರ್ ಕಾರ್ಡ್/ ಇ- ಆಧಾರ್/ ರೇಷನ್ ಕಾರ್ಡ್).ವರ್ಗ ಪ್ರಮಾಣಪತ್ರ (ಅನ್ವಯಿಸಿದರೆ) ತೆಗೆದುಕೊಂಡು ಹೋಗಲು ಅನುಮತಿ ಇದೆ.

Advertisement
Tags :
CETdateDresscodeEXAMindiaKCET UGCETLatestNewsNewsKarnataka
Advertisement
Next Article