ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬೆಂಗಳೂರಲ್ಲಿ ಚಿಂದಿ ಆಯ್ತಿದ್ದವನಿಗೆ ಸಿಕ್ತು 2.5 ಮಿಲಿಯನ್ ಡಾಲರ್ ನೋಟುಗಳು

ಕಳೆದ ಭಾನುವಾರ ರೈಲ್ವೇ ಹಳಿ ಪಕ್ಕದ ಪೊದೆಯಲ್ಲಿ 2.5 ಮಿಲಿಯನ್ ಡಾಲರ್ ಚಿಂದಿ ಆಯ್ತಿದ್ದವನಿಗೆ ಸಿಕ್ಕಿದ್ದು, ಇದೀಗ ಡಾಲರ್ ಬಾಕ್ಸ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
02:12 PM Nov 09, 2023 IST | Ashika S

ಬೆಂಗಳೂರು: ಕಳೆದ ಭಾನುವಾರ ರೈಲ್ವೇ ಹಳಿ ಪಕ್ಕದ ಪೊದೆಯಲ್ಲಿ 2.5 ಮಿಲಿಯನ್ ಡಾಲರ್ ಚಿಂದಿ ಆಯ್ತಿದ್ದವನಿಗೆ ಸಿಕ್ಕಿದ್ದು, ಇದೀಗ ಡಾಲರ್ ಬಾಕ್ಸ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

Advertisement

ಚಿಂದಿ ಆಯ್ತಿದ್ದವನಿಗೆ ರೈಲ್ವೇ ಹಳಿ ಪಕ್ಕದ ಪೊದೆಯಲ್ಲಿ 2.5 ಮಿಲಿಯನ್ ಯುಎಸ್ ಡಾಲರ್ ಸಿಕ್ಕಿತ್ತು ಬಳಿಕ ಆತ ಈ ವಿಚಾರವನ್ನು ತನ್ನ ಮಾಲೀಕನಿಗೆ ತಿಳಿಸಿದ್ದನು. ಮತ್ತೋರ್ವ ವ್ಯಕ್ತಿ ಕೂಡ ಇದನ್ನು ಕಂಡು ಕಮಿಷನರ್​ಗೆ ಮಾಹಿತಿ ಹಂಚಿಕೊಂಡಿದ್ದನು. ಕೂಡಲೇ ಪೊದೆಯಲ್ಲಿ ಸಿಕ್ಕ ಹಣದ ಬಗ್ಗೆ ಹೆಬ್ಬಾಳ ಠಾಣೆಗೆ ಮಾಹಿತಿ ರವಾನಿಸಲಾಗಿದೆ.

ಇನ್ನು ವಶಕ್ಕೆ ಪಡೆದ ಡಾಲರ್ಸ್ ಜೊತೆ ವಿಶ್ವ ಸಂಸ್ಥೆಯ ಲೆಟರ್ ಹೆಡ್​ನಲ್ಲಿರೋ ಪತ್ರವೊಂದು ಸಿಕ್ಕಿದ್ದು, ಅಮೆರಿಕದಿಂದ ಅಭಿವೃದ್ಧಿಗಾಗಿ ಕಳುಹಿಸಲಾದ ಹಣ ಇದು ಎಂದು ಹೇಳಲಾಗುತ್ತಿದೆ. ಮಾತ್ರವಲ್ಲದೆ, ಸಿಕ್ಕ ಪತ್ರದಲ್ಲಿ ಮಿಲಿಯನ್ಸ್ ಆಫ್ ಡಾಲರ್ಸ್ ಬಗ್ಗೆ ಗೌಪ್ಯತೆ ಕಾಪಾಡಿ ಎಂದು ಉಲ್ಲೇಖಿಸಲಾಗಿದೆ.

Advertisement

ಈ ವಿಚಾರಣೆಗೆ ಸಂಬಂಧಿಸಿದಂತೆ ಸತ್ಯ ಹುಡುಕಲು ಹೆಬ್ಬಾಳ ಪೊಲೀಸರು ಆರ್‌ ಬಿ ಐ ಗೆ ಪತ್ರ ಬರೆದಿರುವುದಾಗಿ ತಿಳಿದು ಬಂದಿದೆ.

Advertisement
Tags :
LatetsNewsNewsKannadaಡಾಲರ್ಪೊದೆಪ್ರಕರಣಬಾಕ್ಸ್ಮಿಲಿಯನ್ ಡಾಲರ್ರೈಲ್ವೇ ಹಳಿ
Advertisement
Next Article