ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬ್ಯುಸಿನೆಸ್ ಮಾಡುವವರಿಗೆ ಕೇಂದ್ರ ಸರ್ಕಾರದಿಂದ ಲೋನ್

ಪ್ರಧಾನಿ ಮೋದಿಯವರು ಜಾರಿಗೆ ತಂದ ಹಲವು ಪ್ರಮುಖ ಯೋಜನೆಗಳಲ್ಲಿ ಸ್ಟ್ಯಾಂಡ್ ಅಪ್ ಇಂಡಿಯಾ ಕೂಡ ಒಂದು. ಮಹಿಳೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗಾಗಿ ಈ ಯೋಜನೆಯನ್ನು ಮೀಸಲಿರಿಸಲಾಗಿದೆ.
10:27 AM Jan 28, 2024 IST | Ashitha S

ದೆಹಲಿ: ಪ್ರಧಾನಿ ಮೋದಿಯವರು ಜಾರಿಗೆ ತಂದ ಹಲವು ಪ್ರಮುಖ ಯೋಜನೆಗಳಲ್ಲಿ ಸ್ಟ್ಯಾಂಡ್ ಅಪ್ ಇಂಡಿಯಾ ಕೂಡ ಒಂದು. ಮಹಿಳೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗಾಗಿ ಈ ಯೋಜನೆಯನ್ನು ಮೀಸಲಿರಿಸಲಾಗಿದೆ.

Advertisement

ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯ ಪ್ರಮುಖ ಉದ್ದೇಶವೇನೆಂದರೆ ಯಾವುದೇ ಬ್ಯಾಂಕಿನ ಸಾಲಗಳಲ್ಲಿ ರೂ. 10 ಲಕ್ಷದಿಂದ 1 ಕೋಟಿವರೆಗಿನ ಸಾಲಗಳಲ್ಲಿ ಒಂದು ಸಾಲವನ್ನು ಮಹಿಳಾ ಉದ್ಯೋಗದಾತರಿಗೆ, ಇಲ್ಲವೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ನೀಡಲೇಬೇಕೆಂದು ನಿರ್ಧರಿಸಲಾಗಿದೆ.

ಇದು ಉತ್ಪಾದನೆ, ಸೇವೆ, ವ್ಯಾಪಾರ ಈ ಮೂರೂ ಕ್ಷೇತ್ರಕ್ಕೆ ಅನ್ವಯಿಸಲಾಗಿರುತ್ತದೆ. ಒಂದು ವೇಳೆ ಇದು ಪಾಲುದಾರಿಕಾ ಸಂಸ್ಥೆಯಾಗಿದ್ದರೆ ಶೇ. 51 ರಷ್ಟು ಪಾಲುದಾರಿಕೆಯನ್ನು ಮಹಿಳೆ/ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವ್ಯಕ್ತಿ ಹೊಂದಿರಬೇಕಾಗುತ್ತದೆ. ಸಾಲಗಾರ ಯಾವುದೇ ಬ್ಯಾಂಕಿನ ಸದಸ್ಯ ಆಗಿರಬಾರದು.

Advertisement

₹10 ಲಕ್ಷದಿಂದ ₹1 ಕೋಟಿವರೆಗೆ ಇದು ಕಾಂಪೋಸಿಟ್ ಸಾಲವಾಗಿರುತ್ತದೆ. ಅಂದರೆ, ಕರಾರು ಸಾಲ ಮತ್ತು ಕಾರ್ಯವಾಹಿ ಬಂಡವಾಳ ಎರಡೂ ಅನ್ವಯವಾಗುತ್ತದೆ. ಸಾಲದ ಉದ್ದೇಶ ಮಹಿಳೆ/ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವ್ಯಕ್ತಿಗಳಿಂದ ಹೊಸ ಸಂಸ್ಥೆಗಳನ್ನು ಹುಟ್ಟು ಹಾಕುವುದು ಮತ್ತು ಅವರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಬ್ಯಾಂಕಿನ ಅತ್ಯಂತ ಕಡಿಮೆ ಬಡ್ಡಿದರವನ್ನು ಇದು ಒಳಗೊಂಡಿರುತ್ತದೆ.

ಸಾಲ ಪಡೆದ ದಿನದಿಂದ ಕಡಿಮೆ ಎಂದರೆ 18 ತಿಂಗಳಿನಿಂದ 7 ನೇ ವರ್ಷದ ಅಂತ್ಯದೊಳಗೆ ಬಡ್ಡಿ ಸಹಿತ ಸಂಪೂರ್ಣ ಸಾಲ ಮರುಪಾವತಿಯಾಗಬೇಕು. ಇನ್ನು ರೂ. 10 ಲಕ್ಷದ ವರೆಗಿನ ಸಾಲವನ್ನು ಒವರ್ ಡ್ರಾಫ್ಟ್ ರೂಪದಲ್ಲಿಯೂ ಅದಕ್ಕಿಂತ ಹೆಚ್ಚಿನ ಸಾಲವನ್ನು ಕ್ಯಾಷ್ ಕ್ರೆಡಿಟ್ ಲಿಮಿಟ್ ಆಧಾರದಲ್ಲಿ ನೀಡಲಾಗುತ್ತದೆ. ರುಪೇ ಕ್ರೆಡಿಟ್ ಕಾರ್ಡ್ ನ್ನು ಸಾಲ ಪಡೆದ ವ್ಯಕ್ತಿಗೆ ಸುಲಭದ ವ್ಯವಹಾರಕ್ಕಾಗಿ ನೀಡಲಾಗುತ್ತದೆ.

 

 

 

Advertisement
Tags :
GOVERNMENTindiaLatestNewsNewsKannadaನವದೆಹಲಿಪ್ರಧಾನಿ ನರೇಂದ್ರ ಮೋದಿಬೆಂಗಳೂರುಬ್ಯುಸಿನೆಸ್ಲೋನ್
Advertisement
Next Article