For the best experience, open
https://m.newskannada.com
on your mobile browser.
Advertisement

ಓದಿನ ಕಡೆ ಗಮನ ಕೊಡು ಎಂದು ಹೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಯುವಕ

ಕ್ರೀಡೆಗೆ ಆಸಕ್ತಿ ಕಡಿಮೆ ಕೊಟ್ಟು, ಓದಿನ ಕಡೆ ಗಮನಹರಿಸು’ ಎಂದು ಪೋಷಕರು ಹೇಳಿದ್ದಕ್ಕೆ ಯುವಕನೋರ್ವ ಆತ್ಮಹತ್ಯೆ  ಮಾಡಿಕೊಂಡ ಘಟನೆ ಧಾರವಾಡದ ಸಾಧನಕೇರಿಯಲ್ಲಿ ನಡೆದಿದೆ.
03:58 PM Feb 07, 2024 IST | Ashika S
ಓದಿನ ಕಡೆ ಗಮನ ಕೊಡು ಎಂದು ಹೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಯುವಕ

ಧಾರವಾಡ: ಕ್ರೀಡೆಗೆ ಆಸಕ್ತಿ ಕಡಿಮೆ ಕೊಟ್ಟು, ಓದಿನ ಕಡೆ ಗಮನಹರಿಸು’ ಎಂದು ಪೋಷಕರು ಹೇಳಿದ್ದಕ್ಕೆ ಯುವಕನೋರ್ವ ಆತ್ಮಹತ್ಯೆ  ಮಾಡಿಕೊಂಡ ಘಟನೆ ಧಾರವಾಡದ ಸಾಧನಕೇರಿಯಲ್ಲಿ ನಡೆದಿದೆ.

Advertisement

ಮೃತನನ್ನು ಫುಟ್​​ಬಾಲ್​​ ಆಟಗಾರ ಚೇತನ್ ತೊಂಡಿಹಾಳ ಎಂದು ಗುರುತಿಸಲಾಗಿದೆ.

ಈತ ನಗರದ ಕಲಗೇರಿ ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಳ್ಳೆಯ ಫುಟ್ಬಾಲ್ ಪ್ಲೇಯರ್  ಆಗಿದ್ದ ಈತನಿಗೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದನು.

Advertisement

ನಾಲ್ಕು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಚೇತನ್, ಅದರಿಂದ ಹೊರ ಬರಲಾಗದೇ ಒದ್ದಾಡುತ್ತಿದ್ದನು. ಆತನ ಕುಟುಂಬಸ್ಥರು ಆತನಿಗೆ ಬೆಂಗಳೂರಿನ ಮಾನಸಿಕ ಆಸ್ಪತ್ರೆಯಲ್ಲೂ ಚಿಕಿತ್ಸೆ ಕೊಡಿಸಿದ್ದರು.

ಚೇತನ್ ತನಗಿಷ್ಟ ಬಂದಂತೆ ಇರಲಿ ಎಂದು ನಾವು ಒತ್ತಡ ಹಾಕಿರಲಿಲ್ಲ. ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಆತನಿಗೆ ಚಿಕಿತ್ಸೆ ಸಹ ಕೊಡಿಸಿದ್ದೆವು. ಆದರೆ ಆತ ಮನೆ ಬಿಟ್ಟು ಹೊರಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಚೇತನ್ ಪೋಷಕರು ಇದೀಗ ಕಣ್ಣೀರು ಹಾಕುತ್ತಿದ್ದಾರೆ.

ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821

Advertisement
Tags :
Advertisement