For the best experience, open
https://m.newskannada.com
on your mobile browser.
Advertisement

ಅಚಾಚ್ಯ ಶಬ್ದದಿಂದ ನಿಂದಿಸಿದ ಪ್ರಯಾಣಿಕನಿಗೆ ಚಪ್ಪಲಿಯಲ್ಲಿ ಹೊಡೆದ ಲೇಡಿ ಕಂಡಕ್ಟ‌ರ್‌

ಪ್ರಯಾಣಿಕನೊಬ್ಬ ಅಚಾಚ್ಯ ಶಬ್ದದಿಂದ ನಿಂದನೆ ಮಾಡಿದ್ದಕ್ಕೆ ಮಹಿಳಾ ಕಂಡಕ್ಟರ್‌ ಚಪ್ಪಲಿಯಿಂದ ಹೊಡೆದಿರುವ ಘಟನೆ ಮಂಗಳವಾರ ನಡೆದಿದೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
09:39 PM Jan 31, 2024 IST | Gayathri SG
ಅಚಾಚ್ಯ ಶಬ್ದದಿಂದ ನಿಂದಿಸಿದ ಪ್ರಯಾಣಿಕನಿಗೆ ಚಪ್ಪಲಿಯಲ್ಲಿ ಹೊಡೆದ ಲೇಡಿ ಕಂಡಕ್ಟ‌ರ್‌

ವಿಜಯಪುರ: ಪ್ರಯಾಣಿಕನೊಬ್ಬ ಅಚಾಚ್ಯ ಶಬ್ದದಿಂದ ನಿಂದನೆ ಮಾಡಿದ್ದಕ್ಕೆ ಮಹಿಳಾ ಕಂಡಕ್ಟರ್‌ ಚಪ್ಪಲಿಯಿಂದ ಹೊಡೆದಿರುವ ಘಟನೆ ಮಂಗಳವಾರ ನಡೆದಿದೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

Advertisement

ಕೊಲ್ಹಾರ ಪಟ್ಟಣಕ್ಕೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಚಿಲ್ಲರೆ ಹಣ ನೀಡುವ ವಿಷಯವಾಗಿ ಮಹಿಳಾ ಕಂಡಕ್ಟರ್‌ ಹಾಗೂ ಪ್ರಯಾಣಿಕನ ಮಧ್ಯ ಜಗಳ ನಡೆದಿದ್ದು, ಪ್ರಯಾಣಿಕ ಮಹಿಳಾ ಕಂಡಕ್ಟರ್‌ಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಾನೆ. ಮಹಿಳಾ ಕಂಡಕ್ಟರ್‌ ನಿಂದನೆ ಮಾಡಿದ ಪ್ರಯಾಣಿಕನಿಗೆ ಸಾರ್ವಜನಿಕವಾಗಿಯೇ ಚಪ್ಪಲಿಯಿಂದ ಹೊಡೆದಿದ್ದಾರೆ.

ಬಸ್ ಇಳಿದು ಬೈಕ್ ಮೇಲೆ ಹೊರಟ ಪ್ರಯಾಣಿಕನನ್ನು ‌ತಡೆದು ಠಾಣೆಗೆ ಬರುವಂತೆ ಹೇಳಿದ್ದಾರೆ.ಈ ವೇಳೆ ಪ್ರಯಾಣಿಕ ಕ್ಷಮೆ ಕೇಳಿದ್ದಾನೆ ಆದರೂ, ಲೇಡಿ ಕಂಡಕ್ಟರ್‌ ತಾನೂ ಅವಾಚ್ಯ ಶಬ್ದಗಳಿಂದ ನಿಂದಿಸಿ, ಚಪ್ಪಲಿಯಿಂದ ಹಲ್ಲೆ ಮಾಡಿದ ಘಟನೆ ನಡೆದಿದೆ.

Advertisement

Advertisement
Tags :
Advertisement