ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

9 ಕೋಟಿ ಮಹಿಳೆಯರ ಲಕ್ ಬದಲಿಸಲಿದೆ "ಲಕ್​ಪತಿ ದೀದಿ": ಏನಿದು ಯೋಜನೆ ?

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವತ್ತು ಮಧ್ಯಂತರ ಬಜೆಟ್ ಮಂಡಿಸಿದ್ದಾರೆ. ಈ ವೇಳೆ ಮಹಿಳೆಯರಿಗಾಗಿ ‘ಲಕ್​ಪತಿ ದೀದಿ ಯೋಜನೆ’ಯನ್ನು ಪರಿಚಯಿಸುತ್ತಿರೋದಾಗಿ ಘೋಷಣೆ ಮಾಡಿದ್ದಾರೆ. 9ಕೋಟಿ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಕೇಂದ್ರ ಸರ್ಕಾರ ಲಕ್​ಪತಿ ದೀದಿ ಯೋಜಯನೆಯನ್ನು ಆರಂಭಿಸಿದೆ. ಆರ್ಥಿಕವಾಗಿ ಹಿಂದುಳಿದ ಮಹಿಳೆಯರನ್ನು ಮುಂದೆ ತರುವುದು ಈ ಯೋಜನೆಯ ಉದ್ದೇಶ. ಈ ಮೂಲಕ ಮಹಿಳೆಯರನ್ನು ಸಂಪೂರ್ಣವಾಗಿ ಸ್ವಾವಲಂಬಿಗಳಾಗಿ ಮಾಡೋದಾಗಿದೆ.
02:46 PM Feb 01, 2024 IST | Ashitha S

ದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವತ್ತು ಮಧ್ಯಂತರ ಬಜೆಟ್ ಮಂಡಿಸಿದ್ದಾರೆ. ಈ ವೇಳೆ ಮಹಿಳೆಯರಿಗಾಗಿ ‘ಲಕ್​ಪತಿ ದೀದಿ ಯೋಜನೆ’ಯನ್ನು ಪರಿಚಯಿಸುತ್ತಿರೋದಾಗಿ ಘೋಷಣೆ ಮಾಡಿದ್ದಾರೆ. 9ಕೋಟಿ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಕೇಂದ್ರ ಸರ್ಕಾರ ಲಕ್​ಪತಿ ದೀದಿ ಯೋಜಯನೆಯನ್ನು ಆರಂಭಿಸಿದೆ. ಆರ್ಥಿಕವಾಗಿ ಹಿಂದುಳಿದ ಮಹಿಳೆಯರನ್ನು ಮುಂದೆ ತರುವುದು ಈ ಯೋಜನೆಯ ಉದ್ದೇಶ. ಈ ಮೂಲಕ ಮಹಿಳೆಯರನ್ನು ಸಂಪೂರ್ಣವಾಗಿ ಸ್ವಾವಲಂಬಿಗಳಾಗಿ ಮಾಡೋದಾಗಿದೆ.

Advertisement

ಇದರ ಪ್ರಯೋಜನಗಳು ಆರ್ಥಿಕ ಜ್ಞಾನ ಹೊಂದಿರುವ ಮಹಿಳೆಯರನ್ನು ಬಲಪಡಿಸಲು ಸಮಗ್ರ ಆರ್ಥಿಕ ಸಾಕ್ಷರತಾ ಕಾರ್ಯಾಗಾರ ನಡೆಸಲಾಗುತ್ತಿದೆ. ಕಾರ್ಯಾಗಾರದಲ್ಲಿ ಬಜೆಟ್, ಉಳಿತಾಯ, ಹೂಡಿಕೆಯಂತಹ ವಿಷಯಗಳ ಬಗ್ಗೆ ಸೂಕ್ತ ಮಾಹಿತಿ ನೀಡಲಾಗುತ್ತದೆ.

ಯೋಜನೆಯಡಿಯಲ್ಲಿ ಮಹಿಳೆಯರಿಗೆ ಹಣ ಉಳಿತಾಯಕ್ಕೆ ಪ್ರೋತ್ಸಾಹಿಸಲಾಗುತ್ತದೆ. ಮಹಿಳೆಯರಿಗೆ ಕಿರುಸಾಲ ಸೌಲಭ್ಯಗಳನ್ನು ನೀಡಲಾಗುತ್ತದೆ. ಕೌಶಲ್ಯ ಅಭಿವೃದ್ಧಿ ಮತ್ತು ವೃತ್ತಿಪರ ತರಬೇತಿಗೆ ಗಮನ ನೀಡಲಾಗುತ್ತದೆ.ಉದ್ಯಮಿಯಾಗಲು ಬಯಸುವ ಮಹಿಳೆಯರಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುತ್ತದೆ. ಮಹಿಳೆಯರಿಗೆ ಆರ್ಥಿಕ ಭದ್ರತೆ ನೀಡಲಾಗಿದೆ. ಇದಕ್ಕಾಗಿ ಕೈಗೆಟುಕುವ ದರದಲ್ಲಿ ವಿಮಾ ಸೌಲಭ್ಯ ಪರಿಚಯಿಸಲಾಗುತ್ತದೆ. ಇದರಿಂದ ಅವರ ಕುಟುಂಬದ ಭದ್ರತೆಯೂ ಹೆಚ್ಚುತ್ತದೆ. ಇನ್ನು ಮಹಿಳೆಯರಿಗೆ ಡಿಜಿಟಲ್ ಬ್ಯಾಂಕಿಂಗ್ ಸರ್ವೀಸ್, ಮೊಬೈಲ್ ವ್ಯಾಲೆಟ್ಸ್​ ಮತ್ತು ಪಾವತಿಗಳಿಗಾಗಿ ಇತರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಲು ಪ್ರೋತ್ಸಾಹ ನೀಡಲಾಗುತ್ತದೆ.

Advertisement

Advertisement
Tags :
GOVERNMENTindiaLatestNewsNewsKannadaನವದೆಹಲಿಪ್ರಧಾನಿ ನರೇಂದ್ರ ಮೋದಿಬೆಂಗಳೂರುಲಕ್​ಪತಿ ದೀದಿ
Advertisement
Next Article