ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮಲ್ಪೆ: ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆ, 8 ಮೀನುಗಾರರ ರಕ್ಷಣೆ - ಲಕ್ಷಾಂತರ ರೂ. ನಷ್ಟ

ಮೀನುಗಾರಿಕೆಗೆ ತೆರಳಿದ ಆಳಸಮುದ್ರ ಬೋಟೊಂದು ಮುಳುಗಡೆಗೊಂಡಿದ್ದು, ಅದರಲ್ಲಿದ್ದ 8 ಮಂದಿ ಮೀನುಗಾರರನ್ನು ಬೇರೆ ಬೋಟಿನವರು ರಕ್ಷಿಸಿದ್ದಾರೆ.
04:44 PM Dec 22, 2023 IST | Ramya Bolantoor

ಉಡುಪಿ: ಮೀನುಗಾರಿಕೆಗೆ ತೆರಳಿದ ಆಳಸಮುದ್ರ ಬೋಟೊಂದು ಮುಳುಗಡೆಗೊಂಡಿದ್ದು, ಅದರಲ್ಲಿದ್ದ 8 ಮಂದಿ ಮೀನುಗಾರರನ್ನು ಬೇರೆ ಬೋಟಿನವರು ರಕ್ಷಿಸಿದ್ದಾರೆ.

Advertisement

ಕಡೆಕಾರು ರಕ್ಷಾ ಅವರಿಗೆ ಬೋಟು ಮಲ್ಪೆ ಬಂದರಿನಿಂದ ತೆರಳಿತ್ತು. ಮೀನುಗಾರಿಕೆ ನಡೆಸುವಾಗ ನೀರಿನಡಿಯಲ್ಲಿದ್ದ ಯಾವುದೋ ವಸ್ತು ಬೋಟ್‌ನ ತಳ ಒಡೆದು ನೀರು ನುಗ್ಗಲಾರಂಭಿಸಿತು. ತತ್ ಕ್ಷಣ ಬೋಟಿನ ತಂಡೇಲ ವಯರ್ ಲೆಸ್ ಮೂಲಕ ಇತರ ಬೋಟ್ ಗಳಿಗೆ ಸಂದೇಶ ನೀಡಿದರು.

ಶ್ರೀ ಮೂಕಾಂಬಿಕಾ ಅನುಗ್ರಹ ಬೋಟಿನವನರು ಧಾವಿಸಿ ಬಂದು ಮುಳುಗುತ್ತಿರುವ ಬೋಟನ್ನು ಮೇಲೆಳೆಯಲು ಯತ್ನಿಸಿದರು. ನೀರಿನ ಅಬ್ಬರ ಜಾಸ್ತಿಯಾಗಿದ್ದರಿಂದ ಪ್ರಯತ್ನ ಫಲ ನೀಡಲಿಲ್ಲ. ರಾತ್ರಿ ವೇಳೆಗೆ ಬೋಟ್ ಪೂರ್ಣ ಮುಳುಗಡೆಗೊಂಡಿತು. ಅದರಲ್ಲಿದ್ದ ಮೀನುಗಾರರನ್ನು ಮೂಕಾಂಬಿಕಾ ಬೋಟಿನವರು ದಡಕ್ಕೆ ಸೇರಿಸಿದ್ದಾರೆ. ಘಟನೆಯಿಂದ ಸುಮಾರು 18 ಲ.ರೂ. ನಷ್ಟ ಅಂದಾಜಿಸಲಾಗಿದೆ.

Advertisement

Advertisement
Tags :
LatestNewsNewsKannadaಉಡುಪಿಮಲ್ಪೆ
Advertisement
Next Article