ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಜೈಲರ್ ನಷ್ಟು ಸದ್ದು ಮಾಡದ ಲಾಲ್ ಸಲಾಂ: ಮೊದಲ ದಿನ ಗಳಿಸಿದ್ದು ಎಷ್ಟು?

ಐಶ್ವರ್ಯಾ ಧನುಷ್ ನಿರ್ದೇಶನದ ‘ಲಾಲ್ ಸಲಾಂ’ ಚಿತ್ರವು ನಿನ್ನೆ ಬಿಡುಗಡೆಯಾಗಿ, ಮೊದಲ ದಿನವೇ ಬಾಕ್ಸ್​ ಆಫೀಸ್​ನಲ್ಲಿ 4.30 ಕೋಟಿ ಹಣವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ.
10:56 AM Feb 10, 2024 IST | Ashika S

ಬೆಂಗಳೂರು: ಐಶ್ವರ್ಯಾ ಧನುಷ್ ನಿರ್ದೇಶನದ ‘ಲಾಲ್ ಸಲಾಂ’ ಚಿತ್ರವು ನಿನ್ನೆ ಬಿಡುಗಡೆಯಾಗಿ, ಮೊದಲ ದಿನವೇ ಬಾಕ್ಸ್​ ಆಫೀಸ್​ನಲ್ಲಿ 4.30 ಕೋಟಿ ಹಣವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ.

Advertisement

ಲಾಲ್ ಸಲಾಂ, ‘ಜೈಲರ್’ ಚಿತ್ರದ ಮೊದಲ ದಿನದ ಕಲೆಕ್ಷನ್​ಗಿಂತ ಡಲ್ ಇದೆ. ಜೈಲರ್ ಮೊದಲ ದಿನ 48.35 ಕೋಟಿ ರೂಪಾಯಿ ಗಳಿಸಿತ್ತು.

ವಿಷ್ಣು ವಿಶಾಲ್, ವಿಕ್ರಾಂತ್ ನಟನೆಯ ಈ ಚಿತ್ರದಲ್ಲಿ ರಜನಿಕಾಂತ್ ವಿಸ್ತೃತ ಅತಿಥಿ ಪಾತ್ರ ಮಾಡಿದ್ದಾರೆ.

Advertisement

ಐಶ್ವರ್ಯಾ ರಜನಿಕಾಂತ್ 9 ವರ್ಷಗಳ ನಂತರ ‘ಲಾಲ್ ಸಲಾಂ’ ಮೂಲಕ ನಿರ್ದೇಶನಕ್ಕೆ ಮರಳಿದ್ದರು. ಜೊತೆಗೆ ಜೈಲರ್ ನಂತರ ರಜನಿಕಾಂತ್ ‘ಲಾಲ್ ಸಲಾಂ’ನಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದ ಟ್ರೈಲರ್ ಹೊರಬಂದಾಗಿನಿಂದ ಚಿತ್ರ ಸಾಕಷ್ಟು ಸುದ್ದಿಯಾಗಿತ್ತು.

ಸ್ಯಾಕ್‌ನಿಲ್ಕ್‌ನ ಟ್ರೆಂಡ್ ವರದಿ ಪ್ರಕಾರ, ಲಾಲ್ ಸಲಾಂ ನಿನ್ನೆ ಒಂದೇ ದಿನ 4.30 ಕೋಟಿ ರೂಪಾಯಿ ಗಳಿಸಿದೆ. ಇದು ಪ್ರಾಥಮಿಕ ಅಂಕಿ-ಅಂಶಗಳಾಗಿದ್ದು, ಅಧಿಕೃತ ಮಾಹಿತಿಯಲ್ಲಿ ಕೊಂಚ ವ್ಯತ್ಯಾಸ ಆಗಬಹುದು ಎಂದು ಅಂದಾಜಿಸಲಾಗಿದೆ.

Advertisement
Tags :
‘ಲಾಲ್ ಸಲಾಂ’LatetsNewsNewsKannadaಐಶ್ವರ್ಯಾ ಧನುಷ್ಚಿತ್ರಬಾಕ್ಸ್ ಆಫೀಸ್ಬಿಡುಗಡೆ
Advertisement
Next Article