ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ವಿಚ್ಛೇದನದ ವೇಳೆ ಕಿಡ್ನಿ ವಾಪಸ್ ಕೇಳಿದ ಪತಿರಾಯ

ಇದೇನಪ್ಪ ವಿಚಿತ್ರ ಅಂತಿರಾ! ಇಲ್ಲಿದೆ ಮಾಹಿತಿ,2001 ರಲ್ಲಿ ತನ್ನ ಪತ್ನಿಯ ಜೀವ ಉಳಿಸುವ ಉದ್ದೇಶದಿಂದ ತನ್ನ ಒಂದು ಕಿಡ್ನಿಯನ್ನ ದಾನ ಮಾಡಿದ್ದ. ಆದರೆ ಕೆಲವೇ ವರ್ಷಗಳಲ್ಲಿ ಪತ್ನಿ ವಿಚ್ಛೇದನಕ್ಕೆ ಕೋರ್ಟ್‌ನಲ್ಲಿ ಅರ್ಜಿಸಲ್ಲಿಸಿದ್ದಳು.ಇದನ್ನು ತಿಳಿದು ಕೋಪಗೊಂಡ ಪತಿ ತನ್ನ ಕಿಡ್ನಿ ವಾಪಸ್‌ ಕೇಳಿದ್ದಾನೆ. ಈ ಘಟನೆ ಅಮೆರಿಕಾದಲ್ಲಿ ನಡೆದಿದ್ದು ವಿಚ್ಛೇದನ ವೇಳೆ ಪತಿ ತನ್ನ ಕಿಡ್ನಿ ಹಿಂತಿರಿಗಿಸುವಂತೆ ಕೋರ್ಟ್‌ಗೆ ಬೇಡಿಕೆ ಇಟ್ಟಿದ್ದಾನೆ.
05:11 PM Feb 21, 2024 IST | Ashitha S

ಅಮೆರಿಕಾ: ಇದೇನಪ್ಪ ವಿಚಿತ್ರ ಅಂತಿರಾ! ಇಲ್ಲಿದೆ ಮಾಹಿತಿ,2001 ರಲ್ಲಿ ತನ್ನ ಪತ್ನಿಯ ಜೀವ ಉಳಿಸುವ ಉದ್ದೇಶದಿಂದ ತನ್ನ ಒಂದು ಕಿಡ್ನಿಯನ್ನ ದಾನ ಮಾಡಿದ್ದ. ಆದರೆ ಕೆಲವೇ ವರ್ಷಗಳಲ್ಲಿ ಪತ್ನಿ ವಿಚ್ಛೇದನಕ್ಕೆ ಕೋರ್ಟ್‌ನಲ್ಲಿ ಅರ್ಜಿಸಲ್ಲಿಸಿದ್ದಳು.ಇದನ್ನು ತಿಳಿದು ಕೋಪಗೊಂಡ ಪತಿ ತನ್ನ ಕಿಡ್ನಿ ವಾಪಸ್‌ ಕೇಳಿದ್ದಾನೆ. ಈ ಘಟನೆ ಅಮೆರಿಕಾದಲ್ಲಿ ನಡೆದಿದ್ದು ವಿಚ್ಛೇದನ ವೇಳೆ ಪತಿ ತನ್ನ ಕಿಡ್ನಿ ಹಿಂತಿರಿಗಿಸುವಂತೆ ಕೋರ್ಟ್‌ಗೆ ಬೇಡಿಕೆ ಇಟ್ಟಿದ್ದಾನೆ.

Advertisement

ಇದಲ್ಲದೆ ಕಿಡ್ನಿ ವಾಪಸ್‌ ಕೊಡಲು ಆಗದಿದ್ದಲ್ಲಿ 1.2 ಮಿಲಿಯನ್ ಪೌಂಡ್‌ ಕೊಡಬೇಕಾಗಿ ಬೇಡಿಕೆ ಇಟ್ಟಿದ್ದಾನೆ. ಡೈಲಿ ಸ್ಟಾರ್‌ ವರದಿ ತಿಳಿಸಿರುವಂತೆ 1990 ರಲ್ಲಿ ಮದುವೆಯಾಗಿದ್ದ ದಂಪತಿ ರಿಚರ್ಡ್ ಬಟಿಸ್ಟಾ(ಪತಿ) ಮತ್ತು ಡೊನ್ನೆಲ್ (ಪತ್ನಿ) ಇವರಿಗೆ 3 ಮಕ್ಕಳಿದ್ದಾರೆ. ಆದರೆ 2001 ರಲ್ಲಿ ಅನಾರೋಗ್ಯದಿಂದ ಬಳಲುತಿದ್ದ ಡೊನ್ನೆಲ್ಲ್‌ಗೆ ಎರಡೂ ಕಿಡ್ನಿ ವಿಫಲವಾದ ಕಾರಣ ಪತಿ ಬಟಿಸ್ಟಾ ತನ್ನ ಒಂದು ಕಿಡ್ನಿ ಆಕಗೆ ನೀಡಿದ್ದ.

ಇದಾದ ಕೆಲವೇ ವರ್ಷಗಳಲ್ಲಿ ಇಬ್ಬರ ನಡುವೆ ಭಿನ್ನಾಬಿಪ್ರಾಯ ಬಂದಿರುವ ಕಾರಣ ಡೊನ್ನೆಲ್‌ ವಿಚ್ಛೇದಕ್ಕೆ ಅರ್ಜಿಸಲ್ಲಿಸಿದ್ದಳು ಇದರಿಂದ ನೊಂದ ಪತಿ ಕಿಡ್ನಿ ಅಥವಾ ಹಣವನ್ನು ವಾಪಸ್‌ ನೀಡಬೆಕಾಗಿ ಹೇಳಿದ್ದಾನೆ. ಆದರೆ ಕಿಡ್ನಿ ವಾಪಸ್‌ ನೀಡಲು ಸಾಧ್ಯವಿಲ್ಲ ಎಂದು ತಜ್ಞ ವೈದ್ದಯರು ಸ್ಪಷ್ಟಪಡಿಸಿದ್ದಾರೆ. ಪುನ: ಶಸ್ತ್ರಚಕಿತ್ಸೆಗೆ ಒಳಪಡಿಸಿ ಕಿಡ್ನಿ ಹಿಂತಿರುಗಿಸುವುದರಿಂದ ಆಕೆಯ ಪ್ರಾಣಕ್ಕೆ ಅಪಾಯ ಇರುವ ಕಾರಣ ಕಿಡ್ನಿ ಮರಳಿ ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್‌ ತೀರ್ಪು ನೀಡಿದೆ.

Advertisement

 

Advertisement
Tags :
COURTDIVORCEFAMILYindiaLatestNewsNewsKannadaViral Newsಕಿಡ್ನಿ
Advertisement
Next Article