For the best experience, open
https://m.newskannada.com
on your mobile browser.
Advertisement

ಪಪ್ಸ್ ತಿಂದು ಹಣ ಕೇಳಿದ್ದಕ್ಕೆ ಚಾಕುವಿನಿಂದ ಇರಿದು ಪರಾರಿ

 ಪಪ್ಸ್ ಸೇವಿಸಿ  ಹಣ ಕೇಳಿದ ವೇಳೆ ಬೆದರಿಸಿ ಚಾಕುವಿನಿಂದ ಇರಿದು ಪರಾರಿಯಾಗಿದ್ದ ಇಬ್ಬರ ಪೈಕಿ ಒಬ್ಬನನ್ನು ಬಂಧಿಸಿ ಮತ್ತೊಬ್ಬನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿರುವ ಘಟನೆ ನಗರದ ಹೂಟಗಳ್ಳಿಯಲ್ಲಿ ನಡೆದಿದೆ.
11:53 AM Jul 08, 2024 IST | Ashitha S
ಪಪ್ಸ್ ತಿಂದು ಹಣ ಕೇಳಿದ್ದಕ್ಕೆ ಚಾಕುವಿನಿಂದ ಇರಿದು ಪರಾರಿ

ಮೈಸೂರು: ಬೇಕರಿಯಲ್ಲಿ ಚಂಪಾಕಲಿ ಹಾಗೂ ಪಪ್ಸ್ ಸೇವಿಸಿ  ಹಣ ಕೇಳಿದ ವೇಳೆ ಬೆದರಿಸಿ ಚಾಕುವಿನಿಂದ ಇರಿದು ಪರಾರಿಯಾಗಿದ್ದ ಇಬ್ಬರ ಪೈಕಿ ಒಬ್ಬನನ್ನು ಬಂಧಿಸಿ ಮತ್ತೊಬ್ಬನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿರುವ ಘಟನೆ ನಗರದ ಹೂಟಗಳ್ಳಿಯಲ್ಲಿ ನಡೆದಿದೆ.

Advertisement

ಹೂಟಗಳ್ಳಿಯ ಕೆಹೆಚ್‍ ಬಿ ಕಾಲೋನಿ ಬಳಿಯಿರುವ ಬೇಕರಿಗೆ ರಾತ್ರಿ 10 ಗಂಟೆ ವೇಳೆಯಲ್ಲಿ ತೆರಳಿದ ರೌಡಿಶೀಟರ್ ಪ್ರಜ್ವಲ್ ಅಲಿಯಾಸ್ ಸ್ಪಾಟ್ ಹಾಗೂ ಸಂಜು ಎಂಬುವರು ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ  ಮಹಮದ್ ಸಾಜಿದ್ ಬಳಿ ಪಪ್ಸ್ ಹಾಗೂ ಚಂಪಾಕಲಿ ತಿಂದಿದ್ದಾರೆ. ಅದರ ಹಣವನ್ನು ನೀಡದೆ ತೆರಳುತ್ತಿದ್ದಾಗ ಹಣ ನೀಡುವಂತೆ ಬೇಕರಿಯ ಕೆಲಸಗಾರ ಸಾಜಿದ್ ಕೇಳಿದ್ದಾರೆ. ಈ ವೇಳೆ ನಾವು ಯಾರು ಗೊತ್ತಾ? ನಮ್ಮ ಜತೆ ಹಣ ಕೇಳ್ತಿಯಾ ಎನ್ನುತ್ತಾ ಬೇಕರಿಯಲ್ಲಿಟ್ಟಿದ್ದ ಟ್ರೇ ಗಳನ್ನು ಎಳೆದು ಬಿಸಾಡಿದ್ದಲ್ಲದೆ, ಆತನಿಗೆ ಚಾಕುವಿನಿಂದ ಇರಿದಿದ್ದಾರೆ.

ಈ ವೇಳೆ ಸಾಜಿದ್ ಸ್ವೆಟರ್ ಧರಿಸಿದ ಪರಿಣಾಮ ಚಾಕು ಸ್ವೆಟರ್ ಗೆ ತಾಗಿದ್ದರಿಂದ ಪ್ರಾಣಾಪಾಯ ಸಂಭವಿಸಿಲ್ಲ.  ಆದರೆ ಬೇಕರಿಯಲ್ಲಿ ದಾಂಧಲೆ ನಡೆಸಿದ ಬಳಿಕ ಸಾಜಿದ್ ಧರಿಸಿದ್ದ 30 ಗ್ರಾಂ ಚಿನ್ನದ ಸರವನ್ನು  ಲಪಟಾಯಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನೀಡಿದ ದೂರಿನ ಮೇರೆಗೆ ವಿಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಂಜು ಎಂಬಾತನನ್ನು ಬಂಧಿಸಿದ್ದರೆ ಮತ್ತೊಬ್ಬ ಪ್ರಜ್ವಲ್ ನಾಪತ್ತೆಯಾಗಿದ್ದಾನೆ. ಈತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

Advertisement

Advertisement
Tags :
Advertisement