For the best experience, open
https://m.newskannada.com
on your mobile browser.
Advertisement

ಸೂಪರ್‌ ಸ್ಟಾರ್‌ ರಜನಿಗೆ 10 ಎಕರೆ ಜಾಗ ಕೊಟ್ಟಿದ್ರು ಲೀಲಾವತಿ

ನಟಿ ಲೀಲಾವತಿ ಅವರು ಕನ್ನಡಿಗರನ್ನು ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾರೆ. ಆದರೆ ಅವರ ಮೇಲೆ ಕನ್ನಡಿಗರಿಗೆ ಇರುವ ಪ್ರೀತಿ ಸ್ವಲ್ಪವೂ ಕಡಿಮೆಯಾಗಿಲ್ಲ. ಈ ನಡುವೆ ಮೇರುನಟಿ ಲೀಲಾವತಿ ಅವರ ಕುರಿತು ಕೆಲ ಮಾಹಿತಿಗಳು ಹೊರಬರುತ್ತಿವೆ.
04:38 PM Dec 09, 2023 IST | Gayathri SG
ಸೂಪರ್‌ ಸ್ಟಾರ್‌ ರಜನಿಗೆ 10 ಎಕರೆ ಜಾಗ ಕೊಟ್ಟಿದ್ರು ಲೀಲಾವತಿ

ಬೆಂಗಳೂರು: ನಟಿ ಲೀಲಾವತಿ ಅವರು ಕನ್ನಡಿಗರನ್ನು ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾರೆ. ಆದರೆ ಅವರ ಮೇಲೆ ಕನ್ನಡಿಗರಿಗೆ ಇರುವ ಪ್ರೀತಿ ಸ್ವಲ್ಪವೂ ಕಡಿಮೆಯಾಗಿಲ್ಲ. ಈ ನಡುವೆ ಮೇರುನಟಿ ಲೀಲಾವತಿ ಅವರ ಕುರಿತು ಕೆಲ ಮಾಹಿತಿಗಳು ಹೊರಬರುತ್ತಿವೆ.

Advertisement

ಹಲವು ವರ್ಷಗಳ ಹಿಂದೆ ಲೀಲಾವತಿ ಅವರು ನಟ ರಜನಿಕಾಂತ್‌ಗೆ 10 ಎಕರೆ ಜಾಗ ತೆಗೆದುಕೊಟ್ಟಿದ್ದರು ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ. ಹಿರಿಯ ನಟಿ ಲೀಲಾವತಿ ಅವರ ಅಂತಿಮ ದರ್ಶನ ಪಡೆದ ನಂತರ ಮಾತನಾಡಿದ ಬ್ರಹ್ಮಾಂಡ ಗುರೂಜಿ, ಡಾ.ರಾಜ್‌ಕುಮಾರ್‌, ಉದಯಕುಮಾರ್‌ ಅವರಿಂದ ಹಿಡಿದು ಅನೇಕರಿಗೆ ಮದ್ರಾಸ್‌ ಮೂಲಕೇಂದ್ರವಾಗಿತ್ತು.

ಮಹಾಬಲಿಪುರದಲ್ಲಿ 10 ಎಕರೆ ಜಾಗ ತೆಗೆದುಕೊ ಅಂತಾ ಆಗ ರಜನಿಕಾಂತ್‌ ಅವರಿಗೆ ಲೀಲಾವತಿ ಅಮ್ಮನವರು ಹೇಳಿದ್ದರು. ಆಗ ನಾವು ಅಲ್ಲೇ ಇದ್ದೆವು. ದ್ವಾರಕೀಶ್‌ ಚಿತ್ರ ಶೂಟಿಂಗ್‌ ನಡೆಯುತ್ತಿತ್ತು. ಆಗ ರಜನಿಕಾಂತ್‌ ನನ್ನ ಹತ್ತಿರ ದುಡ್ಡಿಲ್ಲ ಎಂದಾಗ, ಸ್ವತಃ ತಾವೇ ದುಡ್ಡುಕೊಟ್ಟು ರಜನಿಕಾಂತ್‌ಗೆ ಜಮೀನು ಖರೀದಿಸಿಕೊಟ್ಟಿದ್ದರು. ನಂತರ ಲೀಲಾವತಿ ಅವರಿಗೆ ರಜನಿಕಾಂತ್‌ ಹಣ ವಾಪಸ್‌ ಮಾಡಿದರು ಎಂದು ನೆನಪಿಸಿಕೊಂಡರು.

Advertisement

Advertisement
Tags :
Advertisement