For the best experience, open
https://m.newskannada.com
on your mobile browser.
Advertisement

ರಾಜ್ಯತ್ವ ಹಾಗೂ ರಕ್ಷಣೆಗಾಗಿ ಲಡಾಖ್‌ನಲ್ಲಿ ಬೀದಿಗಿಳಿದು ಪ್ರತಿಭಟಿಸಿದ ಜನ

ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ರಾಜ್ಯತ್ವ ಮತ್ತು ಸಂವಿಧಾನದ ಆರನೇ ಪರಿಚ್ಛೇದದಡಿಯಲ್ಲಿ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ಮೈಕೊರೆಯುವ ಚಳಿಯ ನಡುವೆಯೂ ಸಾವಿರಾರು ಜನರು ಬೀದಿಗಿಳಿದು  ಪ್ರತಿಭಟನೆ ನಡೆಸಿದ್ದಾರೆ.
12:08 PM Feb 04, 2024 IST | Ashitha S
ರಾಜ್ಯತ್ವ ಹಾಗೂ ರಕ್ಷಣೆಗಾಗಿ ಲಡಾಖ್‌ನಲ್ಲಿ ಬೀದಿಗಿಳಿದು ಪ್ರತಿಭಟಿಸಿದ ಜನ

ಡಾಖ್‌: ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ರಾಜ್ಯತ್ವ ಮತ್ತು ಸಂವಿಧಾನದ ಆರನೇ ಪರಿಚ್ಛೇದದಡಿಯಲ್ಲಿ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ಮೈಕೊರೆಯುವ ಚಳಿಯ ನಡುವೆಯೂ ಸಾವಿರಾರು ಜನರು ಬೀದಿಗಿಳಿದು  ಪ್ರತಿಭಟನೆ ನಡೆಸಿದ್ದಾರೆ.

Advertisement

ಲೇಹ್ ಅಪೆಕ್ಸ್ ಬಾಡಿ  ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್  ಜಂಟಿಯಾಗಿ ಪ್ರತಿಭಟನೆಗೆ ಕರೆ ನೀಡಿತ್ತು. ಲಡಾಖ್‌ಗೆ ರಾಜ್ಯ ಸ್ಥಾನಮಾನ, ಸಂವಿಧಾನದ ಆರನೇ ಪರಿಚ್ಛೇದದಡಿಯಲ್ಲಿ ಸಾಂವಿಧಾನಿಕ ರಕ್ಷಣೆ, ಯುವಕರಿಗೆ ಉದ್ಯೋಗಗಳಲ್ಲಿ ಮೀಸಲಾತಿ ಮತ್ತು ಲೇಹ್-ಕಾರ್ಗಿಲ್‌ಗೆ ಪ್ರತ್ಯೇಕ ಸಂಸದೀಯ ಕ್ಷೇತ್ರಗಳನ್ನು ರಚಿಸಬೇಕು ಎಂದು ಘೋಷಣೆಗಳನ್ನು ಕೂಗಿ ರ್‍ಯಾಲಿ ನಡೆಸಿದ್ದಾರೆ.

ಸಾವಿರಾರು ಜನರು ಫಲಕಗಳನ್ನು ಹಿಡಿದು ಘೋಷಣೆ ಕೂಗುತ್ತಾ ಸಾಗುವ ವಿಡಿಯೊ ವೈರಲ್‌ ಆಗುತ್ತಿದೆ. ಲಡಾಖ್‌ ಜನರ ಬೇಡಿಕೆ ಕುರಿತು ಚರ್ಚಿಸಲು ಕೇಂದ್ರ ಗೃಹ ಸಚಿವಾಲಯವು ಫೆಬ್ರುವರಿ 19 ರಂದು ನವದೆಹಲಿಯಲ್ಲಿ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರ ಅಧ್ಯಕ್ಷತೆಯಲ್ಲಿ ಲಡಾಖ್ ಉನ್ನತ ಅಧಿಕಾರ ಸಮಿತಿಯ ಸಭೆ ಕರೆದಿದೆ.

Advertisement

Advertisement
Tags :
Advertisement