ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕನ್ನಡ ಮಾತನಾಡಿ ಕನ್ನಡಿಗರ ಮನಗೆದ್ದ ಲೂಯಿಸ್‌ ಹ್ಯಾಮಿಲ್ಟನ್‌

ಫಾರ್ಮುಲಾ-1(F-1) ಲೋಕದ ಸಾಮ್ರಾಟನಾಗಿ ಮೆರೆಯುತ್ತಿರುವ, 7 ಬಾರಿಯ ಚಾಂಪಿಯನ್​ ಲೂಯಿಸ್‌ ಹ್ಯಾಮಿಲ್ಟನ್‌ ಅವರು ಕನ್ನಡ ಮಾತನಾಡಿ ಕನ್ನಡಿಗರ ಮನ ಗೆದ್ದಿದ್ದಾರೆ.
08:17 AM Mar 03, 2024 IST | Ashitha S

ಲಂಡನ್​: ಫಾರ್ಮುಲಾ-1(F-1) ಲೋಕದ ಸಾಮ್ರಾಟನಾಗಿ ಮೆರೆಯುತ್ತಿರುವ, 7 ಬಾರಿಯ ಚಾಂಪಿಯನ್​ ಲೂಯಿಸ್‌ ಹ್ಯಾಮಿಲ್ಟನ್‌ ಅವರು ಕನ್ನಡ ಮಾತನಾಡಿ ಕನ್ನಡಿಗರ ಮನ ಗೆದ್ದಿದ್ದಾರೆ.

Advertisement

ಹ್ಯಾಮಿಲ್ಟನ್‌ ಬಾಯಲ್ಲಿ ಕನ್ನಡ ಪದವನ್ನು ಉಚ್ಚರಿಸುವ ಪ್ರಯತ್ನದಲ್ಲಿ ಯುವತಿಯೊಬ್ಬರು ಯಶಸ್ವಿಯಾಗಿದ್ದಾರೆ. ಹ್ಯಾಮಿಲ್ಟನ್​ ‘ಒಳ್ಳೆಯದಾಗಲಿ’ ಎಂದು ಕನ್ನಡದಲ್ಲಿ ಹಾರೈಸಿರುವ ವಿಡಿಯೊ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ಯುವತಿಯೊಬ್ಬರು ಗುಡ್​ ಲಕ್ ಎಂಬ ಪದವನ್ನು 44 ವಿವಿಧ ಭಾಷೆಗಳಲ್ಲಿ ಬರೆದಿರುವ ಕಾರ್ಡ್​ವೊಂದನ್ನು ಹ್ಯಾಮಿಲ್ಟನ್​ಗೆ ತೊರಿಸಿದ್ದಾರೆ. ಇದರಲ್ಲಿ ಕನ್ನಡದಲ್ಲೂ ‘ಒಳ್ಳೆಯದಾಗಲಿ’ ಎಂಬ ಪದವನ್ನು ಬರೆಯಲಾಗಿದ್ದು. ಇದನ್ನು ಓದಲು ಸಾಧ್ಯವಾಗದ ಹ್ಯಾಮಿಲ್ಟನ್​ಗೆ ಈ ಯುವತಿ ಹೇಗೆ ಉಚ್ಚರಿಸಬೇಕು ಎಂದು ಹೇಳಿಕೊಟ್ಟಿದ್ದಾಳೆ.

Advertisement

ಆರಂಭದಲ್ಲಿ ತಡವರಿಸಿದ ಹ್ಯಾಮಿಲ್ಟನ್‌ ಅಂತಿಮವಾಗಿ ‘ಒಳ್ಳೆಯದಾಗಲಿ’ ಎಂದು ಹೇಳುವಲ್ಲಿ ಯಶಸ್ಸು ಕಂಡಿದ್ದಾರೆ. ಕೆಲ ಕನ್ನಡಿಗರು ಈ ವಿಡಿಯೊಗೆ ‘ನಮ್ಮ ಹುಡುಗ’ ಎಂದು ಕಮೆಂಟ್​ ಮಾಡಿದ್ದಾರೆ.

ಬ್ರಿಟನ್‌ನ ಈ ಲೂಯಿಸ್‌ ಹ್ಯಾಮಿಲ್ಟನ್‌ ಫಾರ್ಮುಲಾ-1 ಕ್ಷೇತ್ರದ ಸಾರ್ವಕಾಲಿಕ ಶ್ರೇಷ್ಠ ಚಾಲಕನಾಗಿದ್ದಾರೆ. ಅಪಾಯಕಾರಿ ಟ್ರ್ಯಾಕ್‌ಗಳಲ್ಲಿ ಜೀವದ ಹಂಗು ತೊರೆದು, ಶರವೇಗದಲ್ಲಿ ಕಾರು ಚಲಾಯಿಸುವ ಆ ಸಾಹಸಿ, ಅದೆಷ್ಟೋ ಮಂದಿ ರೇಸರ್‌ಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ.

Advertisement
Tags :
indiaKARNATAKALatestNewsLewis HamiltonNewsKannadaಬೆಂಗಳೂರು
Advertisement
Next Article