For the best experience, open
https://m.newskannada.com
on your mobile browser.
Advertisement

ಮಣಿಪುರದ 11 ಬೂತ್ ಗಳಲ್ಲಿ ಮರು ಮತದಾನಕ್ಕೆ ಆದೇಶ

ಮೊದಲ ಹಂತದ ಮತದಾನ ನಡೆದ ಮಣಿಪುರದ 11 ಮತ ಕೇಂದ್ರಗಳಲ್ಲಿ ಮರು ಮತದಾನಕ್ಕೆ ಮಣಿಪುರ ಮುಖ್ಯ ಚುನಾವಣಾಧಿಕಾರಿ ಶನಿವಾರ ಘೋಷಿಸಿದ್ದಾರೆ. ಮಣಿಪುರ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 22 ರಂದು 11 ಮತಗಟ್ಟೆಗಳಲ್ಲಿ ಮರುಚುನಾವಣೆ ನಡೆಯಲಿದೆ.
01:21 PM Apr 21, 2024 IST | Ashitha S
ಮಣಿಪುರದ 11 ಬೂತ್ ಗಳಲ್ಲಿ ಮರು ಮತದಾನಕ್ಕೆ ಆದೇಶ

ಇಂಫಾಲ್: ಮೊದಲ ಹಂತದ ಮತದಾನ ನಡೆದ ಮಣಿಪುರದ 11 ಮತ ಕೇಂದ್ರಗಳಲ್ಲಿ ಮರು ಮತದಾನಕ್ಕೆ ಮಣಿಪುರ ಮುಖ್ಯ ಚುನಾವಣಾಧಿಕಾರಿ ಶನಿವಾರ ಘೋಷಿಸಿದ್ದಾರೆ. ಮಣಿಪುರ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 22 ರಂದು 11 ಮತಗಟ್ಟೆಗಳಲ್ಲಿ ಮರುಚುನಾವಣೆ ನಡೆಯಲಿದೆ.

Advertisement

ಏಪ್ರಿಲ್ 19 ರಂದು ಈ ಕೇಂದ್ರಗಳಲ್ಲಿ ನಡೆಸಿದ ಮತಗಳನ್ನು ಅಸಿಂಧು ಎಂದು ಘೋಷಿಸಿ ಹೊಸ ಮತದಾನಕ್ಕೆ ವ್ಯವಸ್ಥೆ ಮಾಡುವಂತೆ ಚುನಾವಣಾ ಆಯೋಗದ ಆದೇಶಿಸಿದೆ.

ಉರಿಪೋಕ್‌ ನಲ್ಲಿ ಮೂರು ಮತ್ತು ಇಂಫಾಲ್ ಪಶ್ಚಿಮ ಜಿಲ್ಲೆಯ ಕೊಂತೌಜಮ್‌ನಲ್ಲಿ ಒಂದು, ಕ್ಷೇತ್ರಗಾವೊದಲ್ಲಿ ನಾಲ್ಕು ಮತ್ತು ಇಂಫಾಲ್ ಪೂರ್ವ ಜಿಲ್ಲೆಯ ತೊಂಗ್ಜುನಲ್ಲಿ ಒಂದು ಮತ್ತು ಖುರೈ ಕ್ಷೇತ್ರದ ಮೊಯಿರಂಗ್ಯಾಂಪು ಸಾಜೆಬ್ ಮತ್ತು ತೊಂಗಮ್ ಲೈಕೈ ನಲ್ಲಿ ಮರು ಮತದಾನ ನಡೆಯಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Advertisement

ಗುಂಡಿನ ದಾಳಿ, ಬೆದರಿಕೆ, ಹಲವಾರು ಮತದಾನದ ಸ್ಥಳಗಳಲ್ಲಿ ಇವಿಎಂ ಧ್ವಂಸ ಮತ್ತು ಮತಗಟ್ಟೆ ವಶಪಡಿಸಿಕೊಂಡ ಆರೋಪಗಳ ಹೊರತಾಗಿಯೂ ಸಂಘರ್ಷ ಪೀಡಿತ ರಾಜ್ಯವಾದ ಮಣಿಪುರದಲ್ಲಿ ಶುಕ್ರವಾರ ಎರಡು ಲೋಕಸಭಾ ಕ್ಷೇತ್ರಗಳಲ್ಲಿ 72% ಮತದಾನವಾಗಿದೆ.

ಇದಕ್ಕೂ ಮುನ್ನ 47 ಮತಗಟ್ಟೆಗಳಲ್ಲಿ ಮರು ಎಣಿಕೆಗೆ ಒತ್ತಾಯಿಸಿದ ಕಾಂಗ್ರೆಸ್, ಬೂತ್‌ ಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಮತಯಂತ್ರಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದೆ.

Advertisement
Tags :
Advertisement