ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಲಕ್ಷದ್ವೀಪವನ್ನು ಲೇವಡಿ ಮಾಡಿದ ಮಾಲ್ಡೀವ್ಸ್​ ಸಚಿವ: ಭಾರತೀಯರ ತಿರುಗೇಟು

ಪ್ರಧಾನಿ ಮೋದಿ ಲಕ್ಷದ್ವೀಪ ಭೇಟಿ ಕುರಿತು ಲೇವಡಿ ಮಾಡಿದ್ದ ಮಾಲ್ಡೀವ್ಸ್​ ಸಚಿವರಿಗೆ ಭಾರತೀಯರು ತಿರುಗೇಟು ನೀಡಿದ್ದಾರೆ.
02:57 PM Jan 07, 2024 IST | Ashika S

ಬೆಂಗಳೂರು: ಪ್ರಧಾನಿ ಮೋದಿ ಲಕ್ಷದ್ವೀಪ ಭೇಟಿ ಕುರಿತು ಲೇವಡಿ ಮಾಡಿದ್ದ ಮಾಲ್ಡೀವ್ಸ್​ ಸಚಿವರಿಗೆ ಭಾರತೀಯರು ತಿರುಗೇಟು ನೀಡಿದ್ದಾರೆ.

Advertisement

ಪ್ರಧಾನಿ ಮೋದಿಯವರ ಲಕ್ಷದ್ವೀಪ ಭೇಟಿಯ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭಾರತದಲ್ಲಿ ಮಾಲ್ಡೀವ್ಸ್ ಮತ್ತು ಲಕ್ಷದ್ವೀಪಗಳ ನಡುವಿನ ಹೋಲಿಕೆಗಳು ಪ್ರಾರಂಭವಾಗಿದ್ದವು.

ಮಾಲ್ಡೀವ್ಸ್​ ಸಚಿವ ಅಬ್ದುಲ್ಲಾ ಮೊಹ್ಜುಮ್ ಮಜೀಸ್ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಂಚಿಕೊಂಡಿದ್ದು, ಮಾಲ್ಡೀವ್ಸ್​ ಹಾಗೂ ಭಾರತದ ಪ್ರವಾಸೋದ್ಯಮಕ್ಕೆ ಹೋಲಿಕೆ ಮಾಡಿದ್ದಾರೆ, ಭಾರತಕ್ಕಿಂತ ಅಲ್ಲಿ ರೆಸಾರ್ಟ್​ನಿಂದ ಹಿಡಿದು ಎಲ್ಲಾ ಮೂಲಸೌಕರ್ಯಗಳು ಹೆಚ್ಚು ಎಂದು ಬರೆದುಕೊಂಡಿದ್ದರೆ. ಮತ್ತೊಬ್ಬ ನಾಯಕ ಜಾಹಿದ್ ರಮೀಜ್ ಪೋಸ್ಟ್​ ಮಾಡಿದ್ದು, ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸುವ ಬಗ್ಗೆ ಮಾತನಾಡಿದ್ದು, ಖಂಡಿತವಾಗಿಯೂ ಮೋದಿಯವರದ್ದು ಉತ್ತಮ ಹೆಜ್ಜೆ, ಆದರೆ ನಮ್ಮೊಂದಿಗೆ ಸ್ಪರ್ಧಿಸುವುದು ಭ್ರಮೆ. ನಮ್ಮಂತಹ ಸೇವೆಯನ್ನು ಒದಗಿಸುವುದು ಸಾಧ್ಯವೇ ಎಂದು ಬರೆದಿದ್ದಾರೆ.

Advertisement

ಇಂತಹ ಹೇಳಿಕೆಯಿಂದಾಗಿ ಇದೀಗ ಎಕ್ಸ್​ನಲ್ಲಿ #Boycott Maldives ಅಭಿಯಾನ ಶುರುವಾಗಿದೆ.

ಪ್ರವಾಸೋದ್ಯಮವನ್ನು ಅವಲಂಬಿಸಿರುವ ಮಾಲ್ಡೀವ್ಸ್‌ಗೆ ಭಾರತದ ಶಕ್ತಿಯ ಬಗ್ಗೆ ತಿಳಿದಿಲ್ಲ ಎಂದು ಭಾರತೀಯರು ಹೇಳುತ್ತಿದ್ದಾರೆ. ಮಾಲ್ಡೀವ್ಸ್ ಪ್ರವಾಸವನ್ನು ರದ್ದುಗೊಳಿಸಿದ ನಂತರ ಲಕ್ಷದ್ವೀಪಕ್ಕೆ ಆದ್ಯತೆ ನೀಡುವವರು ಅನೇಕರಿದ್ದಾರೆ.

Advertisement
Tags :
LatetsNewsNewsKannadaಪ್ರಧಾನಿ ಮೋದಿಭಾರತೀಯಮಾಲ್ಡೀವ್ಸ್ಲಕ್ಷದ್ವೀಪಲೇವಡಿ
Advertisement
Next Article