For the best experience, open
https://m.newskannada.com
on your mobile browser.
Advertisement

ಎಂ.ಸಿ. ಸಿ. ಬ್ಯಾಂಕಿನ ನೂತನ ಆಡಳಿತ ಕಛೇರಿ ಉದ್ಘಾಟನೆ, 112ನೇ ಸ್ಥಾಪಕರ ದಿನಾಚರಣೆ

ಎಂಸಿ.ಸಿ. ಬ್ಯಾಂಕಿನ ನೂತನ ನವೀಕೃತ ಅತ್ಯಾಧುನಿಕ ಸುಸಜ್ಜಿತ ಆಡಳಿತ ಕಛೇರಿಯ ಉದ್ಘಾಟನೆ ಹಾಗೂ ಬ್ಯಾಂಕಿನ 112ನೇ ಸಂಸ್ಥಾಪಕರ ದಿನಾಚರಣೆಯ ಸಮಾರಂಭ ದಿನಾಂಕ 10.05.2024ರಂದು ನೆರವೆರಿತು. ನೂತನ ಸುಸಜ್ಜಿತ ಆಡಳಿತ ಕಛೇರಿಯನ್ನು ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ  ಅನಿಲ್ ಲೋಬೊ ಉದ್ಘಾಟಿಸಿದರು. ಅವರ್ ಲೇಡಿ ಅಫ್ ಮಿರಾಕಲ್ಸ್ ಮಿಲಾಗ್ರಿಸ್ ಚರ್ಚ್ ನ  ಧರ್ಮಗುರು ವಂ. ಬೊನವೆಂಚರ್ ನಜರೆತ್ ನೂತನ ಕಛೇರಿಯನ್ನು ಆಶಿರ್ವಚಿಸಿದರು.
02:55 PM May 11, 2024 IST | Ashika S
ಎಂ ಸಿ  ಸಿ  ಬ್ಯಾಂಕಿನ ನೂತನ ಆಡಳಿತ ಕಛೇರಿ ಉದ್ಘಾಟನೆ  112ನೇ ಸ್ಥಾಪಕರ ದಿನಾಚರಣೆ

ಮಂಗಳೂರು: ಎಂಸಿ.ಸಿ. ಬ್ಯಾಂಕಿನ ನೂತನ ನವೀಕೃತ ಅತ್ಯಾಧುನಿಕ ಸುಸಜ್ಜಿತ ಆಡಳಿತ ಕಛೇರಿಯ ಉದ್ಘಾಟನೆ ಹಾಗೂ ಬ್ಯಾಂಕಿನ 112ನೇ ಸಂಸ್ಥಾಪಕರ ದಿನಾಚರಣೆಯ ಸಮಾರಂಭ ದಿನಾಂಕ 10.05.2024ರಂದು ನೆರವೆರಿತು. ನೂತನ ಸುಸಜ್ಜಿತ ಆಡಳಿತ ಕಛೇರಿಯನ್ನು ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ  ಅನಿಲ್ ಲೋಬೊ ಉದ್ಘಾಟಿಸಿದರು. ಅವರ್ ಲೇಡಿ ಅಫ್ ಮಿರಾಕಲ್ಸ್ ಮಿಲಾಗ್ರಿಸ್ ಚರ್ಚ್ ನ  ಧರ್ಮಗುರು ವಂ. ಬೊನವೆಂಚರ್ ನಜರೆತ್ ನೂತನ ಕಛೇರಿಯನ್ನು ಆಶಿರ್ವಚಿಸಿದರು.

Advertisement

ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರ ರತ್ನ ಅನಿಲ್ ಲೋಬೊ ವಹಿಸಿದ್ದರು. ಅವರ್ ಲೇಡಿ ಅಫ್ ಮಿರಾಕಲ್ಸ್ ಮಿಲಾಗ್ರಿಸ್ ಚರ್ಚ್ನ ಧರ್ಮಗುರು ವಂ. ಬೊನವೆಂಚರ್ ನಜರೆತ್, ಲೌರ್ಡ್ಸ್ ಸೆಂಟ್ರಲ್ ಸ್ಕೂಲ್‌ನ ಪ್ರಾಂಶುಪಾಲ ವಂ. ರೋಬರ್ಟ್ ಡಿಸೊಜ, ಹಿರಿಯ ನ್ಯಾಯವಾದಿ  ಕ್ಲಾರೆನ್ಸ್ ಪೈಸ್, ಉಡುಪಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ  ಕ್ಲಿಫರ್ಡ್ ಲೋಬೊ, ಹಿರಿಯ ವಕೀಲ  ಎಂ.ಪಿ. ನೋರೊನ್ಹಾ ಅತಿಥಿಗಳಾಗಿದ್ದರು. ಉಪಾಧ್ಯಕ್ಷ  ಜೆರಾಲ್ಡ್ ಡಿಸಿಲ್ವಾ, ಮಹಾಪ್ರಬಂಧಕ  ಸುನಿಲ್ ಮಿನೇಜಸ್ ವೇದಿಕೆಯಲ್ಲಿದ್ದರು.

ಬ್ಯಾಂಕಿನ ಸಂಸ್ಥಾಪಕರ ದಿನಾಚರಣೆಯನ್ನು ಸಂಸ್ಥಾಪಕ ಪಿ.ಎಫ್. ಎಕ್ಸ್ ಸಲ್ಡಾನ್ಹಾರವರ ಭಾವಚಿತ್ರಕ್ಕೆ ಹೂ ಅರ್ಪಿಸುವ ಮೂಲಕ ಆಚರಿಸಲಾಯಿತು.

Advertisement

ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಸ್ವಾಗತಿಸಿ ಪ್ರಸ್ತಾವನೆಗೈದು, ಸಂಕಷ್ಟಗೊಳಗಾದ ಸಮುದಾಯದ ನೆರವಿಗಾಗಿ 112 ವರ್ಷಗಳ ಹಿಂದೆ ಬ್ಯಾಂಕನ್ನು ಪಿ ಎಫ್. ಸಲ್ಡಾನ್ಹಾ ಸ್ಥಾಪಿಸಿದ್ದರು. ಬ್ಯಾಂಕಿಂಗ್ ಕ್ಷೇತ್ರ ಅಮೂಲಾಗ್ರ ಬದವಾಣೆಗೊಳಗಾಗಿದೆ. ಮಾಹಿತಿ ತಂತ್ರಜ್ಞಾನದಿನದಿಂದ ಕ್ರಾಂತಿಕಾರಿ ಪರಿವರ್ತನೆಗಳಾಗುತ್ತಿದ್ದು ಅದಕ್ಕೆ ತೆರೆದುಕೊಳ್ಳದಿದ್ದರೆ ಬೆಳೆಯುವುದು, ಉಳಿಯುವುದು ಕಷ್ಟ ಎಂದರು.

ಪ್ರಸ್ತುತ ಪಂಚ ಜಿಲ್ಲೆಗಳಿಗೆ ಶಾಖೆಗಳ ವಿಸ್ತರಣೆ ಯೋಜನೆ ಕಾರ್ಯಗತಗೊಳಿಸುತ್ತಿರುವ ಎಂ.ಸಿ.ಸಿ. ಬ್ಯಾಂಕ್ ಮುಂದೆ ರಾಜ್ಯಾದ್ಯಂತ ಶಾಖೆಗಳನ್ನು ತೆರೆಯುವ ಯೋಜನೆ ಹಾಕಿಗೊಂಡಿದೆ. ಬ್ಯಾಂಕಿನ ಕಾರ್ಯಕ್ಷೇತ್ರವು ಇಡೀ ಕರ್ನಾಟಕಕ್ಕೆ ವಿಸ್ತರಿಸಿದ್ದು, ಇದಕ್ಕೆ ಆರ್‌ಬಿಐನಿಂದಲೂ ಅನುಮೋದನೆ ಸಿಕ್ಕಿರುತ್ತದೆ. ಸುಸುಜ್ಜಿತ ಆಡಳಿತ ಕಛೇರಿಯಲ್ಲಿ ಸಿಬಂದಿ ತರಬೇತಿ ಕೇಂದ್ರ, ಎಟಿಎಂ, ಕ್ಯಾಶ್ ಡಿಪಾಜಿಟ್‌ಯಂತ್ರ, ಪಾಸ್ ಬುಕ್ ಕಿಯೊಸ್ಕ್ ವ್ಯವಸ್ಥೆಯಿದ್ದು, ಗ್ರಾಹಕರಿಗೆ ವಿಶಾಲ  ಪಾರ್ಕಿಂಗ್ ವ್ಯಸ್ಥೆಯನ್ನೂ ಮಾಡಲಾಗಿದೆ ಎಂದರು.

ನಗರದ ಹಿರಿಯ ವಕೀಲ ಬ್ಯಾಂಕಿನ ಕಾನೂನು ಸಲಹೆಗಾರರಾದ  ಕ್ಲೇರೆನ್ಸ್ ಪೈಸ್ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತಾನಾಡಿದ ಅವರು ಬ್ಯಾಂಕಿಗೆ ಗ್ರಾಹಕರೇ ಮುಖ್ಯ ಹೊರತು ಗ್ರಾಹಕರಿಗೆ ಬ್ಯಾಂಕ್ ಅಲ್ಲ, ಅವರೆಂದಿಗೂ ಬ್ಯಾಂಕಿಗೆ ಭಾರವಲ್ಲ ಎನ್ನುವ ಸೂತ್ರವನ್ನು ಪಾಲಿಸಬೇಕು ಎಂದು ಹೇಳಿ ಬ್ಯಾಂಕಿನ ಅಧ್ಯಕ್ಷ, ನಿರ್ದೇಶಕರು ಹಾಗೂ ಸಿಬ್ಬಂದಿಗಳಿಗೆ ಶುಭ ಹಾರೈಸಿದರು.

1000 ಕೋಟಿ ವ್ಯವಹಾರದ ಮೈಲಿಗಲ್ಲು ಆಚರಣೆಯ ಸಂದರ್ಭದಲ್ಲಿ ಹೊರತಂದಿರುವ ಕೊಡುಗೆಗಳ ಪೈಕಿ ಡೈಮಂಡ್ ಕಸ್ಟಮರ್ ಕಾರ್ಡ್ ಅನ್ನು ಬಿಡುಗಡೆಗೊಳಿಸಿ ಹಸ್ತಾಂತರಿಸಲಾಯಿತು.

ವಂದನೀಯ ಬೊನವೆಂಚರ್ ನಜರೆತ್ ಮಾತನಾಡಿ 112 ವರ್ಷದಿಂದ ಸ್ಥಾಪಕರು, ಆ ಬಳಿಕ ಆಡಳಿತ ಮಂಡಳಿ, ಸಿಬಂದಿಯ ಶ್ರಮದಿಂದ ಎಂ.ಸಿ.ಸಿ. ಬ್ಯಾಂಕ್ ವರ್ಷದಿಂದ ವರ್ಷಕ್ಕೆ ಔನ್ನತ್ಯ ಸಾಧಿಸುತ್ತಾ ಬಂದಿದೆ. ಸಮಾಜಕ್ಕೆ ಸದಾ ಕೊಡುಗೆ ನೀಡುತ್ತಿರುವ ಬ್ಯಾಂಕ್‌ನ ಸೇವೆ ಇನ್ನೂ ಮುಂದುವರಿಯಲಿ ಎಂದು ಹಾರೈಸಿದರು. ಮುಖ್ಯ ಅತಿಥಿಗಳಾದ ವಂ. ರಾಬರ್ಟ್ ಡಿಸೋಜ,  ಕ್ಲಿಫರ್ಡ್ ಲೋಬೊ ಹಾಗೂ ಹಿರಿಯ ವಕೀಲ ಎಂ.ಪಿ.ನೊರೊನ್ಹಾ ಸಂಧರ್ಭೊಚಿತವಾಗಿ ಮಾತನಾಡಿ ಶುಭ ಹಾರೈಸಿದರು.

ಬ್ಯಾಂಕಿನ ನಿರ್ದೇಶಕರಾದ ಅನಿಲ್ ಪತ್ರಾವೊ, ಹೆರಾಲ್ಡ್ ಮೊಂತೇರೊ, ಎಲ್‌ರೊಯ್ ಕ್ರಾಸ್ಟೊ, ರೋಶನ್ ಡಿಸೋಜ, ಡಾ| ಜೆರಾಲ್ಡ್ ಪಿಂಟೊ, ಆಂಡ್ರ್ಯು ಡಿಸೋಜ, ಡೆವಿಡ್ ಡಿಸೋಜ, ಜೆ.ಪಿ.ರೊಡ್ರಿಗಸ್, ಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ಸಿ.ಜಿ.ಪಿಂಟೊ, ಐರಿನ್ ರೆಬೆಲ್ಲೊ, ಸುಶಾಂತ್ ಸಲ್ಡಾನ್ಹಾ, ಶರ್ಮಿಳಾ ಮಿನೇಜಸ್, ಫೆಲಿಕ್ಸ್ ಡಿಕ್ರುಜ್ ಆಲ್ವಿನ್ ಪಿ. ಮೊಂತೇರೊ ವೇದಿಕೆಯಲ್ಲಿ ಹಾಜರಿದ್ದರು.

ಬ್ಯಾಂಕಿನ ಮಹಾಪ್ರಬಂಧಕ ಸುನಿಲ್ ಮಿನೇಜಸ್ ವಂದಿಸಿದರು, ಮನು ಬಂಟ್ವಾಳ ನಿರೂಪಿಸಿದರು.

Advertisement
Tags :
Advertisement