For the best experience, open
https://m.newskannada.com
on your mobile browser.
Advertisement

ಬ್ರಿಟನ್ ಸಂಪುಟದಲ್ಲಿ ಭಾರತ ಮೂಲದ ಯುವತಿ ಲಿಸಾಗೆ ಸ್ಥಾನ

ಬ್ರಿಟನ್ ಕೀರ್ನ ಸ್ಟಾರ್ಮರ್ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕೀರ್ ಸ್ಟಾರ್ಮರ್ ಸಂಪುಟ ಸಚಿವರನ್ನು ಆಯ್ಕೆ ಮಾಡುತ್ತಿದ್ದು, ಇದರಲ್ಲಿ ಭಾರತ ಮೂಲದ ಯುವತಿ ಸಚಿವೆಯಾಗುತ್ತಿದ್ದಾರೆ.
11:55 AM Jul 07, 2024 IST | Ashitha S
ಬ್ರಿಟನ್ ಸಂಪುಟದಲ್ಲಿ ಭಾರತ ಮೂಲದ ಯುವತಿ ಲಿಸಾಗೆ ಸ್ಥಾನ

ಲಂಡನ್: ಬ್ರಿಟನ್ ಚುನಾವಣೆ ಫಲಿತಾಂಶ ಹೊರ ಬಂದಿದ್ದು, ಗುರುವಾರ ಕೀರ್ನ ಸ್ಟಾರ್ಮರ್ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Advertisement

ಕೀರ್ ಸ್ಟಾರ್ಮರ್ ಸಂಪುಟ ಸಚಿವರನ್ನು ಆಯ್ಕೆ ಮಾಡುತ್ತಿದ್ದು, ಇದರಲ್ಲಿ ಭಾರತ ಮೂಲದ ಯುವತಿ ಸಚಿವೆಯಾಗುತ್ತಿದ್ದಾರೆ. ಸಂಸದೆ ಲಿಸಾ ನ್ಯಾಂಡಿ ಬ್ರಿಟನ್ ನೂತನ ಸಂಪುಟದಲ್ಲಿ ಸ್ಥಾನ ಪಡೆದುಕೊಂಡಿದ್ದು, ಕೀರ್ ಸ್ಟಾರ್ಮರ್‌ ಮಹತ್ವದ ಜವಾಬ್ದಾರಿ ನೀಡಿದ್ದಾರೆ. ಪಾಕಿಸ್ತಾನ ಮೂಲದ ಸಂಸದೆ ಶಬಾನಾ ಮಹಮೂದ್ ಸಹ ಕ್ಯಾಬಿನೆಟ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಲಿಸಾ ನ್ಯಾಂಡಿ, ವಾಯುವ್ಯ ಇಂಗ್ಲೆಂಡ್‌ನ ವಿಗನ್ ಕ್ಷೇತ್ರದ ಸಂಸದೆಯಾಗಿದ್ದಾರೆ. ವಿಗನ್ ಕ್ಷೇತ್ರದಿಂದ ಲೇಬರ್ ಪಕ್ಷದ ಅಭ್ಯರ್ಥಿಯಾಗಿ ಲಿಸಾ ಸ್ಪರ್ಧಿಸಿದ್ದರು. ಕೀರ್ ಸ್ಟಾರ್ಮರ್ ಸಂಪುಟದಲ್ಲಿ ಸ್ಥಾನ ಪಡೆದಿರುವ ಲಿಸಾರಿಗೆ ಸಂಸ್ಕೃತಿ, ಮಾಧ್ಯಮ ಮತ್ತು ಕ್ರೀಡಾ ಸಚಿವಾಲಯದ ಜವಾಬ್ದಾರಿಯನ್ನು ನೀಡಲಾಗಿದೆ. ಬರೋಬ್ಬರಿ ಮೂರು ಇಲಾಖೆಗಳ ಜವಾಬ್ದಾರಿಯನ್ನು ಲಸಾ ನೈಂಡಿ ಅವರ ಹೆಗಲ್ಮೇಲೆ ಹೊರಿಸಲಾಗಿದೆ. ಲಿಸಾ ನ್ಯಾಂಡಿ ಈಗ ಲೂಸಿ ಫ್ರೇಸರ್ ಅವರಿಂದ ಸಂಸ್ಕೃತಿ ಸಚಿವಾಲಯದ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ.

Advertisement

ಸಂಸ್ಕೃತಿ, ಮಾಧ್ಯಮ ಮತ್ತು ಕ್ರೀಡಾ ಇಲಾಖೆಯ ಜವಾಬ್ದಾರಿ ಬಹಳ ಮುಖ್ಯವಾಗಿದೆ. ಈ ಸಚಿವಾಲಯದ ಜವಾಬ್ದಾರಿ ಸಿಕ್ಕಿರೋದನ್ನ ನನ್ನಿಂದ ನಂಬಲು ಆಗುತ್ತಿಲ್ಲ ಎಂದು ಲಿಸಾ ನ್ಯಾಂಡಿ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ರಗ್ಬಿ ಲೀಗ್‌ನಿಂದ ರಾಯಲ್ ಒಪೇರಾದವರೆಗೆ, ನಮ್ಮ ಸಾಂಸ್ಕೃತಿಕ ಮತ್ತು ಕ್ರೀಡಾ ಪರಂಪರೆಯು ದೇಶದಾದ್ಯಂತ ಹಳ್ಳಿಗಳು, ಪಟ್ಟಣಗಳು ​​ಮತ್ತು ನಗರಗಳಲ್ಲಿ ಹರಡಿದೆ. ಈ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುವ ಕೆಲಸವನ್ನು ತ್ವರಿತವಾಗಿ ಮಾಡಲಾಗುತ್ತದೆ ಎಂದು ಲಿಸಾ ನ್ಯಾಂಡಿ ಭರವಸೆ ನೀಡಿದ್ದಾರೆ.

Advertisement
Tags :
Advertisement