ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕೋಟ: ಸ್ಲೈಡಿಂಗ್ ಗೇಟ್ ಮೈಮೇಲೆ ಬಿದ್ದು 3 ವರ್ಷದ ಬಾಲಕ ಮೃತ್ಯು

ರೆಸಾರ್ಟ್ ಕಂಪೌಂಡ್ ನ ಸ್ಲೈಡಿಂಗ್ ಗೇಟ್ ಮೈಮೇಲೆ ಬಿದ್ದು 3 ವರ್ಷದ ಬಾಲಕನೋರ್ವ ಮೃತಪಟ್ಟ ಘಟನೆ ಬ್ರಹ್ಮಾವರ ತಾಲೂಕಿನ ಕೋಟತಟ್ಟುವಿನ ಪಡುಕೆರೆ ಎಂಬಲ್ಲಿ ನಡೆದಿದೆ.
11:51 AM Nov 22, 2023 IST | Gayathri SG

ಉಡುಪಿ: ರೆಸಾರ್ಟ್ ಕಂಪೌಂಡ್ ನ ಸ್ಲೈಡಿಂಗ್ ಗೇಟ್ ಮೈಮೇಲೆ ಬಿದ್ದು 3 ವರ್ಷದ ಬಾಲಕನೋರ್ವ ಮೃತಪಟ್ಟ ಘಟನೆ ಬ್ರಹ್ಮಾವರ ತಾಲೂಕಿನ ಕೋಟತಟ್ಟುವಿನ ಪಡುಕೆರೆ ಎಂಬಲ್ಲಿ ನಡೆದಿದೆ.

Advertisement

ಮೃತ ಬಾಲಕನನ್ನು ಕೋಟತಟ್ಟು ಪಡುಕೆರೆಯ ಸುಧೀರ್ ಕೋಟ್ಯಾನ್ ಹಾಗೂ ಶಾರದಾ ಅವರ ಪುತ್ರ ಸುಶಾಂತ್ (3) ಎಂದು ಗುರುತಿಸಲಾಗಿದೆ. ಬಾಲಕ ಕೋಟತಟ್ಟು ಪಡುಕೆರೆಯ ಬೀಚ್ ಸಮೀಪ ಇರುವ ರೆಸಾರ್ಟ್ ಎದುರಿನ ಗೇಟ್ ಬಳಿ ನಿನ್ನೆ ಸಂಜೆ ಪಕ್ಕದ ಮನೆಯ ಹುಡುಗನ ಜೊತೆ ಆಟವಾಡುತ್ತಿದ್ದನು.

ಈ ವೇಳೆ ಆಕಸ್ಮಿಕವಾಗಿ ಮೈಮೇಲೆ ಸ್ಲೈಡಿಂಗ್ ಗೇಟ್ ಜಾರಿ ಬಿದ್ದಿದ್ದು, ಇದರಿಂದ ಸುಶಾಂತ್ ತಲೆಗೆ ಗಂಭೀರ ಗಾಯವಾಗಿದೆ. ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಬಾಲಕ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಕೋಟ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Advertisement
Tags :
LatestNewsNewsKannadaUDUPIಕೋಟಸ್ಲೈಡಿಂಗ್ ಗೇಟ್
Advertisement
Next Article