For the best experience, open
https://m.newskannada.com
on your mobile browser.
Advertisement

ಭಾರತದ ಧ್ವಜಕ್ಕೆ ಅಗೌರವ; ಕ್ಷಮೆಯಾಚಿಸಿದ ಮಾಲ್ಡೀವ್ಸ್​ ಸಚಿವೆ

ಮಾಲ್ಡೀವ್ಸ್‌ ನ ಅಮಾನತುಗೊಂಡ ಸಚಿವೆ ಮರಿಯಮ್ ಶಿಯುನಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಭಾರತದ ರಾಷ್ಟ್ರಧ್ವಜವನ್ನು ಅವಮಾನಿಸುವ ಚಿತ್ರವನ್ನು ಹಂಚಿಕೊಂಡಿದ್ದರು. ಬಳಿಕ ಇದು ವಿವಾದಕ್ಕೆ ಕಾರಣವಾಗಿತ್ತು.
12:40 PM Apr 08, 2024 IST | Ashitha S
ಭಾರತದ ಧ್ವಜಕ್ಕೆ ಅಗೌರವ  ಕ್ಷಮೆಯಾಚಿಸಿದ ಮಾಲ್ಡೀವ್ಸ್​ ಸಚಿವೆ

ಮಾಲ್ಡೀವ್ಸ್‌ ನ ಅಮಾನತುಗೊಂಡ ಸಚಿವೆ ಮರಿಯಮ್ ಶಿಯುನಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಭಾರತದ ರಾಷ್ಟ್ರಧ್ವಜವನ್ನು ಅವಮಾನಿಸುವ ಚಿತ್ರವನ್ನು ಹಂಚಿಕೊಂಡಿದ್ದರು. ಬಳಿಕ ಇದು ವಿವಾದಕ್ಕೆ ಕಾರಣವಾಗಿತ್ತು.

Advertisement

ಶಿಯುನಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷ ಮುಯಿಝುಗೆ ಒತ್ತಾಯಿಸಿದರು. ಗಲಾಟೆಯ ನಂತರ, ಶಿಯುನಾ ಕ್ಷಮೆಯಾಚಿಸುವ ಮೊದಲು ಪೋಸ್ಟ್ ಅನ್ನು ಅಳಿಸಿದ್ದಾರೆ. ನಂತರ ಸಚಿವೆ ಈ ಕುರಿತಂತೆ ಕ್ಷಮೆಯಾಚಿಸಿದ್ದಾರೆ.

ಮರಿಯಮ್ ಶಿಯುನಾ ಮಾಲ್ಡೀವ್ಸ್​ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಆಡಳಿತ ಪಕ್ಷಕ್ಕೆ ಸೇರಿದವರು.

Advertisement

ನನ್ನ ಪೋಸ್ಟ್​ನಿಂದಾದ ಗೊಂದಲಕ್ಕಾಗಿ ನಾನು ಕ್ಷಮೆಯಚಿಸುತ್ತೇನೆ ಎಂದು ಎಕ್ಸ್​ನಲ್ಲಿ ಬರೆದಿದ್ದಾರೆ. 2024ರ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪ ಭೇಟಿ ನಂತರ ಮಾಲ್ಡೀವ್ಸ್​ ಸಚಿವರು ನರೇಂದ್ರ ಮೋದಿಯವರ ಕುರಿತು ಅವಹೇಳನಕಾರಿ ಹೇಳಿಕೆಯನ್ನು ನೀಡಿದ ಬಳಿಕ ಕಲಹದ ನಡುವೆ ಈ ಘಟನೆ ನಡೆದಿದೆ.

Advertisement
Tags :
Advertisement