For the best experience, open
https://m.newskannada.com
on your mobile browser.
Advertisement

ಲಂಡನ್‌ ಪ್ರವಾಸೋದ್ಯಮ ಸ್ಪರ್ಧೆಯಲ್ಲಿ ಕೇರಳ ಪ್ರತಿಕೃತಿಗೆ ಪ್ರಶಸ್ತಿ

ಲಂಡನ್‌ನ ವರ್ಲ್ಡ್ ಟ್ರಾವೆಲ್ ಮಾರ್ಕೆಟ್ (ಡಬ್ಲ್ಯೂಟಿಎಂ) ನಲ್ಲಿ ಕೇರಳ ಪ್ರವಾಸೋದ್ಯಮದ ಪ್ರತಿಕೃತಿ ಪ್ರಶಸ್ತಿ ಗೆದ್ದುಕೊಂಡಿದೆ. ಕೇರಳ ಪ್ರವಾಸೋದ್ಯಮ ಇಲಾಖೆ ತಯಾರಿಸಿದ ಪೆವಿಲಿಯನ್‌ ಕೇರಳದ ಹಬ್ಬಗಳ 'ದಿ ಮ್ಯಾಜಿಕಲ್ ಎವೆರಿಡೇ' ಎಂಬ ಥೀಮ್ ಹೊಂದಿತ್ತು.
10:01 PM Nov 08, 2023 IST | Ashika S
ಲಂಡನ್‌ ಪ್ರವಾಸೋದ್ಯಮ ಸ್ಪರ್ಧೆಯಲ್ಲಿ ಕೇರಳ ಪ್ರತಿಕೃತಿಗೆ ಪ್ರಶಸ್ತಿ

ತಿರುವನಂತಪುರಂ: ಲಂಡನ್‌ನ ವರ್ಲ್ಡ್ ಟ್ರಾವೆಲ್ ಮಾರ್ಕೆಟ್ (ಡಬ್ಲ್ಯೂಟಿಎಂ) ನಲ್ಲಿ ಕೇರಳ ಪ್ರವಾಸೋದ್ಯಮದ ಪ್ರತಿಕೃತಿ ಪ್ರಶಸ್ತಿ ಗೆದ್ದುಕೊಂಡಿದೆ. ಕೇರಳ ಪ್ರವಾಸೋದ್ಯಮ ಇಲಾಖೆ ತಯಾರಿಸಿದ ಪೆವಿಲಿಯನ್‌ ಕೇರಳದ ಹಬ್ಬಗಳ "ದಿ ಮ್ಯಾಜಿಕಲ್ ಎವೆರಿಡೇ" ಎಂಬ ಥೀಮ್ ಹೊಂದಿತ್ತು.

Advertisement

ಜೋಡಿ ಎತ್ತುಗಳ ದೈತ್ಯ ಪ್ರತಿಮೆ ಅನ್ನು ಇದು ಒಳಗೊಂಡಿತ್ತು. ಪ್ರಶಸ್ತಿ ಪಡೆದುಕೊಂಡ ಕುರಿತು ಮಾತನಾಡಿರುವ ಕೇರಳ ಪ್ರವಾಸೋದ್ಯಮ ಸಚಿವ ಪಿ.ಎ.ಮೊಹಮ್ಮದ್ ರಿಯಾಸ್, ವಿಶ್ವದ ಅತಿದೊಡ್ಡ ಪ್ರವಾಸೋದ್ಯಮ ಮೇಳಗಳಲ್ಲಿ ಕೇರಳ ಪ್ರಶಸ್ತಿ ಗೆದ್ದಿರುವುದು ನಿಜಕ್ಕೂ ದೊಡ್ಡ ಮನ್ನಣೆಯಾಗಿದೆ ಎಂದು ಹೇಳಿದ್ದಾರೆ. ಈ ಟ್ರಾವೆಲ್‌ ಮಾರ್ಕೆಟ್‌ ನಿಂದಾಗಿ ಕೇರಳಕ್ಕೆ ಪ್ರವಾಸೋದ್ಯಮದಲ್ಲಿ ಅತಿದೊಡ್ಡ ಬೂಸ್ಟ್‌ ಸಿಕ್ಕಿದೆ ಎಂದು ರಾಜ್ಯ ಪ್ರವಾಸೋದ್ಯಮ ಕಾರ್ಯದರ್ಶಿ ಕೆ ಬಿಜು ವಿವರಿಸಿದ್ದಾರೆ.

Advertisement
Advertisement
Tags :
Advertisement