For the best experience, open
https://m.newskannada.com
on your mobile browser.
Advertisement

ಮೋದಿಯನ್ನು ಲೇವಡಿ ಮಾಡಿದ್ದ ಸಚಿವನಿಂದ ಜೈಶಂಕರ್​ಗೆ ʼಬರ್ತ್​​ಡೇ ವಿಶ್ʼ ಬಟರಿಂಗ್

ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿರೋದನ್ನು ಗುರಿಯಾಗಿಸಿಕೊಂಡು ಭಾರತವನ್ನು ಟಾರ್ಗೆಟ್ ಮಾಡಿ ಕಮೆಂಟ್ ಮಾಡಿ ಭಾರತೀಯರಿಂದ ಮಾತಿನ ಏಟು ತಿಂದ ಮಾಲ್ಡೀವ್ಸ್ ರಾಜಕಾರಣಿ ಜಹಿದ್ ರಮೀಝ್ ಮತ್ತೆ ಸುದ್ದಿಯಲ್ಲಿದ್ದಾರೆ. ಇಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್​.ಜೈಶಂಕರ್​ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುವ ಮೂಲಕ ಬಟರಿಂಗ್ ಕೆಲಸ ಮಾಡಿದ್ದಾರೆ.
04:30 PM Jan 09, 2024 IST | Ashitha S
ಮೋದಿಯನ್ನು ಲೇವಡಿ ಮಾಡಿದ್ದ ಸಚಿವನಿಂದ ಜೈಶಂಕರ್​ಗೆ ʼಬರ್ತ್​​ಡೇ ವಿಶ್ʼ ಬಟರಿಂಗ್

ದೆಹಲಿ: ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿರೋದನ್ನು ಗುರಿಯಾಗಿಸಿಕೊಂಡು ಭಾರತವನ್ನು ಟಾರ್ಗೆಟ್ ಮಾಡಿ ಕಮೆಂಟ್ ಮಾಡಿ ಭಾರತೀಯರಿಂದ ಮಾತಿನ ಏಟು ತಿಂದ ಮಾಲ್ಡೀವ್ಸ್ ರಾಜಕಾರಣಿ ಜಹಿದ್ ರಮೀಝ್ ಮತ್ತೆ ಸುದ್ದಿಯಲ್ಲಿದ್ದಾರೆ. ಇಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್​.ಜೈಶಂಕರ್​ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುವ ಮೂಲಕ ಬಟರಿಂಗ್ ಕೆಲಸ ಮಾಡಿದ್ದಾರೆ.

Advertisement

ಹೌದು. . ಇಂದು ಜೈಶಂಕರ್ ಅವರು 69ನೇ ವರ್ಷಕ್ಕೆ ಇಂದು ಕಾಲಿಟ್ಟಿದ್ದಾರೆ. ತಮಗೆ ಆಗಿರುವ ಡ್ಯಾಮೇಜ್​​ ಪ್ಯಾಚಪ್ ಮಾಡಲು ಯತ್ನಿಸಿರುವ ಮಾಲ್ಡೀವ್ಸ್​ ನಾಯಕ ರಮೀಝ್ ಎಕ್ಸ್​ ಖಾತೆಯಲ್ಲಿ ಶುಭಾಶಯ ಕೋರಿದ್ದಾರೆ. ಇದು ಸಚಿವರ ಗಿಮಿಕ್‌ ಎಂದು ನೆಟ್ಟಿಗರು ತಿರುಗೇಟು ಕೊಟ್ಟಿದ್ದಾರೆ.

ʼಗೌರವಾನ್ವಿತ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್​.ಜೈಶಂಕರ್​​ಗೆ ಹುಟ್ಟುಹಬ್ಬದ ಶುಭಾಶಯಗಳು. ಯಶಸ್ವಿ ಮತ್ತು ಸಕರಾತ್ಮಕ ರಾಜತಾಂತ್ರಿಕ ಪ್ರಯತ್ನಗಳು ನಿಮ್ಮದಾಗಲಿʼ ಎಂದು ವಿಶ್ ಮಾಡಿದ್ದಾರೆ. ಇಲ್ಲಿ ಗಮನಿಸ ಬೇಕಾದ ಇನ್ನೊಂದು ವಿಚಾರವಿಂದರೇ ಪ್ರಧಾನಿ ಮೋದಿ ಜೈಶಂಕರ್​ಗೆ ವಿಶ್​ ಮಾಡಿದ್ದರು. ಅದನ್ನು ಜೈಶಂಕರ್ ರೀಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದರು. ಜೈಶಂಕರ್​ ಮೋದಿಗೆ ಕೊಟ್ಟಿದ್ದ ರಿಪ್ಲೈ ಟ್ವೀಟ್​ ಅನ್ನು ರೀಟ್ವೀಟ್ ಮಾಡಿ ಶುಭಾಶಯ ಕೋರಿದ್ದಾರೆ. ಇದನ್ನು ಗಮನಿಸಿರುವ ನೆಟ್ಟಿಗರು ಜೈಶಂಕರ್​ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುವ ಮೂಲಕ ಬಟರಿಂಗ್ ಕೆಲಸ ಮಾಡಿದ್ದಾರೆ. ತನ್ನ ತಪ್ಪನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಸದ್ಯ ಈ ಒಂದು ಟ್ವೀಟ್‌ ಈಗ ಸಕತ್‌ ವೈರಲ್‌ ಆಗ್ತಿದೆ.

Advertisement

ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಮೂವರು ಸಚಿವರನ್ನು ಮಾಲ್ಡೀವ್ಸ್ ಸರ್ಕಾರ ಅಮಾನತು ಮಾಡಿದೆ. ನಮ್ಮ ಸಚಿವರ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಜತೆಗೆ ಮೂವರು ಸಚಿವರನ್ನು ವಜಾಗೊಳಿಸಿದ್ದೇವೆ ಎಂದು ಸರ್ಕಾರ ತಿಳಿಸಿದೆ.

Advertisement
Tags :
Advertisement