For the best experience, open
https://m.newskannada.com
on your mobile browser.
Advertisement

ಅಯೋಧ್ಯಾದಲ್ಲಿ ಬಾಲರಾಮನಿಗೆ ತಲೆಬಾಗಿ ನಮಿಸಿದ ರಾಜ್ಯಪಾಲ ಆರಿಫ್‌ ಮೊಹಮ್ಮದ್

ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್  ಖಾನ್‌ ಅವರು ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿ ದೇವರಿಗೆ ನಮಿಸಿದರು.ಕೇರಳ ರಾಜಭವನದ ಎಕ್ಸ್ ನಲ್ಲಿನ ಪೋಸ್ಟ್‌ನಲ್ಲಿ ರಾಜ್ಯಪಾಲರು ರಾಮ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದ ಬಗ್ಗೆ ಮಾಹಿತಿ ನೀಡಲಾಗಿದೆ.
03:53 PM May 09, 2024 IST | Ashitha S
ಅಯೋಧ್ಯಾದಲ್ಲಿ ಬಾಲರಾಮನಿಗೆ ತಲೆಬಾಗಿ ನಮಿಸಿದ ರಾಜ್ಯಪಾಲ ಆರಿಫ್‌  ಮೊಹಮ್ಮದ್

ಅಯೋಧ್ಯೆ: ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್  ಖಾನ್‌ ಅವರು ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿ ದೇವರಿಗೆ ನಮಿಸಿದರು.ಕೇರಳ ರಾಜಭವನದ ಎಕ್ಸ್ ನಲ್ಲಿನ ಪೋಸ್ಟ್‌ನಲ್ಲಿ ರಾಜ್ಯಪಾಲರು ರಾಮ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದ ಬಗ್ಗೆ ಮಾಹಿತಿ ನೀಡಲಾಗಿದೆ.

Advertisement

ಜನವರಿಯಲ್ಲಿ ಎರಡು ಬಾರಿ ಅಯೋಧ್ಯೆಗೆ ಬಂದಿದ್ದೆ.  ಅಂದಿನ ಭಾವನೆ ಇಂದಿಗೂ ಹಾಗೆಯೇ ಇದೆ. ನಾನು ಅಯೋಧ್ಯೆಗೆ ಹಲವು ಬಾರಿ ಬಂದಿದ್ದೇನೆ. ಇದು ನಮಗೆ ಸಂತೋಷದ ವಿಷಯವಲ್ಲ, ಬದಲಾಗಿ ಹೆಮೆಯ ವಿಷಯವಾಗಿದೆ. ಅಯೋಧ್ಯೆ ಮತ್ತು ಶ್ರೀರಾಮನನ್ನು ಪೂಜಿಸುತ್ತಿದ್ದೇನೆ ಎಂದು ರಾಜ್ಯಪಾಲರು ಸುದ್ದಿಗಾರರಿಗೆ ತಿಳಿಸಿದರು.

ಕೇರಳ ರಾಜ್ಯಪಾಲರ ಅಧಿಕತ ಎಕ್ಸ್ ಹ್ಯಾಂಡಲ್‌ನಲ್ಲಿ ಪೋಸ್ಟ್‌ ಮಾಡಲಾದ ವೀಡಿಯೋದಲ್ಲಿ ಖಾನ್‌ ಅವರು, ರಾಮ್‌ ಲಲ್ಲಾನ ವಿಗ್ರಹದ ಮುಂದೆ ನಮಸ್ಕರಿಸುತ್ತಿರುವುದನ್ನು ತೋರಿಸುತ್ತಾ ಜೈ ಶ್ರೀ ರಾಮ್‌‍ ಎಂಬ ಘೋಷಣೆ ಕೂಗುವುದು ಸೆರೆಯಾಗಿದೆ.

Advertisement

Advertisement
Tags :
Advertisement