ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ದಾಂಪತ್ಯ ಜೀವನಕ್ಕೆ ಕಾಲಿಟ್ಟಿ ಸ್ಟಾರ್ ಆಟಗಾರ ಲಾಕಿ ಫರ್ಗುಸನ್

ನ್ಯೂಝಿಲೆಂಡ್ ತಂಡದ ಸ್ಟಾರ್ ಆಟಗಾರ ಲಾಕಿ ಫರ್ಗುಸನ್  ತಮ್ಮ ಬಹುಕಾಲದ ಗೆಳತಿ ಎಮ್ಮಾ ಕೊಮೊಕಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 
09:07 AM Feb 10, 2024 IST | Ashika S

ಬೆಂಗಳೂರು: ನ್ಯೂಝಿಲೆಂಡ್ ತಂಡದ ಸ್ಟಾರ್ ಆಟಗಾರ ಲಾಕಿ ಫರ್ಗುಸನ್ ತಮ್ಮಬಹುಕಾಲದ ಗೆಳತಿ ಎಮ್ಮಾ ಕೊಮೊಕಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Advertisement

ಲಾಕಿ ಫರ್ಗುಸನ್-ಎಮ್ಮಾ ಕೊಮೊಕಿ ಫೆಬ್ರವರಿ 2 ರಂದೇ ವಿವಾಹವಾಗಿದ್ದರು. ಆದರೆ ಈ ವಿಚಾರವನ್ನು ಎಲ್ಲೂ ಬಹಿರಂಗಪಡಿಸಿರಲಿಲ್ಲ. ಇದೀಗ ಮದುವೆ ಫೋಟೋಗಳನ್ನು ಲಾಕಿ ಫರ್ಗುಸನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದೀಗ ಫರ್ಗುಸನ್ ದಂಪತಿಯ ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Advertisement

ಲಾಕಿ ಫರ್ಗುಸನ್ ಅವರ ಈ ವಿವಾಹ ಸಮಾರಂಭದಲ್ಲಿ ಕುಟುಂಬಸ್ಥರು ಮತ್ತು ಆಪ್ತರು ಮಾತ್ರ ಕಾಣಿಸಿಕೊಂಡಿದ್ದರು. ಅಲ್ಲದೆ ನ್ಯೂಝಿಲೆಂಡ್ ತಂಡದ ಆಟಗಾರರು ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಆಡುತ್ತಿರುವ ಕಾರಣ ಈ ಶುಭ ಸಮಾರಂಭಕ್ಕೆ ಗೈರಾಗಿದ್ದರು.

ಲಾಕಿ ಫರ್ಗುಸನ್ ಈ ಬಾರಿಯ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿಯಲಿದ್ದಾರೆ. ಈ ಬಾರಿಯ ಹರಾಜಿನಲ್ಲಿ ನ್ಯೂಝಿಲೆಂಡ್ ವೇಗಿಯನ್ನು ಆರ್​ಸಿಬಿ ಬರೋಬ್ಬರಿ 2 ಕೋಟಿ ರೂ. ನೀಡಿ ಖರೀದಿಸಿದೆ.

Advertisement
Tags :
LatetsNewsNewsKannadaಎಮ್ಮಾ ಕೊಮೊಕಿಜೀವನದಾಂಪತ್ಯಲಾಕಿ ಫರ್ಗುಸನ್
Advertisement
Next Article