ಕರ್ನಾಟಕ1 | ಬೆಂಗಳೂರು-ಮೈಸೂರು-ಮಲೆನಾಡು-ಬೆಳಗಾವಿ-ಕರಾವಳಿ-ಕಲಬುರಗಿ-
ಹೊರನಾಡ ಕನ್ನಡಿಗರು1
ದೇಶ-ವಿದೇಶ-1 | ದೇಶ-1
ವಿಶೇಷ-
ವಿಜ್ಞಾನ/ತಂತ್ರಜ್ಞಾನ | ಸಾಂಡಲ್ ವುಡ್
ಮನರಂಜನೆ-ಕ್ರೀಡೆ-1ಕ್ಯಾಂಪಸ್-1
ಇತರೆ- | ಆರೋಗ್ಯ-ಅಡುಗೆ ಮನೆ-ಸಮುದಾಯ-ಕ್ರೈಮ್-ಶಿಕ್ಷಣ-ವಿಡಿಯೊ-ಪಾಡ್‌ಕಾಸ್ಟ್‌-ಉದ್ಯೋಗ-
Advertisement

ಜುಲೈ 15ರಿಂದ 9 ದಿನ ವಿಧಾನ ಮಂಡಲದ ಅಧಿವೇಶನ : ಯು.ಟಿ. ಖಾದರ್‌

ರಾಜ್ಯ ವಿಧಾನಮಂಡಲದ ಅಧಿವೇಶನ ಜುಲೈ 15ರಿಂದ ಪ್ರಾರಂಭಗೊಳ್ಳಲಿದ್ದು, ಈ ಬಾರಿ ಶಾಸಕರು ಸದನದಲ್ಲಿ ಉಪಸ್ಥಿತರಿದ್ದ ಅವಧಿಯನ್ನು ತಂತ್ರಜ್ಞಾನ ಆಧರಿಸಿ ಲೆಕ್ಕ ಹಾಕಲಾಗುವುದು ಎಂದು ಸ್ಪೀಕರ್‌ ಯು.ಟಿ. ಖಾದರ್‌ ತಿಳಿಸಿದ್ದಾರೆ.
07:41 AM Jul 13, 2024 IST | Nisarga K
ಜುಲೈ 15ರಿಂದ 9 ದಿನ ವಿಧಾನ ಮಂಡಲದ ಅಧಿವೇಶನ : ಯು.ಟಿ. ಖಾದರ್‌

ಬೆಂಗಳೂರು: ರಾಜ್ಯ ವಿಧಾನಮಂಡಲದ ಅಧಿವೇಶನ ಜುಲೈ 15ರಿಂದ ಪ್ರಾರಂಭಗೊಳ್ಳಲಿದ್ದು, ಈ ಬಾರಿ ಶಾಸಕರು ಸದನದಲ್ಲಿ ಉಪಸ್ಥಿತರಿದ್ದ ಅವಧಿಯನ್ನು ತಂತ್ರಜ್ಞಾನ ಆಧರಿಸಿ ಲೆಕ್ಕ ಹಾಕಲಾಗುವುದು ಎಂದು ಸ್ಪೀಕರ್‌ ಯು.ಟಿ. ಖಾದರ್‌ ತಿಳಿಸಿದ್ದಾರೆ.

Advertisement

ಸಭಾಪತಿ ಬಸವರಾಜ ಹೊರಟ್ಟಿ ಜತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಒಟ್ಟು 9 ದಿನಗಳ ಕಾಲ ಅಧಿವೇಶನ ನಡೆಯಲಿದ್ದು ಜುಲೈ 15ರಂದು ಬೆಳಗ್ಗೆ 11ಕ್ಕೆ ಪ್ರಾರಂಭವಾಗುತ್ತದೆ. ಕಳೆದ ಅಧಿವೇಶನದಲ್ಲಿ ಕಲಾಪಕ್ಕೆ ಬೇಗ ಹಾಜರಾಗುವ ಸದಸ್ಯರಿಗೆ ಬಹುಮಾನ ನೀಡಲಾಗುತ್ತಿತ್ತು. ಆದರೆ ಈ ಬಾರಿ ಯಾರು ಎಷ್ಟು ಸಮಯ ಇದ್ದಾರೆ? ಎಷ್ಟು ಬಾರಿ ಎದ್ದು ಹೋದರು? ಕಡೆಯವರೆಗೆ ಇದ್ದವರು ಯಾರು? ಎಂಬುದನ್ನೂ ಗಣನೆಗೆ ತೆಗೆದುಕೊಳ್ಳುತ್ತೇವೆ. ತಂತ್ರಜ್ಞಾನ ಆಧರಿಸಿ ಈ ಅವಧಿ ಯನ್ನು ಲೆಕ್ಕ ಹಾಕುತ್ತೇವೆ ಎಂದು ಹೇಳಿದರು.

Advertisement
Advertisement
Tags :
JulyLegislatureNews KarnatakaPoliticssession
Advertisement
Next Article