For the best experience, open
https://m.newskannada.com
on your mobile browser.
Advertisement

ಕೇಸೋರಾಮ್ ಇಂಡಸ್ಟ್ರೀಸ್ ಮುಖ್ಯಸ್ಥೆ ಮಂಜುಶ್ರೀ ಖೇತಾನ್ ವಿಧಿವಶ

ಬಿಕೆ ಬಿರ್ಲಾ ಒಡೆತನದ ಕೇಸೋರಾಮ್ ಇಂಡಸ್ಟ್ರೀಸ್ ಸಂಸ್ಥೆಯ ಛೇರ್ಮನ್ ಆಗಿದ್ದ ಮಂಜುಶ್ರೀ ಖೇತಾನ್ ನಿಧನರಾಗಿದ್ದಾರೆ.
03:46 PM May 17, 2024 IST | Ashitha S
ಕೇಸೋರಾಮ್ ಇಂಡಸ್ಟ್ರೀಸ್ ಮುಖ್ಯಸ್ಥೆ ಮಂಜುಶ್ರೀ ಖೇತಾನ್ ವಿಧಿವಶ

ಕೋಲ್ಕತಾ: ಬಿಕೆ ಬಿರ್ಲಾ ಒಡೆತನದ ಕೇಸೋರಾಮ್ ಇಂಡಸ್ಟ್ರೀಸ್ ಸಂಸ್ಥೆಯ ಛೇರ್ಮನ್ ಆಗಿದ್ದ ಮಂಜುಶ್ರೀ ಖೇತಾನ್ ನಿಧನರಾಗಿದ್ದಾರೆ.

Advertisement

ಬಿರ್ಲಾ ಕುಟುಂಬದ ಕುಡಿಯಾಗಿದ್ದ ಮಂಜುಶ್ರೀ ಅವರಿಗೆ 69 ವರ್ಷ ವಯಸ್ಸಾಗಿತ್ತು. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಲ್ಲಿಯ ಬಿರ್ಲಾ ಪಾರ್ಕ್​ನಲ್ಲಿ ನಿನ್ನೆ ಗುರುವಾರ ಕೊನೆಯುಸಿರು ಎಳೆದಿದ್ದಾರೆ. ಬಿಕೆ ಬಿರ್ಲಾ ಅವರ ಕೊನೆಯ ಮಗಳಾದ ಮಂಜುಶ್ರೀ ಅವರಿಗೆ ಇದ್ದ ಏಕೈಕ ಪುತ್ರಿ ವಿದುಲಾ ಜಲನ್ ಒಂದು ವರ್ಷದ ಹಿಂದಷ್ಟೇ ಮೃತಪಟ್ಟಿದ್ದರು.

ಇದರೊಂದಿಗೆ ಪ್ರತಿಷ್ಠಿತ ಬಿರ್ಲಾ ಫ್ಯಾಮಿಲಿಯ ಬಿಸಿನೆಸ್​ಗಳೆಲ್ಲವೂ ಬಹುತೇಕ ಕುಮಾರಮಂಗಲಂ ಬಿರ್ಲಾ ಮತ್ತವರ ಕುಟುಂಬದ ಸುಪರ್ದಿಗೆ ಹೋಗಲಿದೆ. ಕೋಲ್ಕತಾದಲ್ಲಿ ನಿನ್ನೆ ಮಂಜುಶ್ರೀ ಖೇತಾನ್ ಅವರ ಅಂತ್ಯ ಸಂಸ್ಕಾರವನ್ನು ಕೆಎಂ ಬಿರ್ಲಾ ಅವರೇ ಮಾಡಿದರು ಎಂದು ತಿಳಿದು ಬಂದಿದೆ.

Advertisement

Advertisement
Tags :
Advertisement