For the best experience, open
https://m.newskannada.com
on your mobile browser.
Advertisement

ಬಾಲಕನನ್ನು ಕಚ್ಚಿದ ನಾಯಿಯನ್ನು ಕೊಂದು ತಿಂದ ಭೂಪ

ತನ್ನ ಸೋದರಳಿಯನಿಗೆ ಕಚ್ಚಿದ ಸಾಕುನಾಯಿಯನ್ನು ವ್ಯಕ್ತಿಯೊಬ್ಬ ಕೊಂದು ತಿಂದ ಘಟನೆ ಥೈಲ್ಯಾಂಡಿನಲ್ಲಿ ನಡೆದಿದ್ದು, ಇದರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
07:25 PM May 02, 2024 IST | Maithri S
ಬಾಲಕನನ್ನು ಕಚ್ಚಿದ ನಾಯಿಯನ್ನು ಕೊಂದು ತಿಂದ ಭೂಪ

ಬ್ಯಾಂಕಾಕ್:‌ ತನ್ನ ಸೋದರಳಿಯನಿಗೆ ಕಚ್ಚಿದ ಸಾಕುನಾಯಿಯನ್ನು ವ್ಯಕ್ತಿಯೊಬ್ಬ ಕೊಂದು ತಿಂದ ಘಟನೆ ಥೈಲ್ಯಾಂಡಿನಲ್ಲಿ ನಡೆದಿದ್ದು, ಇದರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

Advertisement

ಕೃತ್ಯ ಎಸಗಿದವನನ್ನು ೪೨ ವರ್ಷದ ಸಾಂಗ್‌ವುಟ್‌ ಚುಥಾಂಗ್‌ ಎಂದು ಗುರುತಿಸಲಾಗಿದೆ. ತನ್ನ ನಾಯಿಯನ್ನು ಕೊಂದು ತಿಂದ ಇವನ ವಿರುದ್ಧ ವಾಚ್‌ಡಾಗ್‌ ಥಾಯ್ಲೆಂಡ್‌ ಫೌಂಡೇಶನ್‌ ಸಿಸಿಟಿವಿ ದೃಶ್ಯಾವಳಿಗಳ ಸಮೇತ ದೂರು ನೀಡಿದೆ.

ಆರೋಪಿ ೧೦ ವರ್ಷದ ಸಾಕುನಾಯಿಯನ್ನು ಅತಿ ಕ್ರೂರವಾಗಿ ಕೊಂದು ಗೋಣಿಚೀಲದಲ್ಲಿ ತುಂಬಿಕೊಂಡು ಹೋಗಿರುವುದನ್ನು ವೀಡಿಯೋದಲ್ಲಿ ಕಾಣಬಹುದು. ಆತನನ್ನು ವಶಕ್ಕೆ ತೆಗೆದುಕೊಂಡ ಪೋಲಿಸ್‌ ವಿಚಾರಣೆ ನಡೆಸಿದಾಗ ನಾಯಿಯನ್ನು ತಿಂದಿರುವುದಾಗಿ ಹೇಳಿದ್ದಾನೆ. ಪರಿಶೀಲನೆ ನಡೆಸಿದಾಗ ಆರೋಪಿಯ ಮನೆಯ ಫ್ರಿಡ್ಜ್‌ನಲ್ಲಿ ನಾಯಿ ಮಾಂಸ ದೊರಕಿದೆ.

Advertisement

Advertisement
Tags :
Advertisement