For the best experience, open
https://m.newskannada.com
on your mobile browser.
Advertisement

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆನೆಯ ಕಾಲಿಗೆ ಗಾಯ; ನಿರ್ವಹಣೆ ನಿರ್ಲಕ್ಷ್ಯ ಆರೋಪ

ರಾಜ್ಯದ ಶ್ರೀಮಂತ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಆನೆ ಕಾಲಿಗೆ ಗಾಯವಾಗಿದೆ. ಆನೆ ಮಾವುತ ಶ್ರೀನಿವಾಸ್ ಮೇಲೆ ಆನೆಯ ನಿರ್ವಹಣೆಯ ನಿರ್ಲಕ್ಷ್ಯದ ಆರೋಪ ಇದೆ. 18 ವರ್ಷ ಪ್ರಾಯದ ಯಶಸ್ವಿನಿ ಎಂಬ ಹೆಸರಿನ ಆನೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶೇಷವಾದ ಆಕರ್ಷಣೆ.
04:20 PM May 09, 2024 IST | Ashitha S
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆನೆಯ ಕಾಲಿಗೆ ಗಾಯ  ನಿರ್ವಹಣೆ ನಿರ್ಲಕ್ಷ್ಯ ಆರೋಪ

ಕುಕ್ಕೆ ಸುಬ್ರಹ್ಮಣ್ಯ: ರಾಜ್ಯದ ಶ್ರೀಮಂತ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಆನೆ ಯಶಸ್ವಿನಿ ಕಾಲಿಗೆ ಗಾಯವಾಗಿದೆ. ಆನೆ ಮಾವುತ ಶ್ರೀನಿವಾಸ್ ಮೇಲೆ ಆನೆಯ ನಿರ್ವಹಣೆಯ ನಿರ್ಲಕ್ಷ್ಯದ ಆರೋಪ ಇದೆ. 18 ವರ್ಷ ಪ್ರಾಯದ ಯಶಸ್ವಿನಿ ಎಂಬ ಹೆಸರಿನ ಆನೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶೇಷವಾದ ಆಕರ್ಷಣೆ.

Advertisement

ರಾಜ್ಯದ ಮಾಜಿ ಪ್ರವಾಸೋದ್ಯಮ ಸಚಿವ ಅನಂದ್ ಸಿಂಗ್ ಕ್ಷೇತ್ರಕ್ಕೆ ಉಡುಗೊರೆಯಾಗಿ ನೀಡಿದ್ದ ಆನೆ ಇದಾಗಿದ್ದು ಮಾವುತರ ನಡುವಿನ ವೈಮನಸ್ಸಿನ ಪರಿಣಾಮವನ್ನು ಎದುರಿಸುತ್ತಿದೆ. ಈ ಹಿಂದೆ ಮಾವುತರ ನಿರ್ಲಕ್ಷ್ಯದಿಂದ ಮೈಲು ತುತ್ತು ಸೇವಿಸಿ ಆನಾರೋಗ್ಯ ಪೀಡಿತವಾಗಿದ್ದ ಯಶಸ್ವಿನಿ ಆ ಬಳಿಕ ಸುಮಾರು ಒಂದು ತಿಂಗಳ ಕಾಲ ಅಸೌಖ್ಯದಿಂದಲೇ ಇತ್ತು. ಇದೀಗ ಆನೆಯ ಎಡ ಕಾಲಿನಲ್ಲಿ ಗಾಯವಾಗಿರುವ ಲಕ್ಷಣ ಕಂಡುಬರುತ್ತಿದ್ದು ಎಡಗಾಲನ್ನು ನೆಲಕ್ಕೆ ಊರಲಾಗದೆ ಎಳೆದುಕೊಂಡು ಸಾಗುತ್ತಿದೆ.

ಆನೆ ಕಾಲಿಗೆ ತಕ್ಷಣವೇ ಸೂಕ್ತ ಚಿಕಿತ್ಸೆ ನೀಡುವಂತೆ ಭಕ್ತರು ಒತ್ತಾಯಿಸಿದ್ದಾರೆ. ಆನೆಗೆ ಬೇಕಾದ ಸರಿಯಾದ ಆಹಾರವನ್ನೂ ಮಾವುತ ಶ್ರೀನಿವಾಸ ನೀಡುತ್ತಿಲ್ಲ ಎನ್ನುವ ಆರೋಪ ಕೇಳಿಬರುತ್ತಿದೆ. ಯಶಸ್ವಿನಿ ಆನೆಯ ಜವಾಬ್ದಾರಿಗೆಂದೇ ಏಳು ಸಿಬ್ಬಂದಿಗಳನ್ನು ಕ್ಷೇತ್ರದ ಆಡಳಿತ ನಿಯೋಜಿಸಿದೆ. ಆದರೆ ಆನೆಯನ್ನು ಸರಿಯಾಗಿ ಪರಿಶೀಲಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ ತೋರಿದ್ದಾರೆ.

Advertisement

ಕೇವಲ ಹಣ ಮಾಡಲೆಂದೇ ಆನೆಯನ್ನು ಬಳಸುತ್ತಿರುವ ಮಾವುತ ಶ್ರೀನಿವಾಸ್
ಆನೆಯನ್ನು ಸುಬ್ರಹ್ಮಣ್ಯ ಕ್ಷೇತ್ರದ ಒಳಾಂಗಣದಲ್ಲಿ ನಿಲ್ಲಿಸುತ್ತಾರೆ. ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರಿಗೆ ಆನೆ ಆಶೀರ್ವಾದ ಮಾಡುತ್ತದೆ. ಆಶೀರ್ವಾದ ಪಡೆದು ಮಾವುತರಿಗೆ ಭಕ್ತರು ಹಣ ನೀಡುತ್ತಾರೆ.

ಆನೆ ಮಾವುತರು ಹಣ ಪಡೆಯುವಂತಿಲ್ಲ ಎನ್ನುವ ನಿಯಮವಿದ್ದರೂ ಹಣ ಕಲೆಕ್ಷನ್ ನಡೆಯುತ್ತಿದೆ. ಈ ಕಲೆಕ್ಷನ್ ನಲ್ಲಿ ಕ್ಷೇತದ ಅಧಿಕಾರಿಗಳು ಮತ್ತು ವ್ಯವಸ್ಥಾಪನಾ ಸಮಿತಿಗೂ ಪಾಲು ಇದೆ ಎನ್ನುವ ಆರೋಪ ಕೇಳಿಬರ್ತಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಭಕ್ತಸಮೂಹ ಆಗ್ರಹಿಸುತ್ತಿದೆ. ಮಾವುತ ಶ್ರೀನಿವಾಸ್ ಗೆ ನಿವೃತ್ತಿ ಹೊಂದಿದ್ದರು ಮತ್ತೆ ಮರು ನೇಮಕ ಮಾಡಿರುವುದರ ಬಗ್ಗೆಯೂ ಭಕ್ತರು ವಿರೋಧ ವ್ಯಕ್ತಪಡಿಸಿದ್ದಾರೆ.

Advertisement
Tags :
Advertisement