For the best experience, open
https://m.newskannada.com
on your mobile browser.
Advertisement

ಬಿಡಬ್ಲ್ಯುಎಫ್‌ ರ್‍ಯಾಂಕಿಂಗ್‌: ಲಕ್ಷ್ಯ ಸೇನ್‌ ವಿಶ್ವ ನಂ.13 ಆಟಗಾರ

ಭಾರತದ ತಾರಾ ಶಟ್ಲರ್‌ ಲಕ್ಷ್ಯ ಸೇನ್‌ ಬಿಡಬ್ಲ್ಯುಎಫ್‌ ವಿಶ್ವ ಬ್ಯಾಡ್ಮಿಂಟನ್‌ ಪುರುಷರ ಸಿಂಗಲ್ಸ್‌ ರ್‍ಯಾಂಕಿಂಗ್‌ನಲ್ಲಿ 5 ಸ್ಥಾನ ಮೇಲೇರಿ 13ನೇ ಸ್ಥಾನ ಪಡೆದಿದ್ದಾರೆ
11:10 AM Mar 20, 2024 IST | Ashitha S
ಬಿಡಬ್ಲ್ಯುಎಫ್‌ ರ್‍ಯಾಂಕಿಂಗ್‌  ಲಕ್ಷ್ಯ ಸೇನ್‌ ವಿಶ್ವ ನಂ 13 ಆಟಗಾರ

ನವದೆಹಲಿ: ಭಾರತದ ತಾರಾ ಶಟ್ಲರ್‌ ಲಕ್ಷ್ಯ ಸೇನ್‌ ಬಿಡಬ್ಲ್ಯುಎಫ್‌ ವಿಶ್ವ ಬ್ಯಾಡ್ಮಿಂಟನ್‌ ಪುರುಷರ ಸಿಂಗಲ್ಸ್‌ ರ್‍ಯಾಂಕಿಂಗ್‌ನಲ್ಲಿ 5 ಸ್ಥಾನ ಮೇಲೇರಿ 13ನೇ ಸ್ಥಾನ ಪಡೆದಿದ್ದಾರೆ. ಏಪ್ರಿಲ್‌-ಮೇ ಅಂತ್ಯಕ್ಕೆ ರ್‍ಯಾಂಕಿಂಗ್‌ನಲ್ಲಿ ಅಗ್ರ-16ರಲ್ಲಿರುವ ಆಟಗಾರರು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದ್ದಾರೆ. ಈ ನಿಟ್ಟಿನಲ್ಲಿ ಸೇನ್‌ ಪ್ರಗತಿ ಮಹತ್ವದ್ದಾಗಿದೆ.

Advertisement

ಎಚ್‌.ಎಸ್‌.ಪ್ರಣಯ್‌ 9ನೇ ಸ್ಥಾನದಲ್ಲೇ ಮುಂದುವರಿದಿದ್ದು, ಕಿದಂಬಿ ಶ್ರೀಕಾಂತ್‌ 27ನೇ ಸ್ಥಾನದಲ್ಲಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು 11ನೇ, ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ.

Advertisement
Advertisement
Tags :
Advertisement