ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಹೊಸ ವರ್ಷದ ಹೊಸ ಹರ್ಷ; ಯುಗಾದಿಗೆ ಇದೆ ವಿಶೇಷ ಮಹತ್ವ

ಯುಗಾದಿ ಅಥವಾ ಉಗಾದಿ ಎಂದು ಕರೆಯುವ ಹಬ್ಬವು ಹಿಂದೂಗಳ ಮಹತ್ವ ಪೂರ್ಣ ಹಾಗೂ ಹೊಸ ವರ್ಷದ ಆರಂಭವಾಗಿದೆ. ಹಿಂದೂ ಚಾಂದ್ರಮಾನ ಕ್ಯಾಲೆಂಡರ್‌ನ ಚೈತ್ರ ಮಾಸದ ಮೊದಲ ದಿನವನ್ನು ಯುಗಾದಿ ಎಂದು ಆಚರಿಸಲಾಗುತ್ತದೆ. ಈ ವರ್ಷ ಯುಗಾದಿ ಹಬ್ಬವನ್ನು 2024 ಏಪ್ರಿಲ್ 09 ರ ಇಂದು ಆಚರಿಸಲಾಗುವುದು.  ಯುಗಾದಿ ಎಂಬ ಹೆಸರು ಯುಗ (ಯುಗ) ಮತ್ತು ಆದಿ (ಆರಂಭ): 'ಹೊಸ ಯುಗದ ಆರಂಭ' ಎಂಬ ಸಂಸ್ಕೃತ ಪದಗಳಿಂದ ಬಂದಿದೆ.
07:35 AM Apr 09, 2024 IST | Ashitha S

ಯುಗಾದಿ ಅಥವಾ ಉಗಾದಿ ಎಂದು ಕರೆಯುವ ಹಬ್ಬವು ಹಿಂದೂಗಳ ಮಹತ್ವ ಪೂರ್ಣ ಹಾಗೂ ಹೊಸ ವರ್ಷದ ಆರಂಭವಾಗಿದೆ. ಹಿಂದೂ ಚಾಂದ್ರಮಾನ ಕ್ಯಾಲೆಂಡರ್‌ನ ಚೈತ್ರ ಮಾಸದ ಮೊದಲ ದಿನವನ್ನು ಯುಗಾದಿ ಎಂದು ಆಚರಿಸಲಾಗುತ್ತದೆ. ಈ ವರ್ಷ ಯುಗಾದಿ ಹಬ್ಬವನ್ನು 2024 ಏಪ್ರಿಲ್ 09 ರ ಇಂದು ಆಚರಿಸಲಾಗುವುದು.  ಯುಗಾದಿ ಎಂಬ ಹೆಸರು ಯುಗ (ಯುಗ) ಮತ್ತು ಆದಿ (ಆರಂಭ): "ಹೊಸ ಯುಗದ ಆರಂಭ" ಎಂಬ ಸಂಸ್ಕೃತ ಪದಗಳಿಂದ ಬಂದಿದೆ.

Advertisement

ಯುಗಾದಿ ಹಬ್ಬ ಹಿಂದೂಗಳ ಪಾಲಿನ ಮೊದಲ ಹಬ್ಬ. ಇಲ್ಲಿಂದ ಹಿಂದೂಗಳ ಹೊಸ ವರ್ಷ ಕೂಡ ಆರಂಭವಾಗುತ್ತೆ. ವರ್ಷದ ಮೊದಲ ಹಬ್ಬ ಅಂತಾ ಕರೆಸಿಕೊಳ್ಳುವ ಈ ಹಬ್ಬವನ್ನು ಹಿಂದೂಗಳು ಅತ್ಯಂತ ಸಡಗರ ಸಂಭ್ರಮದಿಂದಲೇ ಆಚರಿಸುತ್ತಾರೆ. ಮನೆಗಳಿಗೆ ಸುಣ್ಣ ಬಣ್ಣ, ಹೊಸ ಬಟ್ಟೆ, ವಿವಿಧ ರೀತಿಯ ಅಡುಗೆಗಳನ್ನು ಮಾಡುವ ಮೂಲಕ ಈ ಹಬ್ಬವನ್ನು ಆಚರಿಸುತ್ತಾರೆ. ಇನ್ನೂ ಈ ಹಬ್ಬದಲ್ಲಿ ಬೇವು ಬೆಲ್ಲವನ್ನು ಸ್ವೀಕರಿಸುವುದೇ ಹಬ್ಬದ ವಿಶೇಷ.

ವರ್ಷದ ಮೊದಲ ದಿನವೇ ಬೇವು ಬೆಲ್ಲವನ್ನು ತಿನ್ನುವುದು ಹಬ್ಬದ ಸಂಪ್ರದಾಯ. ಬೇವು ಬೆಲ್ಲವು ಜೀವನದ ಕಹಿ ಸಿಹಿ ಅನುಭವ ಎರಡನ್ನೂ ಒಟ್ಟಿಗೆ ಸರಿಯಾಗಿಸಿ ಜೀವನ ನಡೆಸಬೇಕು ಎಂಬುದು ಹಬ್ಬದ ಸಂಕೇತವಾಗಿದೆ.

Advertisement

ಇನ್ನು ಯುಗಾದಿ ದಿನದಂದು ಕಾಣಿಸುವ ಚಂದ್ರನನ್ನು ಆಧರಿಸಿ ಹಿಂದೆ ಆ ವರ್ಷದ ಮಳೆ-ಬೆಳೆ, ರೋಗ-ರುಜಿನಗಳು, ಏಳು-ಬೀಳುಗಳ ಬಗ್ಗೆ ಚಿಂತನೆ ಮಾಡುತ್ತಿದ್ದರು. ಯುಗಾದಿಯಂದು ಚಂದ್ರನು ಅತ್ಯಂತ ಚಿಕ್ಕದಾಗಿ ಸಣ್ಣ ಗೆರೆಯ ರೀತಿಯಲ್ಲಿ ಕಾಣ ಸಿಗುತ್ತಾನೆ. ಇದನ್ನು ಆಧರಿಸಿ ವರ್ಷದ ಭವಿಷ್ಯವನ್ನು ನಿರ್ಧರಿಸುತ್ತಿದ್ದರು. ಅದಕ್ಕೆಂದೇ ಹೊಸ ವರ್ಷದ ಪಂಚಾಂಗವನ್ನು ಪಠಿಸಿ, ಅನಂತರ ಚಂದ್ರ ದರ್ಶನವನ್ನು ಮಾಡಲಾಗುತ್ತದೆ. ಯುಗಾದಿಯ ಹಿಂದಿನ ದಿನ ಅಮಾವಾಸ್ಯೆಯಲ್ಲಿ ಬರುವುದರಿಂದ ಮರು ದಿನ ಚಂದ್ರನ ದರ್ಶನಕ್ಕೆ ಪುಣ್ಯ ಮಾಡಿರಬೇಕು.

ಗಣಪತಿ ತನ್ನ ವಾಹನ ಇಲಿಯನ್ನೇರಿ ಹೋಗುತ್ತಿದ್ದಾಗ ಆಯತಪ್ಪಿ ಬೀಳುತ್ತಾನೆ. ಇದನ್ನು ಕಂಡು ಆಕಾಶದಲ್ಲಿದ್ದ ಚಂದ್ರ ನಗುತ್ತಾನೆ. ಇದನ್ನು ನೋಡಿದ ಗಣೇಶ, ಚೌತಿಯ ದಿನ ಚಂದ್ರನನ್ನು ನೋಡಿದರೆ ಅಪವಾದ ಬರಲಿ ಎಂದು ಶಾಪ ನೀಡುತ್ತಾನೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಶಾಪ ವಿಮೋಚನೆಗೆ ಯುಗಾದಿ ಚಂದ್ರನ ದರ್ಶನ ಮಾಡಬೇಕು ಎಂಬ ನಂಬಿಕೆ ಇದೆ.

ಆ ದಿನ ಚಿಕ್ಕವರು ದೊಡ್ಡವರೆನ್ನದೆ ಪ್ರತಿಯೊಬ್ಬರು ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳಿತು ಮನೆಯ ಹಿರಿಯರ ಕೈಯಲ್ಲಿ ಹಣೆಗೆ ಕುಂಕುಮವನ್ನು ಹೆಚ್ಚಿಸಿಕೊಳ್ಳಬೇಕು. ಅನಂತರ ಎಣ್ಣೆಯನ್ನು ಹಚ್ಚಿಕೊಂಡು ಸೀಗೆಕಾಯಿಪುಡಿ ಬಳಸಿ ತಲೆಸ್ನಾನ ಮಾಡಬೇಕು. ಇನ್ನೊಂದು ಮುಖ್ಯ ವಿಚಾರವೆಂದರೆ ಒಂದೇ ದಿನ ಸೀಗೆಪುಡಿ ಮತ್ತು ಎಣ್ಣೆಯನ್ನು ಮನೆಗೆ ತರಬಾರದು. ಹಾಗೆಯೇ ಹೆಣ್ಣುಮಕ್ಕಳು ಯಾವುದೇ ಕಾರಣಕ್ಕೂ ತವರು ಮನೆಯಿಂದ ಸೀಗೆಪುಡಿ, ಚಿಗರೆ ಪುಡಿ ಅಥವಾ ಯಾವುದೇ ರೀತಿಯ ಎಣ್ಣೆಯನ್ನು ತರಬಾರದು. ಧಾರ್ಮಿಕ ಗ್ರಂಥಗಳಲ್ಲಿ ತಿಳಿಸಿರುವಂತೆ ಯುಗಾದಿಯ ದಿನದಂದು ಎಣ್ಣೆ ಸ್ನಾನವನ್ನು ಮಾಡದೇ ಹೋದಲ್ಲಿ ನರಕ ಪ್ರಾಪ್ತಿಆಗುತ್ತದೆ. ತಲೆಸ್ನಾನ ಮಾಡಿದ ನಂತರ ಮನೆಯ ಬಾಗಿಲಿಗೆ ಮಾವಿನ ಎಲೆಯಿಂದ ತೋರಣವನ್ನು ಕಟ್ಟಬೇಕು.

ತೋರಣದ ಎರಡು ತುದಿಗಳಲ್ಲಿ ಬೇವಿನ ಕುಡಿಗಳನ್ನು ಸಿಕ್ಕಿಸಬೇಕು. ಆದರೆ ಯಾವುದೇ ಕಾರಣಕ್ಕೂ ಒಂದು ಅಥವಾ ಮೂರು ಕಡೆ ತೋರಣವನ್ನು ಕಟ್ಟಬಾರದು. ಹೊಸ್ತಿಲು ಮತ್ತು ಮುಖ್ಯದ್ವಾರದ ಮೇಲ್ಭಾಗದಲ್ಲಿ ಅರಿಶಿನ ಮತ್ತು ಕುಂಕುಮಗಳನ್ನು ಲೇಪಿಸಬೇಕು. ಆದರೆ ಮನೆಯ ಒಳಗೆ ನಿಂತು ಅರಿಶಿನ, ಕುಂಕುಮ ಮತ್ತು ಗಂಧವನ್ನು ಲೇಪಿಸಬಾರದು.

ಹೊಸ ಚಿಗುರು, ಹೊಸ ನಗು, ಹೊಸ ದಿನ, ಹೊಸ ಜೀವನ.. ಹೊಸ ವರ್ಷ ನಿಮ್ಮ ಜೀವನದಲ್ಲಿ ಹೊಸತನ ತರಲಿ. ಯುಗಾದಿ ಹಬ್ಬದ ಶುಭಾಶಯಗಳು.

Advertisement
Tags :
BJPBreakingNewsCongressfestivalGOVERNMENTindiaKARNATAKANewsKarnatakaUgadi
Advertisement
Next Article