For the best experience, open
https://m.newskannada.com
on your mobile browser.
Advertisement

ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಾಯಿ ನಿಧನ

ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ತಾಯಿ ಮಾಧವಿ ರಾಜೇ ಸಿಂಧಿಯಾ ದೆಹಲಿ ಏಮ್ಸ್‌ನಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಬೆಳಗ್ಗೆ 9.28ಕ್ಕೆ ನಿಧನ ಹೊಂದಿದರು.
12:58 PM May 15, 2024 IST | Ashitha S
ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಾಯಿ ನಿಧನ

ನವದೆಹಲಿ: ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ತಾಯಿ ಮಾಧವಿ ರಾಜೇ ಸಿಂಧಿಯಾ ದೆಹಲಿ ಏಮ್ಸ್‌ನಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಬೆಳಗ್ಗೆ 9.28ಕ್ಕೆ ನಿಧನ ಹೊಂದಿದರು.

Advertisement

ಮಾಧವಿ ರಾಜೇ ಸಿಂಧಿಯಾ ಅವರ ನಿಧನದಿಂದ ಸಿಂಧಿಯಾ ಕುಟುಂಬದ ದೊಡ್ಡ ತಲೆಯೊಂದು ಉರುಳಿ ಬಿದ್ದಂತಾಗಿದ್ದು, ಮಾಧವಿ ರಾಜೇ ಸಿಂಧಿಯಾ ವಯೋ ಸಹಜ ಕಾಯಿಲೆಯಿಂದ ಕಳೆದ ಕೆಲವು ದಿನಗಳಿಂದ ಏಮ್ಸ್‌ನಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ನ್ಯುಮೋನಿಯಾ ಮತ್ತು ಸೆಪ್ಸಿಸ್‌ನಿಂದ ಬಳಲುತ್ತಿದ್ದ ಅವರಿಗೆ ತೀವ್ರಾ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

Advertisement

ಇತ್ತೀಚೆಗೆ, ಮೂರನೇ ಹಂತದ ಮತದಾನಕ್ಕೆ ಮೊದಲು, ಸಿಂಧಿಯಾ ಕುಟುಂಬದ ರಾಜಮಾತೆ ಅವರ ಆರೋಗ್ಯ ಹದಗೆಟ್ಟ ಕಾರಣ ದೆಹಲಿ ಏಮ್ಸ್‌ಗೆ ದಾಖಲಾಗಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮಾಧವಿ ರಾಜೆ ಅವರ ಪಾರ್ಥಿವ ಶರೀರವನ್ನು ಅಂತಿಮ ವಿಧಿಗಳಿಗಾಗಿ ಮಧ್ಯಪ್ರದೇಶದ ಗ್ವಾಲಿಯರ್‌ಗೆ ತರಲಾಗುತ್ತದೆ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ.

Advertisement
Tags :
Advertisement