For the best experience, open
https://m.newskannada.com
on your mobile browser.
Advertisement

ಚಿತ್ರದುರ್ಗದಲ್ಲಿ ವ್ಯಕ್ತಿ ಮೇಲೆ ಆ್ಯಸಿಡ್ ದಾಳಿ

ಜಿಲ್ಲೆಯ ಹಿರಿಯೂರು ಪಟ್ಟಣದ ಖಾಸಗಿ ಡಾಬಾ ಬಳಿ ವ್ಯಕ್ತಿಯೋರ್ವನ ಮೇಲೆ ಆ್ಯಸಿಡ್ ದಾಳಿ ನಡೆದಿದೆ.
09:32 AM Jan 17, 2024 IST | Gayathri SG
ಚಿತ್ರದುರ್ಗದಲ್ಲಿ ವ್ಯಕ್ತಿ ಮೇಲೆ ಆ್ಯಸಿಡ್ ದಾಳಿ

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ಪಟ್ಟಣದ ಖಾಸಗಿ ಡಾಬಾ ಬಳಿ ವ್ಯಕ್ತಿಯೋರ್ವನ ಮೇಲೆ ಆ್ಯಸಿಡ್ ದಾಳಿ ನಡೆದಿದೆ.

Advertisement

ಆ್ಯಸಿಡ್ ದಾಳಿಗೆ ಒಳಗಾದ ವ್ಯಕ್ತಿಯನ್ನು ಹೊಳಲ್ಕೆಯ ಅರುಣ್ ಕುಮಾರ್ ಎಂದು ಗುರುತಿಸಲಾಗಿದೆ. ಇವರು ಹಿರಿಯೂರು ಬಳಿ ಊಟಕ್ಕೆಂದು ಡಾಬಾ ಬಳಿ ನಿಂತಿದ್ದ ವೇಳೆ ಬಂದ ಇಬ್ಬರು ದುಷ್ಕರ್ಮಿಗಳು ಆ್ಯಸಿಡ್ ಎರಚಿ ಪರಾರಿಯಾಗಿದ್ದಾರೆ.

ಆ್ಯಸಿಡ್​ನಿಂದ ಕೈ ಮತ್ತು ಮುಖಕ್ಕೆ ಸುಟ್ಟಂತ ಗಾಯಗಳಾಗಿದ್ದು, ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಬೆಂಗಳೂರಿನ ಖಾಸಗಿ ಬಂಕ್​​​​ನಲ್ಲಿ ಮ್ಯಾನೇಜರ್ ಆಗಿರುವ ಅರುಣ್ ನಿನ್ನೆ ರಾಜಹಂಸ ಬಸ್​​ನಲ್ಲಿ ಚಿತ್ರದುರ್ಗದಿಂದ ಬೆಂಗಳೂರು ತೆರಳುತ್ತಿದ್ದರು. ಆದ್ರೆ, ಬಸ್ ನಿಂತಾಗ ವಾಶ್ ರೂಮ್​ಗೆ ಹೋಗಿ ಬರುವಾಗ ದುಷ್ಕರ್ಮಿಗಳು ಆ್ಯಸಿಡ್ ದಾಳಿ ನಡೆಸಿದ್ದಾರೆ.

Advertisement
Tags :
Advertisement