For the best experience, open
https://m.newskannada.com
on your mobile browser.
Advertisement

ಭೀಕರ ರಸ್ತೆ ಅಪಘಾತದಲ್ಲಿ ವಿಶ್ವ ದಾಖಲೆ ವೀರ ಕೆಲ್ವಿನ್ ದುರ್ಮರಣ

ಮ್ಯಾರಥಾನ್​ನಲ್ಲಿ ವಿಶ್ವ ದಾಖಲೆ ಬರೆದಿದ್ದ ಕೆಲ್ವಿನ್ ಕಿಪ್ಟಮ್ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕೀನ್ಯಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೆಲ್ವಿನ್ ಮತ್ತು ಅವರ ಕೋಚ್ ಗೆರ್ವೈಸ್ ಹಕಿಜಿಮಾನ ಸಾವಿಗೀಡಾಗಿದ್ದಾರೆ. ಚಿಕಾಗೋ ಮ್ಯಾರಥಾನ್‌ ಸ್ಪರ್ಧೆಯಲ್ಲಿ 2:00:35 ನಿಮಿಷದಲ್ಲಿ ಗುರಿ ಮುಟ್ಟುವ ಮೂಲಕ ಕೆಲ್ವಿನ್ ಕಿಪ್ಟಮ್ ಹೊಸ ಇತಿಹಾಸ ನಿರ್ಮಿಸಿದ್ದರು. ಕೀನ್ಯಾದ ಎಲಿಯುಡ್ ಕಿಪ್‌ಚೋಜ್ (2:01:09) ಅವರ ದಾಖಲೆಯನ್ನು ಮುರಿದು ಮ್ಯಾರಥಾನ್ ಅಂಗಳದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದ ಕೆಲ್ವಿನ್ ಇದೀಗ 24ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ.
12:12 PM Feb 12, 2024 IST | Ashitha S
ಭೀಕರ ರಸ್ತೆ ಅಪಘಾತದಲ್ಲಿ ವಿಶ್ವ ದಾಖಲೆ ವೀರ ಕೆಲ್ವಿನ್ ದುರ್ಮರಣ

ಪಶ್ಚಿಮ ಕೀನ್ಯಾ: ಮ್ಯಾರಥಾನ್​ನಲ್ಲಿ ವಿಶ್ವ ದಾಖಲೆ ಬರೆದಿದ್ದ ಕೆಲ್ವಿನ್ ಕಿಪ್ಟಮ್ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕೀನ್ಯಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೆಲ್ವಿನ್ ಮತ್ತು ಅವರ ಕೋಚ್ ಗೆರ್ವೈಸ್ ಹಕಿಜಿಮಾನ ಸಾವಿಗೀಡಾಗಿದ್ದಾರೆ. ಚಿಕಾಗೋ ಮ್ಯಾರಥಾನ್‌ ಸ್ಪರ್ಧೆಯಲ್ಲಿ 2:00:35 ನಿಮಿಷದಲ್ಲಿ ಗುರಿ ಮುಟ್ಟುವ ಮೂಲಕ ಕೆಲ್ವಿನ್ ಕಿಪ್ಟಮ್ ಹೊಸ ಇತಿಹಾಸ ನಿರ್ಮಿಸಿದ್ದರು. ಕೀನ್ಯಾದ ಎಲಿಯುಡ್ ಕಿಪ್‌ಚೋಜ್ (2:01:09) ಅವರ ದಾಖಲೆಯನ್ನು ಮುರಿದು ಮ್ಯಾರಥಾನ್ ಅಂಗಳದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದ ಕೆಲ್ವಿನ್ ಇದೀಗ 24ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ.

Advertisement

ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕದ ಮೇಲೆ ಕೆಲ್ವಿನ್ ಕಣ್ಣಿಟ್ಟಿದ್ದರು. ಇದಕ್ಕಾಗಿ ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದರು. ಹೀಗೆ ಅಭ್ಯಾಸ ಮುಗಿಸಿ ಭಾನುವಾರ ರಾತ್ರಿ 11 ಗಂಟೆಗೆ ಕಪ್ಟಗಾಟ್‌ನಿಂದ ಎಲ್ಡೊರೆಟ್‌ಗೆ ತೆರಳುತ್ತಿದ್ದರು. ಈ ವೇಳೆ ಕಾರು ಅಪಘಾತವಾಗಿದ್ದು, ಇದರಿಂದ ಕೆಲ್ವಿನ್ ಹಾಗೂ ರುವಾಂಡಾ ತರಬೇತುದಾರ ಗೆರ್ವೈಸ್ ಹಕಿಜಿಮಾನಾ ಅವರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಕಾರಿನಲ್ಲಿದ್ದ ಮತ್ತೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಶ್ಚಿಮ ಕೀನ್ಯಾದ ಎಲ್ಗೆಯೊ ಮರಕ್ವೆಟ್ ಕೌಂಟಿಯ ಪೊಲೀಸ್ ಕಮಾಂಡರ್ ಪೀಟರ್ ಮುಲಿಂಗೆ ತಿಳಿಸಿದ್ದಾರೆ.

ಇನ್ನು ಈ ಅಪಘಾತಗೊಂಡ ಕಾರನ್ನು ಕೆಲ್ವಿನ್ ಅವರೇ ಚಾಲನೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಅತೀ ವೇಗದಿಂದಾಗಿ ವಾಹನವು ನಿಯಂತ್ರಣ ಕಳೆದುಕೊಂಡು ಅವಘಡ ಸಂಭವಿಸಿದೆ ಎಂದು ಪೊಲೀಸ್ ವರದಿಯಲ್ಲಿ ತಿಳಿಸಲಾಗಿದೆ.

Advertisement

Advertisement
Tags :
Advertisement