For the best experience, open
https://m.newskannada.com
on your mobile browser.
Advertisement

ʼಕೆಂಡʼ ವಿತರಣಾ ಹಕ್ಕು ಪಡೆದ ಆಸ್ಕರ್​ ವಿಜೇತ ನಿರ್ಮಾಣ ಸಂಸ್ಥೆ

ಕನ್ನಡ ಚಿತ್ರರಂಗದಲ್ಲಿ ರೂಪಾ ರಾವ್ ಅವರು ಭರವಸೆಯ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದಾರೆ. ಈಗ ಅವರು ‘ಕೆಂಡ’ ಸಿನಿಮಾ ಮೂಲಕ ನಿರ್ಮಾಪಕಿಗೂ ಆಗಿದ್ದಾರೆ. ಸಿನಿಮಾಟೋಗ್ರಾಫರ್​ ಸಹದೇವ್ ಕೆಲವಡಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.
01:02 PM Jan 07, 2024 IST | Ashitha S
ʼಕೆಂಡʼ ವಿತರಣಾ ಹಕ್ಕು ಪಡೆದ ಆಸ್ಕರ್​ ವಿಜೇತ ನಿರ್ಮಾಣ ಸಂಸ್ಥೆ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ರೂಪಾ ರಾವ್ ಅವರು ಭರವಸೆಯ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದಾರೆ. ಈಗ ಅವರು ‘ಕೆಂಡ’ ಸಿನಿಮಾ ಮೂಲಕ ನಿರ್ಮಾಪಕಿಗೂ ಆಗಿದ್ದಾರೆ. ಸಿನಿಮಾಟೋಗ್ರಾಫರ್​ ಸಹದೇವ್ ಕೆಲವಡಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

Advertisement

ಈ ಚಿತ್ರತಂಡದಿಂದ ಒಂದೊಂದೇ ವಿಶೇಷ ಸುದ್ದಿಗಳು ಹೊರಬರುತ್ತಿವೆ. ಪೋಸ್ಟರ್​ಗಳ ಮೂಲಕ ಗಮನ ಸೆಳೆದ ‘ಕೆಂಡ’ ಸಿನಿಮಾದ ಜೊತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿದ ‘ಕಿಲ್ಜಾಯ್ ಫಿಲ್ಮ್ಸ್​’ ನಿರ್ಮಾಣ ಸಂಸ್ಥೆಯು ಕೈ ಜೋಡಿಸುತ್ತಿದೆ. ಇದರಿಂದಾಗಿ ‘ಕೆಂಡ’ ಸಿನಿಮಾದ ಬಲ ಹೆಚ್ಚಿದಂತಾಗಿದೆ.

ಹೌದು. . . ಕಿಲ್ಜಾಯ್ ಫಿಲ್ಮ್ಸ್‌ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ, ಘನತೆ ಹೊಂದಿರುವ ನಿರ್ಮಾಣ ಸಂಸ್ಥೆ. ನ್ಯೂಯಾರ್ಕ್ ಹಾಗೂ ಬರ್ಲಿನ್ ಮೂಲದ ಈ ಸಂಸ್ಥೆ ಆಸ್ಕರ್ ನಂತಹ ಪ್ರಶಸ್ತಿ ಪಡೆದುಕೊಂಡ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿದೆ.

Advertisement

ಇಂತಹ ಸಂಸ್ಥೆ ಬಹಳಷ್ಟು ಇಷ್ಟಪಟ್ಟು ʻಕೆಂಡʼ ಚಿತ್ರದ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದೆ. ಅದಲ್ಲದೇ ಬಹು ಹೆಮ್ಮೆಯಿಂದ ಆ ವಿಚಾರವನ್ನು ಅಧಿಕೃತವಾಗಿ ಘೋಷಿಸಿದೆ ಚಿತ್ರತಂಡ. ಪ್ರತಿಭಾನ್ವಿತ ಕಲಾವಿದರ ಬಳಗ ಈ ಚಿತ್ರದಲ್ಲಿದೆ.

ಇದರ ಜತೆಗೆ ಸಹದೇವ್ ಕೆಲವಡಿ ನಿರ್ದೇಶಕರಾಗಿ ವಿಶ್ವಮಟ್ಟದಲ್ಲಿ ಗಮನ ಸೆಳೆಯುವ ಲಕ್ಷಣಗಳೂ ದಟ್ಟವಾಗಿವೆ. ಈ ಹಿಂದೆ ʻಗಂಟುಮೂಟೆ' ಎಂಬ ವಿಶಿಷ್ಟ ಸಿನಿಮಾ ಕೊಟ್ಟಿದ್ದ ತಂಡವೀಗ `ಕೆಂಡ' ಸಿನಿಮಾ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ಸೇಳೆಯುವಲ್ಲಿ ಬರುತ್ತಿದೆ. ʻಗಂಟುಮೂಟೆʼ ಚಿತ್ರದ ನಿರ್ಮಾಣದಲ್ಲಿ ಭಾಗಿಯಾಗಿ ಛಾಯಾಗ್ರಾಹಕರಾಗಿದ್ದ ಸಹದೇವ್ ಕೆಲವಡಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

Advertisement
Tags :
Advertisement