For the best experience, open
https://m.newskannada.com
on your mobile browser.
Advertisement

545 ಪಿಎಸ್‌ಐ ಮರು ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳು ಬಿಡುಗಡೆ

ಕರ್ನಾಟಕ ಎಕ್ಸಾಮಿನೇಷನ್‌ ಅಥಾರಿಟಿಯು ದಿನಾಂಕ 23-01-2024 ರಂದು ನಡೆದ ಪಿಎಸ್‌ಐ ಮರು ಪರೀಕ್ಷೆಗೆ ಸಂಬಂಧಿಸಿದಂತೆ, ಇದೀಗ ತಾತ್ಕಾಲಿಕ ಸರಿಯುತ್ತರಗಳನ್ನು ಕೆಇಎ ಬಿಡುಗಡೆ ಮಾಡಿದೆ. ಈ ಸದರಿ ಕೀ ಉತ್ತರಗಳಿಗೆ ಆಕ್ಷೇಪಣೆ ಇದ್ದಲ್ಲಿ ಸಲ್ಲಿಸಲು ಅವಕಾಶ ನೀಡಲಾಗಿದೆ.
03:30 PM Jan 30, 2024 IST | Ashitha S
545 ಪಿಎಸ್‌ಐ ಮರು ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳು ಬಿಡುಗಡೆ

ಬೆಂಗಳೂರು: ಕರ್ನಾಟಕ ಎಕ್ಸಾಮಿನೇಷನ್‌ ಅಥಾರಿಟಿಯು ದಿನಾಂಕ 23-01-2024 ರಂದು ನಡೆದ ಪಿಎಸ್‌ಐ ಮರು ಪರೀಕ್ಷೆಗೆ ಸಂಬಂಧಿಸಿದಂತೆ, ಇದೀಗ ತಾತ್ಕಾಲಿಕ ಸರಿಯುತ್ತರಗಳನ್ನು ಕೆಇಎ ಬಿಡುಗಡೆ ಮಾಡಿದೆ. ಈ ಸದರಿ ಕೀ ಉತ್ತರಗಳಿಗೆ ಆಕ್ಷೇಪಣೆ ಇದ್ದಲ್ಲಿ ಸಲ್ಲಿಸಲು ಅವಕಾಶ ನೀಡಲಾಗಿದೆ.

Advertisement

ಅಭ್ಯರ್ಥಿಗಳು ದಿನಾಂಕ 30-01-2024 ರಿಂದ 05-02-2024 ರ ಸಂಜೆ 05-00 ಗಂಟೆಯೊಳಗೆ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಲಿಂಕ್ ಬಳಸಿ ತಾತ್ಕಾಲಿಕ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಇದೆ.

ಅಭ್ಯರ್ಥಿಗಳು ತಮ್ಮ ಬುಕ್‌ಲೆಟ್‌ ಪ್ರಕಾರ ಕೀ ಉತ್ತರಗಳನ್ನು ಚೆಕ್‌ ಮಾಡಿಕೊಳ್ಳಬಹುದು. ಆಕ್ಷೇಪಣೆ ಸಲ್ಲಿಸುವಾಗ ಅಗತ್ಯ ಪೂರಕ ದಾಖಲೆಗಳ ಸ್ಕ್ಯಾನ್ ಕಾಪಿಯನ್ನು ಲಗತ್ತಿಸುವುದು ಕಡ್ಡಾಯ. ಅಲ್ಲದೇ ಪ್ರತಿ ಪ್ರಶ್ನೆಗೆ ನಿಗದಿತ ಶುಲ್ಕ ಪಾವತಿಸಿ ಆಕ್ಷೇಪಣೆ ಸಲ್ಲಿಸಬೇಕು.

Advertisement

ತಾತ್ಕಾಲಿಕ ಸರಿಯುತ್ತರಗಳಿಗೆ ಆಕ್ಷೇಪಣೆ ಇದ್ದಲ್ಲಿ, ಕೆಇಎ ವೆಬ್‌ಸೈಟ್‌ನಲ್ಲಿ ಜ.30 ರಂದು ವೆಬ್‌ಲಿಂಕ್‌ ಒಂದನ್ನು ಆಕ್ಷೇಪಣೆ ಸಲ್ಲಿಸಲು ನೀಡಲಾಗುತ್ತದೆ. ಸದರಿ ಲಿಂಕ್‌ ಕ್ಲಿಕ್ ಮಾಡುವ ಮೂಲಕ ಅಭ್ಯರ್ಥಿಗಳು ತಮ್ಮ ರಿಜಿಸ್ಟ್ರೇಷನ್‌ ನಂಬರ್, ಜನ್ಮ ದಿನಾಂಕ ಮಾಹಿತಿ ನೀಡಿ ಲಾಗಿನ್ ಆಗಿರಿ. ನಂತರ ಕೇಳಲಾಗುವ ಮಾಹಿತಿಗಳನ್ನು, ಪೂರಕ ದಾಖಲೆಗಳನ್ನು ನೀಡಿ. ಶುಲ್ಕ ಪಾವತಿಸಿ. ಆಕ್ಷೇಪಣೆ ಸಲ್ಲಿಸಬಹುದು.

https://cetonline.karnataka.gov.in/keawebentry456/PSI2023/PSI%20-%20PROVISIONAL%20ANSWER%20KEYkannada.pdf

Advertisement
Tags :
Advertisement