ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಇಂಗ್ಲಿಷ್ ಸರಿಯಾಗಿ ಅರ್ಥವಾಗದಿರುವುದು ಆರ್​ಸಿಬಿ ತಂಡದ ಸೋಲಿಗೆ ಕಾರಣ : ಸೆಹ್ವಾಗ್

ಆರ್​ಸಿಬಿಯಲ್ಲಿ  ಕೆಲವರು ಮಾತ್ರ ಅಂತರರಾಷ್ಟ್ರೀಯ ಆಟಗಾರರು. ಉಳಿದವರೆಲ್ಲರೂ ಭಾರತೀಯರು ಮತ್ತು ಅವರಲ್ಲಿ ಅರ್ಧದಷ್ಟು ಜನರಿಗೆ ಇಂಗ್ಲಿಷ್ ಸರಿಯಾಗಿ ಅರ್ಥವಾಗುವುದಿಲ್ಲ. ಆ ತಂಡದಲ್ಲಿ ಒಬ್ಬನೇ ಒಬ್ಬ ಭಾರತೀಯ ಸಿಬ್ಬಂದಿ ಇಲ್ಲ. ಕನಿಷ್ಠ ಆಟಗಾರರು ನಂಬಬಹುದಾದ ಯಾರಾದರೂ ಇರಬೇಕು ಎಂದು ಸೆಹ್ವಾಗ್ ಆರ್​ಸಿಬಿ ಮ್ಯಾನೇಜ್ಮೆಂಟ್ ಅನ್ನು ಪ್ರಶ್ನಿಸಿದ್ದಾರೆ.
09:00 PM Apr 16, 2024 IST | Chaitra Kulal

ಬೆಂಗಳೂರು: ಆರ್​ಸಿಬಿಯಲ್ಲಿ  ಕೆಲವರು ಮಾತ್ರ ಅಂತರರಾಷ್ಟ್ರೀಯ ಆಟಗಾರರು. ಉಳಿದವರೆಲ್ಲರೂ ಭಾರತೀಯರು ಮತ್ತು ಅವರಲ್ಲಿ ಅರ್ಧದಷ್ಟು ಜನರಿಗೆ ಇಂಗ್ಲಿಷ್ ಸರಿಯಾಗಿ ಅರ್ಥವಾಗುವುದಿಲ್ಲ. ಆ ತಂಡದಲ್ಲಿ ಒಬ್ಬನೇ ಒಬ್ಬ ಭಾರತೀಯ ಸಿಬ್ಬಂದಿ ಇಲ್ಲ. ಕನಿಷ್ಠ ಆಟಗಾರರು ನಂಬಬಹುದಾದ ಯಾರಾದರೂ ಇರಬೇಕು ಎಂದು ಸೆಹ್ವಾಗ್ ಆರ್​ಸಿಬಿ ಮ್ಯಾನೇಜ್ಮೆಂಟ್ ಅನ್ನು ಪ್ರಶ್ನಿಸಿದ್ದಾರೆ.

Advertisement

ದೊಡ್ಡ ಸಮಸ್ಯೆಯೆಂದರೆ ಭಾರತೀಯ ಸಹಾಯಕ ಸಿಬ್ಬಂದಿಯ ಕೊರತೆ. ನಿಮ್ಮ ಬಳಿ 12ರಿಂದ 15 ಭಾರತೀಯ ಆಟಗಾರರು ಇದ್ದಾರೆ. ಕೇವಲ 10 ವಿದೇಶಿ ಆಟಗಾರರನ್ನು ಹೊಂದಿದ್ದೀರಿ. ನಿಮ್ಮ ಇಡೀ ಸಹಾಯಕ ಸಿಬ್ಬಂದಿ ವರ್ಗ ವಿದೇಶಿಯರಾಗಿದ್ದಾರೆ ಅದುವೇ ಸಮಸ್ಯೆಯಾಗಿದೆ.

ಆಟಗಾರರಿಗೆ ಆರಾಮದಾಯಕ ಪರಿಸ್ಥಿತಿ ಸಿಗಬೇಕು. ನಾಯಕ ಫಾಫ್ ಡು ಪ್ಲೆಸಿಸ್ ಅವರ ಮುಂದೆ ನಿಲ್ಲುವುದೇ ಇಲ್ಲ. ಯಾಕೆಂದರೆ ಅವರಿಗೆ ಭಾಷೆ ಬರುವುದಿಲ್ಲ. ಅವರು ಏನನ್ನಾದರೂ ಕೇಳಿದರೆ, ಅವರು ಉತ್ತರಿಸಬೇಕಾಗುತ್ತದೆ.

Advertisement

ನಾಯಕ ಭಾರತೀಯನಾಗಿದ್ದರೆ, ಆಟಗಾರನ ಮನಸ್ಸಿನಲ್ಲಿ ಏನಾಗುತ್ತಿದೆ ಹಂಚಿಕೊಳ್ಳಬಹುದು. ವಿದೇಶಿ ಆಟಗಾರರಿಗೆ ಇದೇ ಪರಿಸ್ಥಿತಿ ಎದುರಾಗಿದ್ದರೆ ಏನು ಮಾಡಬೇಕಾಗಿತ್ತು. ಹೀಗಾಗಿ ಆರ್​ಸಿಬಿಗೆ ಕನಿಷ್ಠ 2-3 ಭಾರತೀಯ ಸಹಾಯಕ ಸಿಬ್ಬಂದಿಯ ಅಗತ್ಯವಿದೆ ಎಂದು ಸೆಹ್ವಾಗ್ ಹೇಳಿದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಂದು ನಿರಾಶಾದಾಯಕ ಸೋಲಿಗೆ ಒಳಗಾಗಿದೆ. ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಆವೃತ್ತಿಯಲ್ಲಿ ಆಘಾತಕಾರಿ ಫಲಿತಾಂಶ ಎದುರಿಸಿದೆ.

ಪ್ರತಿ ಋತುವಿನಲ್ಲಿ, ಫ್ರಾಂಚೈಸಿ ತಮ್ಮ ಅಭಿಮಾನಿಗಳಿಗೆ ಕಳಪೆ ಪ್ರದರ್ಶನದಿಂದ ಅವರಿಗೆ ಬೇಸರ ಮೂಡಿಸುತ್ತದೆ. 2024 ರ ಅಭಿಯಾನವು ಅದಕ್ಕಿಂತ ಭಿನ್ನವಾಗಿಲ್ಲ. ಆರ್​ಸಿಬಿ 7 ಪಂದ್ಯಗಳಲ್ಲಿ 6 ಸೋಲುಗಳನ್ನು ಅನುಭವಿಸಿ 10 ತಂಡಗಳ ಪಾಯಿಂಟ್ಸ್​​ ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿದೆ.

 

Advertisement
Tags :
LatestNewsNewsKarnatakaRCBಬೆಂಗಳೂರು
Advertisement
Next Article