For the best experience, open
https://m.newskannada.com
on your mobile browser.
Advertisement

ಮಹೀಂದ್ರಾ ಥಾರ್​ ಕಾರನ್ನು ನದಿಯಲ್ಲಿಯೇ ಓಡಿಸಿದ ಪ್ರವಾಸಿಗರು

ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆಗಾಗಿ ಹಿಮಾಚಲ ಪ್ರದೇಶದ ಗಿರಿಧಾಮಗಳಿಗೆ ಅಪಾರ ಸಂಖ್ಯೆಯ ಪ್ರವಾಸಿಗರು ದಾಂಗುಡಿ ಇಟ್ಟಿದ್ದಾರೆ. ಹೀಗಾಗಿ, ಹಿಮಾಚಲ ಪ್ರದೇಶದ ರಸ್ತೆಗಳಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ.
10:43 PM Dec 25, 2023 IST | Ashitha S
ಮಹೀಂದ್ರಾ ಥಾರ್​ ಕಾರನ್ನು ನದಿಯಲ್ಲಿಯೇ ಓಡಿಸಿದ ಪ್ರವಾಸಿಗರು

ಚಂಡೀಗಢ: ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆಗಾಗಿ ಹಿಮಾಚಲ ಪ್ರದೇಶದ ಗಿರಿಧಾಮಗಳಿಗೆ ಅಪಾರ ಸಂಖ್ಯೆಯ ಪ್ರವಾಸಿಗರು ದಾಂಗುಡಿ ಇಟ್ಟಿದ್ದಾರೆ. ಹೀಗಾಗಿ, ಹಿಮಾಚಲ ಪ್ರದೇಶದ ರಸ್ತೆಗಳಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ.

Advertisement

ಟ್ರಾಫಿಕ್​ ಜಾಮ್​ನಿಂದ ಪಾರಾಗಲು ಕೆಲ ಪ್ರವಾಸಿಗರು ಅಡ್ಡ ಮಾರ್ಗ ಶೋಧಿಸಿದ್ದಾರೆ. ಮುಂದೆ ಸಾಗಲು ತಮ್ಮ ವಾಹನಗಳನ್ನು ನದಿಯಲ್ಲಿಯೇ ಓಡಿಸುವ ಅಪಾಯಕಾರಿ ಸಾಹಸಕ್ಕೆ ಕೈಹಾಕಿದ್ದಾರೆ.

ಲಾಹೌಲ್ ಕಣಿವೆಯ ಚಂದ್ರ ನದಿಯ ಮೂಲಕ ಮಹೀಂದ್ರಾ ಥಾರ್ ಎಸ್‌ಯುವಿ ಓಡಿಸಿಕೊಂಡು ಪ್ರವಾಸಿಗರು ಮುಂದೆ ಸಾಗುತ್ತಿರುವ ವಿಡಿಯೋ ವೈರಲ್​ ಆಗಿದೆ. ಅದೃಷ್ಟವಶಾತ್, ನದಿಯಲ್ಲಿನ ನೀರಿನ ಮಟ್ಟವು ಹೆಚ್ಚಿರಲಿಲ್ಲ, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸ್ಥಳೀಯರಿಂದ ಇದಕ್ಕೆ ಟೀಕೆ ವ್ಯಕ್ತವಾಗಿದೆ

Advertisement

Advertisement
Tags :
Advertisement