ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕೆಎಸ್ ಆರ್ ಟಿಸಿಯ 'ನಮ್ಮ ಕಾರ್ಗೋ' ಟ್ರಕ್ ಸೇವೆಗೆ ಚಾಲನೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ ಆರ್ ಟಿಸಿ)ಯ ‘ನಮ್ಮ ಕಾರ್ಗೋ’ ಟ್ರಕ್ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಶನಿವಾರ ಚಾಲನೆ ನೀಡಿದರು.
11:44 AM Dec 25, 2023 IST | Ashitha S

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ ಆರ್ ಟಿಸಿ)ಯ ‘ನಮ್ಮ ಕಾರ್ಗೋ’ ಟ್ರಕ್ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಶನಿವಾರ ಚಾಲನೆ ನೀಡಿದರು.

Advertisement

ಇಂದು 20 ಟ್ರಕ್ ಗಳಿಗೆ ಚಾಲನೆ ನೀಡಿ ಮಾತನಾಡಿದ ಸಾರಿಗೆ ಸಚಿವರು, ಒಂದು ತಿಂಗಳಲ್ಲಿ 100 ಟ್ರಕ್‌ಗಳನ್ನು ಮತ್ತು ಮುಂದಿನ ವರ್ಷದ ಅಂತ್ಯದ ವೇಳೆಗೆ 500 ಟ್ರಕ್‌ಗಳನ್ನು ಕಾರ್ಗೋ ಸೇವೆಗೆ ಒದಗಿಸಲಾಗುವುದು ಎಂದು ಹೇಳಿದರು.

ಈ ಟ್ರಕ್‌ಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣವನ್ನು ಡಿಪೋವಾಗಿ ಬಳಸಿಕೊಳ್ಳಲಾಗುವುದು ಮತ್ತು ವಾಣಿಜ್ಯ ಆದಾಯ ಗಳಿಸಲು ಉಳಿದ ಖಾಲಿ ಜಾಗವನ್ನು ಸರ್ಕಾರಿ ಕಂಪನಿಗಳಿಗೆ ನೀಡಲಾಗುವುದು ಎಂದು ರೆಡ್ಡಿ ತಿಳಿಸಿದರು.

Advertisement

ಇನ್ನು ಕೆಎಸ್‌ಆರ್‌ಟಿಸಿ 2021 ರಲ್ಲಿಯೇ ಬಸ್ ಗಳಲ್ಲಿ ತನ್ನ ಸರಕು ವ್ಯಾಪಾರ ಸೇವೆಯನ್ನು ಪ್ರಾರಂಭಿಸಿತು. ಇದೀಗ ಸಾರಿಗೆ ಸಂಸ್ಥೆ ಹೆಚ್ಚು ಭಾರವಾದ ಸರಕುಗಳನ್ನು ಸಾಗಿಸಲು ಟ್ರಕ್‌ಗಳನ್ನು ಬಳಸಲು ಆರಂಭಿಸಿದೆ. ಈಗ ಆರು ಚಕ್ರಗಳ ಟ್ರಕ್​​ನಲ್ಲಿ 6 ಟನ್ ಸರಕುಗಳನ್ನು ಸಾಗಿಸಬಹುದಾಗಿದೆ.

ಕೆಎಸ್‌ಆರ್‌ಟಿಸಿ ಪ್ರಕಾರ, ಈ ಟ್ರಕ್‌ಗಳು ಬೆಂಗಳೂರು, ಮೈಸೂರು, ತುಮಕೂರು, ಹಾಸನ, ಮಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಕೋಲಾರ, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಸ್ಥಳಗಳಿಂದ ಕಾರ್ಯನಿರ್ವಹಿಸುತ್ತವೆ. ಈ ಕುರಿತು ಉತ್ತಮ ಪ್ರತಿಕ್ರಿಯೆ ಬಂದಲ್ಲಿ, ಹೆಚ್ಚಿನ ಟ್ರಕ್‌ಗಳನ್ನು ಕೊಂಡುಕೊಂಡು ಇನ್ನಷ್ಟು ಜಿಲ್ಲೆಗಳಿಂದ ಸಂಚರಿಸಲಿವೆ. ಆರಂಭದಲ್ಲಿ, ಸಾರಿಗೆ ಇಲಾಖೆಯು ಔಷಧಿ, ಜವಳಿ, ಆಹಾರ ಉದ್ಯಮಗಳಿಂದ ಸರಕುಗಳನ್ನು ಸಾಗಿಸಲು ಯೋಜಿಸಿರುವುದಾಗಿ ತಿಳಿಸಿದೆ.

 

Advertisement
Tags :
'ನಮ್ಮ ಕಾರ್ಗೋGOVERNMENTindiaKARNATAKALatestNewsNewsKannadaಕೆಎಸ್ ಆರ್ ಟಿಸಿಟ್ರಕ್ ಸೇವೆಬೆಂಗಳೂರು
Advertisement
Next Article