ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬೆಂಗಳೂರಿನಲ್ಲಿ ಜನರ ನಿದ್ದೆಗೆಡಿಸಿ ಸೆರೆ ಸಿಕ್ಕ ಚಿರತೆ ಅಧಿಕಾರಿಗಳ ಗುಂಡೇಟಿಗೆ ಬಲಿ!

ಬೊಮ್ಮನಹಳ್ಳಿ ಸಮೀಪದ ಕೂಡ್ಲುಗೇಟ್‌ನಲ್ಲಿ ಕಾಣಿಸಿಕೊಂಡ ಚಿರತೆಯನ್ನು ಸೆರೆ ಹಿಡಿಯಲು ಸುಮಾರು 70 ಮಂದಿ ಅರಣ್ಯ ಇಲಾಖೆ ಅಧಿಕಾರಿಗಳು ಸತತ ಮೂರು ದಿನ ಕಾರ್ಯಾಚರಣೆ ನಡೆಸಿದ ನಂತರ ಸೆರೆಯಾಗಿದೆ.
03:43 PM Nov 01, 2023 IST | Ramya Bolantoor

ಬೆಂಗಳೂರು: ಬೊಮ್ಮನಹಳ್ಳಿ ಸಮೀಪದ ಕೂಡ್ಲುಗೇಟ್‌ನಲ್ಲಿ ಕಾಣಿಸಿಕೊಂಡ ಚಿರತೆಯನ್ನು ಸೆರೆ ಹಿಡಿಯಲು ಸುಮಾರು 70 ಮಂದಿ ಅರಣ್ಯ ಇಲಾಖೆ ಅಧಿಕಾರಿಗಳು ಸತತ ಮೂರು ದಿನ ಕಾರ್ಯಾಚರಣೆ ನಡೆಸಿದ ನಂತರ ಸೆರೆಯಾಗಿದೆ.

Advertisement

ಬೆಂಗಳೂರಿನ ಜನರನ್ನು ಕಳೆದ ಮೂರು ದಿನಗಳಿಂದ ನಿದ್ದೆಗೆಡಿಸಿದ ಚಿರತೆಯು ಇಂದು(ನ.01) ಮಧ್ಯಾಹ್ನದ ವೇಳೆಗೆ ಸೆರೆ ಸಿಕ್ಕಿದೆ. ರಾತ್ರಿ ವೇಳೆ ಕಾಣಿಸಿಕೊಳ್ಳುವ ಚಿರತೆ ಹಗಲು ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಮಾಡುವ ವೇಳೆ ಸಿಗದೇ ತಪ್ಪಿಸಿಕೊಳ್ಳುತ್ತಿತ್ತು. ಲೆಪರ್ಡ್ಸ್ ಟಾಸ್ಕ್ ಫೋರ್ಸ್ ತಂಡ ಮತ್ತು ಥರ್ಮಲ್ ಡ್ರೋನ್ ಟೀಂ ಚಿರತೆಗಾಗಿ ತೀವ್ರ ಹುಡುಕಾಟ ನಡೆಸಿತ್ತು. ಆದರೆ ಎರಡು ದಿನವಾದರೂ ಚಿರತೆ ಪತ್ತೆಯಾಗದೆ ಇರುವುದು ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗುವಂತೆ ಮಾಡಿತ್ತು. ಆದರೆ, ಮೂರು ದಿನಗಳ ನಂತರ ಈಗ ಚಿರತೆ ಸೆರೆಯಾಗಿದ್ದು, ಸ್ಥಳೀಯ ಜನರು ನಿಟ್ಟುಸಿರು ಬಿಡವಂತಾಗಿದೆ.

ವಿಪರ್ಯಾಸವೆಂದರೇ, ರೆಸ್ಕ್ಯೂ ಟೀಂ ನಿಯೋಜನೆಗೊಳಿಸಿದ್ದ ಅರಣ್ಯ ಇಲಾಖೆ ಥರ್ಮಲ್ ಡ್ರೋನ್ ಬಳಸಿ ಹಗಲು-ರಾತ್ರಿಯೆನ್ನದೆ ಚಿರತೆಯನ್ನು ಹುಡುಕಿತ್ತು. ಇನ್ನು ರೆಸ್ಕ್ಯೂ ಸಂಧರ್ಭದಲ್ಲಿ ವೈದ್ಯರ ಮೇಲೆ ಎರಡೆರಡು ಬಾರಿ ಚಿರತೆ ದಾಳಿ ನಡೆಸಿದ ಹಿನ್ನಲೆಯಲ್ಲಿ ಅಧಿಕಾರಿಗಳು ಚಿರತೆಯನ್ನು ಗುಂಡಿಟ್ಟು ಕೊಂದಿದ್ದರು. ಇದೀಗ ಅರಣ್ಯ ಇಲಾಖೆ ಮೇಲೆ ಆಕ್ರೋಶ ಭುಗಿಲೆದ್ದಿದೆ. ಕಾಡುಪ್ರಾಣಿಗಳಿಗೆ ರಕ್ಷಣೆ ಒದಗಿಸಬೇಕಾಗಿದ್ದ ಇಲಾಖೆಯೇ ಕೊಲ್ಲಲು ಮುಂದಾದರೆ ಇವರು ರಕ್ಷಣೆ ಹೇಗೆ ಮಾಡುತ್ತಾರೆ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಚಿರತೆಯನ್ನು ಜೀವಂತ ಹಿಡಿಯಲು ವಿಫಲರಾದ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.

Advertisement

Advertisement
Tags :
Forest department officialsLatestNewsLatetsNewsLeopardNewsKannadapepoleಬೆಂಗಳೂರು
Advertisement
Next Article