For the best experience, open
https://m.newskannada.com
on your mobile browser.
Advertisement

ರಾಜಧಾನಿಯಲ್ಲಿ ಮತ್ತೆ ಚಿರತೆ ಭಯ: ಕಂಪೌಂಡ್​​ ಒಳಗೆ ನುಗ್ಗಿದ ಚಿರತೆ

ಇತ್ತೀಚೆಗೆ ಗ್ರಾಮೀಣ ಪ್ರದೇಶ ಕಾಡಂಚಿನ ಸ್ಥಳಗಳಂತೆಯೇ ನಗರ ಪ್ರದೇಶಗಳಲ್ಲಿಯೂ ಕಾಡುಪ್ರಾಣಿಗಳ ಹಾವಳಿ ಹೆಚ್ಚುತ್ತಿದೆ. ಮೊನ್ನೆ ಮೊನ್ನೆಯಷ್ಟೆ ಬೆಂಗಳೂರು ನಗರದಲ್ಲಿ ಚಿರತೆ ನಗರಕ್ಕೆ ಎಂಟ್ರಿ ಕೊಟ್ಟು ದಾರುಣ ಸಾವು ಕಂಡಿತ್ತು. ಇದೀಗ ಮತ್ತೊಂದು ಚಿರತೆ ಪ್ರತ್ಯಕ್ಷವಾಗಿ ಮತ್ತೆ ಆತಂಕ ಸೃಷ್ಟಿ ಮಾಡಿದೆ.
02:44 PM Nov 05, 2023 IST | Ashika S
ರಾಜಧಾನಿಯಲ್ಲಿ ಮತ್ತೆ ಚಿರತೆ ಭಯ  ಕಂಪೌಂಡ್​​ ಒಳಗೆ ನುಗ್ಗಿದ ಚಿರತೆ

ಬೆಂಗಳೂರು: ಇತ್ತೀಚೆಗೆ ಗ್ರಾಮೀಣ ಪ್ರದೇಶ ಕಾಡಂಚಿನ ಸ್ಥಳಗಳಂತೆಯೇ ನಗರ ಪ್ರದೇಶಗಳಲ್ಲಿಯೂ ಕಾಡುಪ್ರಾಣಿಗಳ ಹಾವಳಿ ಹೆಚ್ಚುತ್ತಿದೆ. ಮೊನ್ನೆ ಮೊನ್ನೆಯಷ್ಟೆ ಬೆಂಗಳೂರು ನಗರದಲ್ಲಿ ಚಿರತೆ ನಗರಕ್ಕೆ ಎಂಟ್ರಿ ಕೊಟ್ಟು ದಾರುಣ ಸಾವು ಕಂಡಿತ್ತು. ಇದೀಗ ಮತ್ತೊಂದು ಚಿರತೆ ಪ್ರತ್ಯಕ್ಷವಾಗಿ ಮತ್ತೆ ಆತಂಕ ಸೃಷ್ಟಿ ಮಾಡಿದೆ.

Advertisement

ನೈಸ್ ರಸ್ತೆ ಸಮೀಪದ ಚಿಕ್ಕತೋಗೂರು ಬಳಿ ಚಿರತೆ ಪ್ರತ್ಯಕ್ಷವಾಗಿದೆ. ನಿನ್ನೆ ನ4 ರ ಸಂಜೆ 7.40ರ ಸಮಯದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಶನಿವಾರ ಸಂಜೆ ಚಿರತೆ ಮನೆ ಕಂಪೌಂಡ್​​ ಒಳಗೆ ನುಗ್ಗಿದ್ದು, ಬಾಗಿಲು ಬಳಿ ಬಂದ ಚಿರತೆ ಕಂಡು ಬಾಲಕ ಕಿರುಚಾಡಿದ್ದಾನೆ. ಬಾಲಕನ ಕಿರುಚಾಟಕ್ಕೆ ಚಿರತೆ ಓಡಿ ಹೋಗಿದೆ ಎಂದು ತಿಳಿದು ಬಂದಿದೆ.

ಕೆ.ಆರ್.ಪುರಂ ಅರಣ್ಯ ವಲಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪರಿಶೀಲನೆ ನಡೆಸಿ ಅರಣ್ಯ ಸಿಬ್ಬಂದಿ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಶನಿವಾರ ಮಳೆ ಬಂದ ಹಿನ್ನೆಲೆಯಲ್ಲಿ ಹೆಜ್ಜೆ ಗುರುತು ಪತ್ತೆಯಾಗಿದೆ.

Advertisement

Advertisement
Tags :
Advertisement