ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ರಾಜ್ಯ ಸರ್ಕಾರದ ಬೊಕ್ಕಸಕ್ಕೂ ಭರ್ಜರಿ ಕಿಕ್ ಕೊಟ್ಟ ಮದ್ಯಪ್ರಿಯರು

ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಂಡಿರುವ ಮದ್ಯಪ್ರಿಯರು ರಾಜ್ಯ ಸರ್ಕಾರದ ಬೊಕ್ಕಸಕ್ಕೂ ಭರ್ಜರಿ ಕಿಕ್ ಕೊಟ್ಟಿದ್ದಾರೆ. 2023ರ ಕೊನೇ ದಿನ ಡಿ.31ರಂದು ರಾಜ್ಯಾದ್ಯಂತ ಮದ್ಯ ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 193 ಕೋಟಿ ರೂಪಾಯಿ ಹರಿದು ಬಂದಿದೆ.
02:56 PM Jan 01, 2024 IST | Ashika S

ಬೆಂಗಳೂರು: ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಂಡಿರುವ ಮದ್ಯಪ್ರಿಯರು ರಾಜ್ಯ ಸರ್ಕಾರದ ಬೊಕ್ಕಸಕ್ಕೂ ಭರ್ಜರಿ ಕಿಕ್ ಕೊಟ್ಟಿದ್ದಾರೆ. 2023ರ ಕೊನೇ ದಿನ ಡಿ.31ರಂದು ರಾಜ್ಯಾದ್ಯಂತ ಮದ್ಯ ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 193 ಕೋಟಿ ರೂಪಾಯಿ ಹರಿದು ಬಂದಿದೆ.

Advertisement

ಮಾಮೂಲಿ ದಿನದಲ್ಲಿ ಒಂದು ದಿನಕ್ಕೆ ರಾಜ್ಯದ ಅಬಕಾರಿ ಇಲಾಖೆಗೆ ಸುಮಾರು 90 ಕೋಟಿ ಆದಾಯ ಬರುತ್ತಾ ಇತ್ತು. ಆದರೆ ನ್ಯೂ ಇಯರ್ ಸೆಲೆಬ್ರೇಷನ್ ಹಿನ್ನೆಲೆಯಲ್ಲಿ ಒಂದೇ ದಿನದಲ್ಲಿ ಅಬಕಾರಿ ಇಲಾಖೆ ಆದಾಯ ದುಪ್ಪಟ್ಟು ಏರಿಕೆಯಾಗಿದೆ.

ಕಳೆದ ಡಿಸೆಂಬರ್ 23ರಿಂದ ಡಿಸೆಂಬರ್ 31ರವರೆಗೆ 1072 ಕೋಟಿ ರೂಪಾಯಿ ಆದಾಯ ರಾಜ್ಯ ಸರ್ಕಾರಕ್ಕೆ ಬಂದಿದೆ. ಡಿಸೆಂಬರ್ 23ರಿಂದ ಡಿಸೆಂಬರ್ 31ರವರೆಗೂ IML ಲಿಕ್ಕರ್‌ನಲ್ಲಿ ಒಟ್ಟು 22.2 ಲಕ್ಷದ ಬಾಕ್ಸ್ ಮಾರಾಟವಾಗಿದೆ. 22.2 ಲಕ್ಷ ಬಾಕ್ಸ್ ಸೆಲ್ ಆಗಿರುವುದರಿಂದ ಒಟ್ಟು 900 ಕೋಟಿ ರೂಪಾಯಿ ಆದಾಯ‌ ಬಂದಿದೆ. ನ್ಯೂ ಇಯರ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಯರ್ 14.೦7 ಲಕ್ಷ ಬಾಕ್ಸ್ ಸೇಲ್ ಮಾಡಲಾಗಿದೆ. ಬಿಯರ್ ಮಾರಾಟದಿಂದಲೇ ಸುಮಾರು 170 ಕೋಟಿರೂಪಾಯಿ ಆದಾಯ ಸರ್ಕಾರದ ಬೊಕ್ಕಸಕ್ಕೆ ಬಂದಿದೆ.

Advertisement

ಇನ್ನು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಬರೋಬ್ಬರಿ 2900 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಅಬಕಾರಿ ಇಲಾಖೆಗೆ ಬಂದಿದೆ. ಅಂದ್ರೆ ಡಿಸೆಂಬರ್ ತಿಂಗಳಲ್ಲಿ ಬರೋಬ್ಬರಿ ಮೂರು ಸಾವಿರ ಕೋಟಿ ರೂಪಾಯಿ ಆದಾಯ ಬಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದ್ರೆ ಬಿಯರ್ ಮಾರಾಟದಲ್ಲಿ 15 ಪರ್ಸೆಂಟ್ ಏರಿಕೆ ಕಂಡಿದೆ.

Advertisement
Tags :
LatetsNewsNewsKannadaಬೊಕ್ಕಸಮದ್ಯ ಮಾರಾಟಮದ್ಯಪ್ರಿಯಸಂಭ್ರಮಹೊಸ ವರ್ಷ
Advertisement
Next Article