ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕರೆಂಟ್ ಕೊಡಣ್ಣೋ ಇಲ್ದಿದ್ರೆ ಲವ್ ಬ್ರೇಕಪ್ ಆಗ್ಬಿಡುತ್ತೆ: ಫನ್ನಿ ಆಡಿಯೋ ಕೇಳಿ

ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ. ಹು ಅಂತಿಯ ಉಹು ಅಂತಿಯ ಬಾ ಅಂತಿಯ ತಾ ಅಂತಿಯ ಎಂಬ ಹಾಡೊಂದಿದೆ. ಪ್ರೀತಿಯಲ್ಲಿ ಸರಿಯಾಗಿದ್ದರೆ ಸಿಹಿಯಾಗಿರುತ್ತದೆ. ಆದರೆ ಯಡವಟ್ಟಾದರೆ ಅದರಷ್ಟು ಕಹಿ ಯಾವುದೂ ಇಲ್ಲ.ಹಾಗೇ ಇಲ್ಲೊಬ್ಬ ಯುವಕ ಪ್ರೀತಿಸಲು ಕರೆಂಟ್‌ ಇಲ್ಲದೆ ಪರದಾಟ ಅನುಭವಿಸುತ್ತಿರುವ ಆಡಿಯೋವೊಂದು ವೈರಲ್‌ ಆಗಿದೆ.
03:54 PM Nov 27, 2023 IST | Ashika S

ಬೆಂಗಳೂರು: ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ. ಹು ಅಂತಿಯ ಉಹು ಅಂತಿಯ ಬಾ ಅಂತಿಯ ತಾ ಅಂತಿಯ ಎಂಬ ಹಾಡೊಂದಿದೆ. ಪ್ರೀತಿಯಲ್ಲಿ ಸರಿಯಾಗಿದ್ದರೆ ಸಿಹಿಯಾಗಿರುತ್ತದೆ. ಆದರೆ ಯಡವಟ್ಟಾದರೆ ಅದರಷ್ಟು ಕಹಿ ಯಾವುದೂ ಇಲ್ಲ. ಹಾಗೇ ಇಲ್ಲೊಬ್ಬ ಯುವಕ ಪ್ರೀತಿಸಲು ಕರೆಂಟ್‌ ಇಲ್ಲದೆ ಪರದಾಟ ಅನುಭವಿಸುತ್ತಿರುವ ಆಡಿಯೋವೊಂದು ವೈರಲ್‌ ಆಗಿದೆ.

Advertisement

ಅಮರ ಪ್ರೇಮಿಯೊಬ್ಬ ಕೆ.ಇ.ಬಿ ಆಫೀಸರ್ ಗೆ ಕರೆ ಮಾಡಿ, ನನ್ನ ಮೊಬೈಲ್ ಸ್ವಿಚ್ ಆಫ್ ಆಗಿದೆ, ನನ್ ಹುಡುಗಿಗೆ ಮೆಸೇಜ್ ಮಾಡ್ಬೇಕು, ಬೇಗ ಕರೆಂಟ್ ಕೊಡಿ ಸರ್…. ಎಂದು ತಲೆ ತಿಂದಿದ್ದಾನೆ. ಇವರಿಬ್ಬರ ನಡುವಿನ ಮಾತುಕತೆಯ ಹಾಸ್ಯಮಯ ಆಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

@shetty_b_1994 ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಅಮರ ಪ್ರೇಮಿ ಹಾಗೂ ಕೆ.ಇ.ಬಿ ಆಫೀಸರ್ ನಡುವಿನ ಹಾಸ್ಯಮಯ ಮಾತುಕತೆಯನ್ನು ಕಾಣಬಹುದು.

Advertisement

ಈ ಆಡಿಯೋದಲ್ಲಿ ಯುವಕನೊಬ್ಬ ಕೆ.ಇ.ಬಿ ಆಫೀಸರ್ ಗೆ ಕರೆ ಮಾಡಿ, ಸರ್ ಆದಷ್ಟು ಬೇಗ ಕರೆಂಟ್ ಕೊಡಿ, ನನ್ನ ಮೊಬೈಲ್ ಸ್ವಿಚ್ ಆಫ್ ಆಗಿದೆ. ನನ್ ಹುಡುಗಿಗೆ ಮೆಸೇಜ್ ಮಾಡ್ಬೇಕು… ಏನೋ ಅಪರೂಪಕ್ಕೆ ಲವ್ ಮಾಡಿದ್ದೀನಿ ಸರ್ ಎಂದು ಹೇಳುತ್ತಾನೆ. ಈತನ ಈ ಮಾತನ್ನು ತಾಳ್ಮೆಯಿಂದ ಕೇಳಿಸಿಕೊಂಡು ಯಾರ್ಯಾರಿಗೆ ಎಂತೆಂತಹ ಕಷ್ಟ ಇರುತ್ತಲ್ವಾ ಯಪ್ಪಾ… ಎಂದು ನಗುತ್ತಲೇ ಕೆ.ಇ.ಬಿ ಆಫೀಸರ್ ಉತ್ತರಿಸುತ್ತಾರೆ. ಬಳಿಕ ಆ ಯುವಕ ಬೇಗ ಕರೆಂಟ್ ಕೊಡಣ್ಣೋ ಇಲ್ದಿದ್ರೆ ಲವ್ ಬ್ರೇಕಪ್ ಆಗ್ಬಿಡುತ್ತೆ, ಇವಾಗ 29 ವರ್ಷ, ಏನೋ ಈಗ ಅಪರೂಪಕ್ಕೆ ಲವ್ ಮಾಡಿದ್ದೀನಿ. ಸ್ವಲ್ಪ ಕಷ್ಟ ಅರ್ಥ ಮಾಡ್ಕೊಳ್ಳಿ ಸರ್, ಬೇಗ ಕರೆಂಟ್ ಕೊಡಿ. ಎಂದು ಕೇಳಿಕೊಳ್ಳುತ್ತಾನೆ.

ಈ ಅಮರ ಪ್ರೇಮಿಯ ಕಾಟ ತಾಳಲಾರದೆ ಕೆ.ಇ.ಬಿ ಆಫೀಸರ್ ಆಯ್ತಪ್ಪಾ ಹೇಗಾದ್ರೂ ಮಾಡಿ ಕರೆಂಟ್ ಕೊಡಿಸ್ತೀನಿ ಎಂದು ಹೇಳುತ್ತಾರೆ. ಅದಕ್ಕೆ ಈ ಭೂಪ ಒಂದು ಜನರೇಟರ್ ವ್ಯವಸ್ಥೆ ಮಾಡಿಕೊಡಿ ಅಂತಾ ಕೇಳಿರುವ ಆಡಿಯೋ ಈಗ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಜನರು ಬಿದ್ದು ಬಿದ್ದು ನಗುವಂತಾಗಿದೆ.

Advertisement
Tags :
LatetsNewsloveNewsKannadaಆಡಿಯೋಪ್ರೀತಿಯಡವಟ್ಯುವಕ
Advertisement
Next Article