For the best experience, open
https://m.newskannada.com
on your mobile browser.
Advertisement

#BoycottMaldives: ಮಾಲ್ಡೀವ್ಸ್ ರಾಯಭಾರಿಗೆ ಸಮನ್ಸ್ ನೀಡಿದ ಭಾರತ

ಪ್ರಧಾನಿ ಮೋದಿ ಬಗ್ಗೆ ಮಾಲ್ಡೀವ್ಸ್ ಸಚಿವರು ಮಾಡಿರುವ ವಿವಾದಾತ್ಮಕ ಹೇಳಿಕೆಯಿಂದ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಿದೆ. ಈ ಮಧ್ಯೆ ಭಾರತದ ವಿದೇಶಾಂಗ ಸಚಿವಾಲಯ ಮಾಲ್ಡೀವ್ಸ್‌ನ ರಾಯಭಾರಿಗೆ ಸಮನ್ಸ್‌ ನೀಡಿದೆ.
12:44 PM Jan 08, 2024 IST | Ashitha S
 boycottmaldives  ಮಾಲ್ಡೀವ್ಸ್ ರಾಯಭಾರಿಗೆ ಸಮನ್ಸ್ ನೀಡಿದ ಭಾರತ

ದೆಹಲಿ: ಪ್ರಧಾನಿ ಮೋದಿ ಬಗ್ಗೆ ಮಾಲ್ಡೀವ್ಸ್ ಸಚಿವರು ಮಾಡಿರುವ ವಿವಾದಾತ್ಮಕ ಹೇಳಿಕೆಯಿಂದ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಿದೆ. ಈ ಮಧ್ಯೆ ಭಾರತದ ವಿದೇಶಾಂಗ ಸಚಿವಾಲಯ ಮಾಲ್ಡೀವ್ಸ್‌ನ ರಾಯಭಾರಿಗೆ ಸಮನ್ಸ್‌ ನೀಡಿದೆ.

Advertisement

ಮಾಲ್ಡೀವ್ಸ್ ರಾಯಭಾರಿ ಇಬ್ರಾಹಿಂ ಶಾಹಿಬ್ ದೆಹಲಿಯ ಸೌತ್ ಬ್ಲಾಕ್‌ನಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ತೆರಳಿದ್ದಾರೆ. ಪ್ರಧಾನಿ ಮೋದಿ ವಿರುದ್ಧದ ಹೇಳಿಕೆಗಳ ಕುರಿತು ಸಚಿವರ ಕಾಮೆಂಟ್‌ಗಳ ಬಗ್ಗೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಮಾಲ್ಡೀವ್ಸ್ ಸರ್ಕಾರ ಇದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿಕೆ ನೀಡಿದೆ. ಚಿವರ ಅವಹೇಳನಕಾರಿ ಹೇಳಿಕೆಗಳ ನಂತರ, ಮಾಲ್ಡೀವ್ಸ್ ವಿರುದ್ಧ ಭಾರತದಲ್ಲಿ ವಿರೋಧ ಪ್ರಾರಂಭವಾಯಿತು. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಲ್ಡೀವ್ಸ್ ವಿರುದ್ಧ ಪ್ರತಿಭಟನೆ ನಡೆಸಿದರು.

Advertisement

#BoycottMaldives ಭಾನುವಾರದಂದು ಭಾರತದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಅನೇಕ ಜನರು ತಮ್ಮ ರದ್ದಾದ ವಿಮಾನ ಪ್ರಯಾಣ ಮತ್ತು ಹೋಟೆಲ್ ಬುಕಿಂಗ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

Advertisement
Tags :
Advertisement