For the best experience, open
https://m.newskannada.com
on your mobile browser.
Advertisement

ರಾಮಮಂದಿರಕ್ಕೆ ಹೀಗೊಂದು ಗೌರವ: ಅಮೆರಿಕದಲ್ಲಿ ಟೆಸ್ಲಾ ಕಾರುಗಳಿಂದ ಲೈಟ್​ ಶೋ

ನಾಳೆ ಅದ್ಧೂರಿಯಾಗಿ ರಾಮಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಗೌರವ ಸೂಚಿಸಲು ಅಮೆರಿಕದ ಹಿಂದೂ ಪರಿಷತ್​ನವರು 100ಕ್ಕೂ ಹೆಚ್ಚು ಟೆಸ್ಲಾ ಕಾರುಗಳಿಂದ ರಾಮ ಎಂದು ಲೈಟ್​ ಶೋ ನಡೆಸಿದೆ. ಶ್ರೀರಾಮನಿಗೆ ಗೌರವ ನೀಡಿರುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.
12:09 PM Jan 21, 2024 IST | Gayathri SG
ರಾಮಮಂದಿರಕ್ಕೆ ಹೀಗೊಂದು ಗೌರವ  ಅಮೆರಿಕದಲ್ಲಿ ಟೆಸ್ಲಾ ಕಾರುಗಳಿಂದ ಲೈಟ್​ ಶೋ

ವಾಷಿಂಗ್ಟನ್: ನಾಳೆ ಅದ್ಧೂರಿಯಾಗಿ ರಾಮಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಗೌರವ ಸೂಚಿಸಲು ಅಮೆರಿಕದ ಹಿಂದೂ ಪರಿಷತ್​ನವರು 100ಕ್ಕೂ ಹೆಚ್ಚು ಟೆಸ್ಲಾ ಕಾರುಗಳಿಂದ ರಾಮ ಎಂದು ಲೈಟ್​ ಶೋ ನಡೆಸಿದೆ. ಶ್ರೀರಾಮನಿಗೆ ಗೌರವ ನೀಡಿರುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.

Advertisement

ಅಮೆರಿಕ ಹಿಂದೂ ಪರಿಷತ್ ಆಹ್ವಾನದಂತೆ​ 100ಕ್ಕೂ ಅಧಿಕ ಟೆಸ್ಲಾ ಕಾರುಗಳನ್ನು ಹೊಂದಿರುವ ರಾಮ ಭಕ್ತರು ಅಮೆರಿಕದ ಎಂಡಿ, ಫ್ರೆಡ್ರಿಕ್​ನಲ್ಲಿರುವ ಶ್ರೀ ಭಕ್ತ ಆಂಜನೇಯ ದೇವಾಲಯಕ್ಕೆ ಆಗಮಿಸಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಮುನ್ನಾದಿನವೇ ಅಮೆರಿಕದ ದೇವಾಲಯದ ಆವರಣದಲ್ಲಿ 100ಕ್ಕೂ ಅಧಿಕ ಟೆಸ್ಲಾ ಕಾರುಗಳನ್ನ ರಾಮ ಹೆಸರಿನಂತೆ ಜೋಡಿಸಿದ್ದಾರೆ.

ಬಳಿಕ ಟೆಸ್ಲಾ ಕಾರುಗಳಲ್ಲಿಂದ ಲೈಟ್ ಶೋ ಮಾಡಿದ್ದು ಬಿಳಿ, ಕೆಂಪು ಬಣ್ಣದ ಲೈಟ್​ ಬ್ಲಿಂಕ್ ಮಾಡಿರುವುದು ನೋಡುಗರಿಗೆ ಮನಮೋಹಕವಾಗಿ ಕಾಣಿಸುತ್ತಿದೆ. ಇದೇ ವೇಳೆ ಜೈ ಶ್ರೀರಾಮ್​ ಎನ್ನುವ ಸಾಂಗ್ ಕೂಡ ಪ್ಲೇ ಮಾಡಿದ್ದರು.

Advertisement

ಅಮೆರಿಕದ ವಿಶ್ವ ಹಿಂದೂ ಪರಿಷತ್ತಿನ ಟೆಸ್ಲಾ ಮ್ಯೂಸಿಕ್ ಶೋನ ಆಯೋಜಕರ ಪ್ರಕಾರ, ಈವೆಂಟ್‌ಗಾಗಿ 200ಕ್ಕೂ ಹೆಚ್ಚು ಟೆಸ್ಲಾ ಕಾರು ಮಾಲೀಕರು ನೋಂದಾಯಿಸಿಕೊಂಡಿದ್ದರು. ಈವೆಂಟ್ ಆಯೋಜಕರು ತೆಗೆದ ಡ್ರೋನ್ ಚಿತ್ರಗಳು ಈ ಟೆಸ್ಲಾ ಕಾರುಗಳನ್ನು 'RAM' ಎಂದು ಕಾಣುವಂತೆ ಜೋಡಿಸಲಾಗಿದ್ದನ್ನು ತೋರಿಸುತ್ತವೆ.

'ಇಂದು ನಾವು ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ ಟೆಸ್ಲಾ ರಾಮ್ ಭಗವಾನ್ ಸಂಗೀತ ಕಾರ್ಯಕ್ರಮವನ್ನು ಹೊಂದಿದ್ದೇವೆ. ಕಳೆದ 500 ವರ್ಷಗಳಿಂದ ಅಯೋಧ್ಯೆಯಲ್ಲಿ ರಾಮಮಂದಿರಕ್ಕಾಗಿ ಹೋರಾಟ ಮಾಡಿದ ಹಿಂದೂಗಳ ಪೀಳಿಗೆಗೆ ನಾವು ಕೃತಜ್ಞರಾಗಿರುತ್ತೇವೆ' ಎಂದು ಅಮೆರಿಕ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷ ಮಹೇಂದ್ರ ಸಾಪಾ ಹೇಳಿದರು.

ಇನ್ನು ಅಮೇರಿಕಾದಲ್ಲಿ ರಾಮಮಂದಿರ ಆಚರಣೆಯ ನೇತೃತ್ವ ವಹಿಸಿರುವ ವಿಎಚ್‌ಪಿ ಅಮೇರಿಕಾ ಶನಿವಾರ 21 ನಗರಗಳಲ್ಲಿ ಕಾರ್ ರ್ಯಾಲಿಗಳನ್ನು ನಡೆಸಿತ್ತು.

Advertisement
Tags :
Advertisement