For the best experience, open
https://m.newskannada.com
on your mobile browser.
Advertisement

ಸೆಲೆಬ್ರೆಶನ್‌ ಬೈ ಬಾರ್ ಕೋಡ್‌ ಮಳಿಗೆಯ 2ನೇ ವಾರ್ಷಿಕೋತ್ಸವ: ಕಾರ್ಯಕ್ರಮ ಉದ್ಘಾಟಿಸಿದ ಯುಟಿ ಖಾದರ್‌

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಂಕನಾಡಿಯಲ್ಲಿ‌ 'ಸೆಲೆಬ್ರೆಶನ್‌ ಬಾರ್ ಕೋಡ್‌' ಮಳಿಗೆ ಇದರ 2ನೇ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಸ್ವೀಕರ್‌ ಯುಟಿ ಖಾದರ್‌ ಅವರು ಉದ್ಘಾಟಿಸಿದರು.
07:20 PM Nov 01, 2023 IST | Gayathri SG
ಸೆಲೆಬ್ರೆಶನ್‌ ಬೈ ಬಾರ್ ಕೋಡ್‌ ಮಳಿಗೆಯ 2ನೇ ವಾರ್ಷಿಕೋತ್ಸವ  ಕಾರ್ಯಕ್ರಮ ಉದ್ಘಾಟಿಸಿದ ಯುಟಿ ಖಾದರ್‌

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಂಕನಾಡಿಯಲ್ಲಿ‌ "ಸೆಲೆಬ್ರೆಶನ್‌ ಬೈ ಬಾರ್ ಕೋಡ್‌" ಮಳಿಗೆ ಇದರ 2ನೇ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಸ್ವೀಕರ್‌ ಯುಟಿ ಖಾದರ್‌ ಅವರು ಉದ್ಘಾಟಿಸಿದರು.

Advertisement

ಬಳಿಕ ಮಾತನಾಡಿದ ಸ್ವೀಕರ್‌ ಯುಟಿ ಖಾದರ್‌ ಅವರು, ನಮ್ಮೆಲ್ಲರ ಮಿತ್ರರಾಗಿರುವ ಶಿಯಾ ಮತ್ತು ಎಲ್ಲ ತಂಡದ ಸದಸ್ಯರ ಶ್ರಮದ ಫಲವಾಗಿ ಸೆಲೆಬ್ರೆಶನ್‌ ಬೈ ಬಾರ್ ಕೋಡ್‌ ಇದರ 2ನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿದೆವೆ. ಯುವಕರು ಸಮಾಜದಲ್ಲಿ ಮುಂದೆ ನಿಂತು ಒಂದು ಉತ್ತಮ ರೀತಿಯಲ್ಲಿ ವ್ಯಾಪಾರ ವ್ಯವಹಾರ ಮಾಡಿ ಇಂದು ಯಶಸ್ಸನ್ನು ಕಂಡಿದ್ದಾರೆ. ಪ್ರೀತಿ ವಿಶ್ವಾಸದ ಮೂಲಕ ಜನರನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಗೆ ಸರ್ವರು ಕೂಡ ಬೆಂಬಲ ಕೊಟ್ಟು, ಇವರ ಯಶಸ್ಸಿಗೆ ಕಾರಣರಾಗಿದ್ದಾರೆ. ಹಾಗಾಗಿ ಶಿಯಾ ಹಾಗು ಅವರ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತ ಮುಂದೆ ಕಣ್ಣೂರಿನಲ್ಲಿ ಬರುವ 3ನೇ ಪ್ರಾಜೆಕ್ಟ್‌ ಕೂಡ ಸಕ್ಸಸ್‌ ಅನ್ನು ಕಾಣಲಿ ಎಂದು ಹಾರೈಸಿದ್ದಾರೆ.

ಇಲ್ಲಿ ರೆಡಿಮೆಡ್‌ ಮೆನ್ಸ್‌ ವೇರ್‌, ಡಿಸೈನ್ಸ್ ಫೂಟ್ವೇರ್‌, ಇತರ ಅಮೋಘ ವಸ್ತ್ರಗಳ ವಿನ್ಯಾಸಗಳು ಗ್ರಾಹಕರ ಕೈಗೆಟಕುವ ದರದಲ್ಲಿ, ತಮ್ಮ ಅಭಿರುಚಿಗೆ‌ ತಕ್ಕಂತೆ ಸೆಲೆಬ್ರೆಶನ್‌ ಬೈ ಬಾರ್ ಕೋಡ್‌ ನಲ್ಲಿ ಸಿಗಲಿದೆ. ಇನ್ನು 2ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನವೆಂಬರ್‌ 1ರ ಇಂದಿನಿಂದ ನವೆಂಬರ್‌ 30ರ ವರೆಗೆ ರೆಡಿಮೆಡ್‌ ವಸ್ತ್ರಗಳ ಖರೀದಿಯ ಮೇಲೆ ಶೇ.50% ಆಫರ್‌ ಸಿಗಲಿದೆ. ಸೆಲೆಬ್ರೆಶನ್‌ ಬಾರ್ ಕೋಡ್‌ ಇದರ ಮತ್ತೊಂದು ಶಾಖೆ ಕಾಸರಗೋಡಿನಲ್ಲಿದೆ.

Advertisement

Advertisement
Tags :
Advertisement