For the best experience, open
https://m.newskannada.com
on your mobile browser.
Advertisement

ನಟಿ ಲೀಲಾವತಿ ಹೆಸರಿನಲ್ಲಿ ಪಶು ಸಂಗೋಪನ ಆಸ್ಪತ್ರೆ ಲೋಕಾರ್ಪಣೆ

ಸಮಾಜಮುಖಿ ಕೆಲಸಗಳ ಮೂಲಕ ಜನರ ಮನಸ್ಸಿಗೆ ಇನ್ನೂ ಹತ್ತಿರವಾಗುತ್ತಿರುವ ಹಿರಿಯ ನಟಿ ಲೀಲಾವತಿ ಅವರ ಕನಸಿನ ಆಸ್ಪತ್ರೆ ಇಂದು ಉದ್ಘಾಟನೆ ಆಗಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪಶು ಆಸ್ಪತ್ರೆಯನ್ನು ಉದ್ಘಾಟಿಸಿದ್ದಾರೆ.
04:15 PM Nov 28, 2023 IST | Ashitha S
ನಟಿ ಲೀಲಾವತಿ ಹೆಸರಿನಲ್ಲಿ ಪಶು ಸಂಗೋಪನ ಆಸ್ಪತ್ರೆ ಲೋಕಾರ್ಪಣೆ

ಬೆಂಗಳೂರು: ಹಿರಿಯ ನಟಿ ಲೀಲಾವತಿ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಬೆಂಗಳೂರು ಹೊರವಲಯದ ಸೋಲದೇವನಹಳ್ಳಿಯಲ್ಲಿ ನೆಲೆಸಿರುವ ಹಿರಿಯ ನಟಿ ಲೀಲಾವತಿ ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದಿದ್ದಾರೆ. ಹೀಗಾಗಿ ಲೀಲಾವತಿಯವರ ಆರೋಗ್ಯ ವಿಚಾರಿಸಲು ಸ್ಯಾಂಡಲ್​​ವುಡ್​ ನಟ ಹಾಗೂ ನಟಿಯರು, ಗಣ್ಯರು ಭೇಟಿ ನೀಡಿ ಆರೋಗ್ಯ ವಿಚಾರಿಸುತ್ತಿದ್ದಾರೆ.

Advertisement

ಇನ್ನು ಸಮಾಜಮುಖಿ ಕೆಲಸಗಳ ಮೂಲಕ ಜನರ ಮನಸ್ಸಿಗೆ ಇನ್ನೂ ಹತ್ತಿರವಾಗುತ್ತಿರುವ ಹಿರಿಯ ನಟಿ ಲೀಲಾವತಿ ಅವರ ಕನಸಿನ ಆಸ್ಪತ್ರೆ ಇಂದು ಉದ್ಘಾಟನೆ ಆಗಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪಶು ಆಸ್ಪತ್ರೆಯನ್ನು ಉದ್ಘಾಟಿಸಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿರುವ ಲೀಲಾವತಿ ಅವರ ಆಸೆ ಇದಾಗಿದ್ದು, ಸರ್ಕಾರ ಅದಕ್ಕೆ ಸಮ್ಮತಿ ನೀಡಿದೆ.

ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಬಳಿ ಸುಸಜ್ಜಿತ ಪಶು ಆಸ್ಪತ್ರೆಯನ್ನು ತಮ್ಮ ಸ್ವಂತ ಖರ್ಚಿನಲ್ಲಿ ನಿರ್ಮಾಣ ಮಾಡಿರುವ ಲೀಲಾವತಿ ಮತ್ತು ವಿನೋದ್ ರಾಜ್, ಹಿಂದೆ ಜನರಿಗಾಗಿ ಮತ್ತೊಂದು ಆಸ್ಪತ್ರೆಯನ್ನೂ ನಿರ್ಮಿಸಿದ್ದರು. ಈ ಆಸ್ಪತ್ರೆಯನ್ನೂ ಸರಕಾರವೇ ನೋಡಿಕೊಳ್ಳುತ್ತಿದೆ. ಬೆಂಗಳೂರಿನ ಥಣಿಸಂದ್ರದ ಪಶು ಆಸ್ಪತ್ರೆಯನ್ನು ಸರಕಾರ ಸೋಲದೇವನಹಳ್ಳಿಗೆ ಶಿಪ್ಟ್ ಮಾಡಿ ಆದೇಶ ಪ್ರಕಟಿಸಿದೆ.

Advertisement

Advertisement
Tags :
Advertisement