For the best experience, open
https://m.newskannada.com
on your mobile browser.
Advertisement

ಕಿಂಗ್ಸ್‌-ರಾಯಲ್ಸ್‌ ಕದನದಲ್ಲಿ ಕಲಾಶ್‌ನಿಕಾವೋ: ಕೊಹ್ಲಿ ಕೆಣಕಿ ಉಳಿದವರುಂಟೇ

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಆರ್‌ ಸಿ ಬಿ ತಂಡ ಪಂಜಾಬ್ ಕಿಂಗ್ಸ್ ಅನ್ನು 60 ರನ್‌ಗಳಿಂದ ಸೋಲಿಸಿ ಪ್ಲೇಆಫ್ ತಲುಪುವ ಭರವಸೆಯನ್ನು ಜೀವಂತವಾಗಿರಿಸಿದೆ. ವಿರಾಟ್ ಕೊಹ್ಲಿ -ರಜತ್ ಪಟಿದಾರ್ ಅದ್ಭುತ ಬ್ಯಾಟಿಂಗ್ ನೆರವಿನಿಂದ ಆರ್​ಸಿಬಿ ಬೃಹತ್ ಮೊತ್ತ ಕಲೆಹಾಕಿದರೆ, ಅದಕ್ಕೆ ತಕ್ಕಂತೆ ಫಾಫ್ ಪಡೆ ಬೌಲರ್​ಗಳು ಸಾಥ್ ನೀಡಿದರು.
12:17 PM May 10, 2024 IST | Ashitha S
ಕಿಂಗ್ಸ್‌ ರಾಯಲ್ಸ್‌ ಕದನದಲ್ಲಿ ಕಲಾಶ್‌ನಿಕಾವೋ  ಕೊಹ್ಲಿ ಕೆಣಕಿ ಉಳಿದವರುಂಟೇ

ಹಿಮಾಚಲ ಪ್ರದೇಶ: ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಆರ್‌ ಸಿ ಬಿ ತಂಡ ಪಂಜಾಬ್ ಕಿಂಗ್ಸ್ ಅನ್ನು 60 ರನ್‌ಗಳಿಂದ ಸೋಲಿಸಿ ಪ್ಲೇಆಫ್ ತಲುಪುವ ಭರವಸೆಯನ್ನು ಜೀವಂತವಾಗಿರಿಸಿದೆ. ವಿರಾಟ್ ಕೊಹ್ಲಿ -ರಜತ್ ಪಟಿದಾರ್ ಅದ್ಭುತ ಬ್ಯಾಟಿಂಗ್ ನೆರವಿನಿಂದ ಆರ್​ಸಿಬಿ ಬೃಹತ್ ಮೊತ್ತ ಕಲೆಹಾಕಿದರೆ, ಅದಕ್ಕೆ ತಕ್ಕಂತೆ ಫಾಫ್ ಪಡೆ ಬೌಲರ್​ಗಳು ಸಾಥ್ ನೀಡಿದರು.

Advertisement

ಆರ್​ಸಿಬಿ ನೀಡಿದ್ದ ಟಾರ್ಗೆಟ್ ಬೆನ್ನಟ್ಟಲು ಬಂದ ಪಂಜಾಬ್ ಕೂಡ ಕಠಿಣ ಪೈಪೋಟಿ ನೀಡಿತು. ರಿಲೀ ರೂಸೋ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಆದರೆ, ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಇದೀಗ ರೂಸೋ ಔಟಾದಾಗ ವಿರಾಟ್ ಕೊಹ್ಲಿಯ ಸಂಭ್ರಮಾಚರಣೆ ವಿಡಿಯೋ ವೈರಲ್ ಆಗುತ್ತಿದೆ.

Advertisement

ಆರ್​ಸಿಬಿ ನೀಡಿದ್ದ 242 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಪಂಜಾಬ್ ಪರ ರಿಲೀ ರೂಸೋ ಸ್ಫೋಟಕ ಬ್ಯಾಟಿಂಗ್ ನಡೆಸಿ ಬೆಂಗಳೂರಿನ ಬೌಲರ್‌ಗಳನ್ನು ದಂಡಿಸಿದರು. ಕೇವಲ 21 ಎಸೆತಗಳಲ್ಲಿ 225 ಸ್ಟ್ರೈಕ್ ರೇಟ್‌ನಲ್ಲಿ ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು. ಅರ್ಧಶತಕ ಬಾರಿಸಿದ ಬಳಿಕ ಅವರು ಗನ್‌ ಶಾಟ್‌ ರೀತಿಯ ಭಂಗಿ ಮೂಲಕ ಸಂಭ್ರಮಿಸಿದ್ದರು. ರೂಸೋ ಅವರ 27 ಎಸೆತಗಳ ಇನ್ನಿಂಗ್ಸ್‌ನಲ್ಲಿ 61 ರನ್ ಗಳಿಸಿದರು. ಈ ಅವಧಿಯಲ್ಲಿ ಅವರ ಬ್ಯಾಟ್‌ನಿಂದ 9 ಬೌಂಡರಿ ಮತ್ತು 3 ಸಿಕ್ಸರ್‌ಗಳು ಕಾಣಿಸಿಕೊಂಡವು.
https://twitter.com/IamMomina_19/status/1788797954523860994/photo/1

ಬಳಿಕ ಅವರು ಔಟಾದಾಗ ವಿರಾಟ್ ಕೊಹ್ಲಿ ಮಾಡಿದ ಸೆಲೆಬ್ರೇಷನ್ ಸಖತ್ ವೈರಲ್ ಆಗುತ್ತಿದೆ. ರುಸ್ಸೊ ಔಟಾಗುತ್ತಲೇ ವಿರಾಟ್‌ ಕೊಹ್ಲಿ ಅವರೂ ಗನ್‌ನಿಂದ ಶೂಟ್‌ ಮಾಡುವ ರೀತಿ ಕುಟುಕಿದರು. ಈ ವೀಡಿಯೋ ಸೋಷಿಯಲ್‌ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಕೊಹ್ಲಿ ಅಭಿಮಾನಿಗಳಂತೂ ಈ ವೀಡಿಯೋ ನೋಡಿ ಖುಷಿಪಟ್ಟಿದ್ದಾರೆ. ಇನ್ನೂ ಕೆಲವರು ಕೆಜಿಎಫ್‌-2 ಚಿತ್ರದಲ್ಲಿ ಯಶ್‌ ಅವರು ಹಿಡಿಯುವ ಕಲಾಶ್‌ನಿಕಾವೊ ಗನ್‌ಗೆ ಹೋಲಿಸಿ ಸಂಭ್ರಮಿಸಿದ್ದಾರೆ.

https://twitter.com/Alon_muskh/status/1788804620846039522/video/2

ಪ್ರತಿಯೊಬ್ಬ ಅಭಿಮಾನಿಯನ್ನು ನಕ್ಕುನಲಿಸುವ ಕೊಹ್ಲಿ ಈವರೆಗೆ ಗೌತಮ್‌ ಗಂಭೀರ್‌, ಅವೇಶ್‌ ಖಾನ್‌, ನವೀನ್‌ ಹುಲ್‌ ಹಕ್‌ ಅವರಿಗೆ ಅವರದ್ದೇ ಶೈಲಿಯಲ್ಲಿ ತಿರುಗೇಟು ನೀಡಿದ್ದರು. ಇತ್ತೀಚೆಗೆ ತಮ್ಮ ಸ್ಟ್ರೇಕ್‌ರೇಟ್‌ ಕುರಿತು ಮಾತನಾಡುತ್ತಿದ್ದ ಸುನೀಲ್‌ ಗವಾಸ್ಕರ್‌ ಅವರಿಗೂ ಬ್ಯಾಟ್‌ ಮೂಲಕವೇ ಉತ್ತರ ಕೊಟ್ಟ ಕಿಂಗ್‌ ಕೊಹ್ಲಿ, ಮೈದಾನದಲ್ಲಿ ಪಂಜಾಬ್‌ ಕಿಂಗ್ಸ್‌ ಆಟಗಾರ ರೀಲಿ ರುಸ್ಸೊ ಅವರಿಗೆ ಅವರದ್ದೇ ಶೈಲಿಯಲ್ಲಿ ತಿರುಗೇಟು ಕೊಟ್ಟಿದ್ದಾರೆ.

Advertisement
Tags :
Advertisement