ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಆಂಪಿಯರ್ ಎಲೆಕ್ಟ್ರಿಕ್ ಕಂಪೆನಿ ಬಿಡುಗಡೆ ಮಾಡುತ್ತಿದೆ ನೆಕ್ಸಸ್ ಇವಿ ಸ್ಕೂಟರ್

ಗ್ರೀವ್ ಕಾಟನ್ ಮಾಲೀಕತ್ವದ ಆಂಪಿಯರ್ ಎಲೆಕ್ಟ್ರಿಕ್ ಕಂಪನಿ ತನ್ನ ಹೊಚ್ಚ ಹೊಸ ನೆಕ್ಸಸ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ್ದು, ಹೊಸ ಇವಿ ಸ್ಕೂಟರ್ ಮಾದರಿಯು ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಹೊಸ ನೆಕ್ಸಸ್ ಇವಿ ಸ್ಕೂಟರ್ ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 1.10 ಲಕ್ಷ ಆರಂಭಿಕ ಬೆಲೆ ಹೊಂದಿದೆ.
10:23 PM Apr 30, 2024 IST | Nisarga K
ಆಂಪಿಯರ್ ಎಲೆಕ್ಟ್ರಿಕ್ ಕಂಪೆನಿ ಬಿಡುಗಡೆ ಮಾಡುತ್ತಿದೆ ನೆಕ್ಸಸ್ ಇವಿ ಸ್ಕೂಟರ್

ಗ್ರೀವ್ ಕಾಟನ್ ಮಾಲೀಕತ್ವದ ಆಂಪಿಯರ್ ಎಲೆಕ್ಟ್ರಿಕ್ ಕಂಪನಿ ತನ್ನ ಹೊಚ್ಚ ಹೊಸ ನೆಕ್ಸಸ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ್ದು, ಹೊಸ ಇವಿ ಸ್ಕೂಟರ್ ಮಾದರಿಯು ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಹೊಸ ನೆಕ್ಸಸ್ ಇವಿ ಸ್ಕೂಟರ್ ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 1.10 ಲಕ್ಷ ಆರಂಭಿಕ ಬೆಲೆ ಹೊಂದಿದೆ.

Advertisement

ಸಖತ್ ಫೀಚರ್ಸ್ ಮತ್ತು ಭರ್ಜರಿ ಮೈಲೇಜ್ ಹೊಂದಿರುವ ಈ ಸ್ಕೂಟರ್‌, 3kWh ಎಲ್ಎಫ್ ಪಿ ಬ್ಯಾಟರಿ ಪ್ಯಾಕ್ ನೊಂದಿಗೆ 4kWh ಸಾಮರ್ಥ್ಯದ ಮಿಡ್ ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಹೊಂದಿದೆ. ಈ ಮೂಲಕ ಇದು ಪ್ರತಿ ಚಾರ್ಜ್ ಗೆ 136 ಕಿ.ಮೀ ಮೈಲೇಜ್ ನೀಡುವ ಮೂಲಕ ಪ್ರತಿ ಗಂಟೆಗೆ 93 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ

ಹೊಸ ನೆಕ್ಸಸ್ ಇವಿ ಸ್ಕೂಟರಿನಲ್ಲಿ ಬ್ಯಾಟರಿ ಪ್ಯಾಕ್ ಅನ್ನು ಚಾರ್ಜ್ ಮಾಡಲು ಗರಿಷ್ಠ 3.5 ಗಂಟೆಗಳ ಕಾಲಾವಕಾಶ ತೆಗೆದುಕೊಳ್ಳಲಿದ್ದು, ಇದು ಎರಡು ಪ್ರಮುಖ ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿರಲಿದೆ. ಈ ಮೂಲಕ ಹೊಸ ಇವಿ ಸ್ಕೂಟರಿನ ಟಾಪ್ ಎಂಡ್ ಮಾದರಿಯಲ್ಲಿ ಹೆಚ್ಚಿನ ಫೀಚರ್ಸ್ ನೀಡಲಾಗಿದ್ದು, ಇದರಲ್ಲಿ 7 ಇಂಚಿನ ಕಲರ್ ಸ್ಕ್ರೀನ್ ಡಿಸ್ ಪ್ಲೇ, ಸ್ವಿಚ್ ಗೇರ್ ಹೊಂದಿರುವ ಹ್ಯಾಂಡಲ್ ಬಾರ್, ಫುಲ್ ಎಲ್ಇಡಿ ಲೈಟಿಂಗ್ ಮತ್ತು ಬ್ಲೂಟೂಥ್ ಕನೆಕ್ವಿಟಿ ಹೊಂದಿದೆ. ಹಾಗೆಯೇ ಹೊಸ ಇವಿ ಸ್ಕೂಟರಿನಲ್ಲಿ ಐದು ರೈಡಿಂಗ್ ಮೋಡ್ ಗಳನ್ನು ನೀಡಲಾಗಿದ್ದು, ಇದರಲ್ಲಿ ಹಿಲ್ ಹೋಲ್ಡ್ ಫೀಚರ್ಸ್ ಸಹ ಜೋಡಣೆಯಾಗಿದೆ.

Advertisement

ಇನ್ನು ಹೊಸ ಇವಿ ಸ್ಕೂಟರಿನಲ್ಲಿ ಫ್ರಂಟ್ ಟೆಲಿಸ್ಕೊಪಿಕ್ ಸಸ್ಷೆಂಷನ್ ಮತ್ತು ಹಿಂಬದಿಯಲ್ಲಿ ಡ್ಯುಯಲ್ ಶಾಕ್‌ ಅಬ್ಸಾರ್ಬರ್‌ ನೀಡಲಾಗಿದೆ. ಇದರೊಂದಿಗೆ 12 ಇಂಚಿನ ವ್ಹೀಲ್ಸ್ ಜೋಡಣೆ ಮಾಡಿರುವ ಆಂಪಿಯರ್ ಕಂಪನಿಯು ಮುಂಭಾಗದ ಚಕ್ರದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಬದಿಯಲ್ಲಿ ಡ್ರಮ್ ಬ್ರೇಕ್ ನೀಡಿದೆ.

Advertisement
Tags :
Ampere ElectriccompanyLatestNewslaunchingNewsKarnatakaNexus EV scooter
Advertisement
Next Article