For the best experience, open
https://m.newskannada.com
on your mobile browser.
Advertisement

ಕೆಕೆಆರ್ ವಿರುದ್ಧ ಇವತ್ತು ಆರ್ಸಿಬಿ ಗೆದ್ದರೆ ಫ್ಲೇ ಆಫ್ ಜೀವಂತ

ಸತತ ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಇಂದು ಬಲಿಷ್ಠ ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ ಗೆಲುವಿಗಾಗಿ ಹೋರಾಟ ನಡೆಸಲಿದೆ. ತವರಿನಲ್ಲೇ ಪಂದ್ಯ ನಡೆಯುತ್ತಿದ್ದರಿಂದ ಕೆಕೆಆರ್​ ತಂಡವನ್ನು ಮಣಿಸುವುದು ಆರ್​ಸಿಬಿಗೆ ಅಷ್ಟು ಸುಲಭವಲ್ಲ.
08:12 AM Apr 21, 2024 IST | Ashitha S
ಕೆಕೆಆರ್ ವಿರುದ್ಧ ಇವತ್ತು ಆರ್ಸಿಬಿ ಗೆದ್ದರೆ ಫ್ಲೇ ಆಫ್ ಜೀವಂತ

ಬೆಂಗಳೂರು: ಸತತ ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಇಂದು ಬಲಿಷ್ಠ ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ ಗೆಲುವಿಗಾಗಿ ಹೋರಾಟ ನಡೆಸಲಿದೆ. ತವರಿನಲ್ಲೇ ಪಂದ್ಯ ನಡೆಯುತ್ತಿದ್ದರಿಂದ ಕೆಕೆಆರ್​ ತಂಡವನ್ನು ಮಣಿಸುವುದು ಆರ್​ಸಿಬಿಗೆ ಅಷ್ಟು ಸುಲಭವಲ್ಲ.

Advertisement

ಹೀಗಾಗಿ ನಿರ್ಣಾಯಕ ಪಂದ್ಯ ಗೆಲ್ಲಲು ಕ್ಯಾಪ್ಟನ್​ ಫಾಫ್ ಭಾರೀ ರಣತಂತ್ರವನ್ನೇ ಹೆಣೆಯಬೇಕಿದೆ. ಪ್ಲೇ ಆಫ್‌ ಭರವಸೆ ಜೀವಂತವಾಗಿರಬೇಕು ಎಂದರೆ ಈ ಪಂದ್ಯ ಆರ್​ಸಿಬಿ ಗೆಲ್ಲಲೇಬೇಕು.

ಹೈದರಾಬಾದ್ ವಿರುದ್ಧದ ಕಳೆದ ಮ್ಯಾಚ್​ನಲ್ಲಿ ತೀವ್ರ ಪೈಪೋಟಿ ಕೊಟ್ಟು ಸೋಲು ಕಂಡಿತ್ತು. ಆದರೆ ಇಂದು ನಡೆಯುವ ಪಂದ್ಯದಲ್ಲಿ ಆರ್​ಸಿಬಿ ಗೆಲುವು ಪಡೆಯುವುದು ಅನಿವಾರ್ಯವಾಗಿದೆ.

Advertisement

ಆರ್​ಸಿಬಿ ಬೌಲಿಂಗ್ ಕೂಡ ಕಳಪೆಮಟ್ಟ ತಲುಪಿದ್ದು ಈ ಪಂದ್ಯದಲ್ಲಾದರೂ ಯಶಸ್ವಿ ಪ್ರದರ್ಶನ ನೀಡಬೇಕು ಎನ್ನುವುದು ಫ್ಯಾನ್ಸ್​ ಅಭಿಪ್ರಾಯವಾಗಿದೆ.

ಈಗಾಗಲೇ ಟೂರ್ನಿಯಲ್ಲಿ ಸೂಪರ್ ಆಗಿ ಆಡಿರುವ ಶ್ರೇಯಸ್ ಅಯ್ಯರ್ ಟೀಮ್ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ. ಆರ್​ಸಿಬಿ 7 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಗೆದ್ದು ಉಳಿದ 6 ಪಂದ್ಯಗಳನ್ನು ಸೋತಿದೆ.

ಹೀಗಾಗಿ ಮುಂಬರುವ ಎಲ್ಲ ಪಂದ್ಯಗಳನ್ನು ಬೆಂಗಳೂರು ಗೆಲ್ಲಲೇಬೇಕಾಗಿದೆ. ಒಟ್ಟಾರೆ ಕೊನೆಯ 8 ಪಂದ್ಯಗಳಲ್ಲಿ ಆರ್‌ಸಿಬಿ ಕನಿಷ್ಠ 7 ಪಂದ್ಯಗಳನ್ನು ಗೆದ್ದರೆ ಪ್ಲೇಆಫ್‌ಗೆ ಅರ್ಹತೆ ಪಡೆಯಲಿದೆ. ಒಂದು ವೇಳೆ 6ರಲ್ಲಿ ಗೆದ್ದರೂ ಪ್ಲೇಆಫ್‌ ಅರ್ಹತೆಯು ಇತರೆ ತಂಡಗಳ ಫಲಿತಾಂಶ ಅವಲಂಬಿಸಬೇಕಾಗುತ್ತದೆ.

ಕೆಕೆಆರ್ ಮತ್ತು ಆರ್​ಸಿಬಿ ನಡುವಿನ ಪಂದ್ಯ ಈಡನ್​ ಗಾರ್ಡನ್ಸ್​ನಲ್ಲಿ ಇಂದು ಮಧ್ಯಾಹ್ನ 3:30ಕ್ಕೆ ನಡೆಯಲಿದೆ.

Advertisement
Tags :
Advertisement